Advertisement

ಮಹತ್ವದ ಬೆಳವಣಿಗೆ: ಬ್ಯಾನ್ ಆದ PUBG ಶೀಘ್ರದಲ್ಲಿ ವಾಪಾಸಾತಿ ? ಹೇಗೆ ಗೊತ್ತಾ ?

09:55 AM Sep 09, 2020 | Mithun PG |

ನವದೆಹಲಿ: ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯವಾಗಿದ್ದ ಪಬ್ ಜಿ ಗೇಮಿಂಗ್ ಬಳಕೆದಾರರಿಗೊಂದು ಶುಭಸುದ್ದಿ ಬಂದಿದೆ. ಕೊರಿಯಾ ಮೂಲದ ಪಬ್ ಜಿ ಕಾರ್ಪೋರೇಷನ್ ಇತ್ತೀಚಿನ ಬೆಳವಣಿಗೆಗಳ ಭಾಗವಾಗಿ, PUBG ಮೊಬೈಲ್ ಅನ್ನು ಇನ್ನು ಮುಂದೆ ಭಾರತದಲ್ಲಿ ಟೆನ್ಸೆಂಟ್ ಗೇಮ್ಸ್ ನಿಯಂತ್ರಿಸುವುದಿಲ್ಲ ಮತ್ತು ದಕ್ಷಿಣ ಕೊರಿಯಾ ಕಂಪನಿಯು ತನ್ನ ಎಲ್ಲಾ ಅಂಗಸಂಸ್ಥೆಗಳ ಸಂಪೂರ್ಣ ಉಸ್ತುವಾರಿ ವಹಿಸಲಿದೆ ಎಂದು ಪ್ರಕಟಿಸಿದೆ.

Advertisement

ಈ ಮಹತ್ವದ ಬೆಳವಣಿಗೆ ನಂತರ ದೇಶದಲ್ಲಿ ಪಬ್ ಜಿ ಮೇಲಿದ್ದ ನಿಷೇಧವನ್ನು ಹಿಂದಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕಳೆದ ವಾರ ಭಾರತದಲ್ಲಿ ಪಬ್ ಜಿ ಸೇರಿದಂತೆ ಚೀನಾ ಮೂಲದ 117 ಆ್ಯಪ್ ಗಳನ್ನು ಬ್ಯಾನ್ ಮಾಡಲಾಗಿತ್ತು. ಮಾತ್ರವಲ್ಲದೆ ಸರ್ಕಾರ ದೇಶದ ಸಾರ್ವಭೌಮತ್ವ, ಸಮಗ್ರತೆ, ಭಾರತದ ರಕ್ಷಣೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಈ ಆ್ಯಪ್ ಗಳು ಧಕ್ಕೆ ತರುತ್ತಿವೆ ಎಂದು ತಿಳಿಸಿತ್ತು.

ಭಾರತ ಸರ್ಕಾರ ಬಳಕೆದಾರರ ಡೇಟಾ ಕಳುವಾಗದಂತೆ ತೆಗೆದುಕೊಂಡ ನಿರ್ಧಾರವನ್ನು ಪಬ್ ಜಿ ಕಾರ್ಪೋರೇಷನ್ ಗೌರವಿಸುತ್ತದೆ. ಇದೀಗ ಮತ್ತೊಮ್ಮೆ ಭಾರತದ ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿರಿಸಿಕೊಂಡು ಬಳಕೆದಾರರಿಗೆ ಮನೋರಂಜನೆ ನೀಡಲು ಬಯಸುತ್ತೇವೆ. ಇದರ ಮೊದಲ ಭಾಗವಾಗಿ ಭಾರತದಲ್ಲಿ ಪಬ್ ಜಿ ಮೊಬೈಲ್ ಪ್ರಾಂಚೈಸ್ ಹೊಂದಿದ್ದ ಚೀನಾದ ಟೆನ್ಸೆಂಟ್ ಗೇಮ್ ನಿಂದ ಅಧಿಕಾರವನ್ನು ಹಿಂಪಡೆಯಲಾಗಿದೆ. ಇನ್ನು ಮುಂದೆ ಎಲ್ಲಾ ಜವಬ್ದಾರಿಗಳನ್ನು ಪಬ್ ಜಿ ಕಾರ್ಪೋರೇಷನ್ ನಿಯಂತ್ರಿಸುತ್ತದೆ ಎಂದು ಕೊರಿಯಾ ಮೂಲದ ಈ ಸಂಸ್ಥೆ ತಿಳಿಸಿದೆ.

ಏತನ್ಮಧ್ಯೆ ಭಾರತದಲ್ಲಿ ಪಬ್ ಜಿ ಬ್ಯಾನ್ ಆಗಿದ್ದರೂ, ಈಗಾಗಲೇ ಇನ್ ಸ್ಟಾಲ್ ಆಗಿರುವ ಆ್ಯಪ್ ಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಹೊಸ ಬೆಳವಣಿಗೆ ಭಾರೀ ಕುತೂಹಲ ಕೆರಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next