Advertisement

ಪಿಯು ಪರೀಕ್ಷೆ ಸುಗಮ; 979 ಜನ ಗೈರು

03:50 PM Mar 02, 2018 | |

ರಾಯಚೂರು: ಜಿಲ್ಲಾದ್ಯಂತ ಗುರುವಾರದಿಂದ ದ್ವಿತೀಯ ಪಿಯು ಪರೀಕ್ಷೆ ಆರಂಭವಾಗಿದ್ದು, ಮೊದಲ ದಿನ ಅರ್ಥಶಾಸ್ತ್ರ, ಭೌತಶಾಸ್ತ್ರ ವಿಷಯಕ್ಕೆ ಪರೀಕ್ಷೆ ನಡೆಯಿತು.

Advertisement

ಅರ್ಥಶಾಸ್ತ್ರ ವಿಷಯದಲ್ಲಿ 11,638ರಲ್ಲಿ 10,797 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 841 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 3,348ರಲ್ಲಿ 3,210 ವಿದ್ಯಾರ್ಥಿಗಳು ಹಾಜರಿದ್ದು, 138 ವಿದ್ಯಾರ್ಥಿಗಳು ಗೈರಾದರು.

ಜಿಲ್ಲೆಯಲ್ಲಿ 34 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಒಂದೆರಡು ಕೇಂದ್ರ ಹೊರತಾಗಿಸಿ ಬಹುತೇಕ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ರಾಯಚೂರು-11, ಸಿಂಧನೂರು-7, ಮಾನವಿ-5, ಲಿಂಗಸುಗೂರು-8 ಮತ್ತು ದೇವದುರ್ಗ-3 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಎಲ್ಲೂ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿತ್ತು.

ರೂಟ್‌ ಅಧಿಕಾರಿಗಳ ವಾಹನಗಳಿಗೆ ಜಿಪಿಎಸ್‌ ಯಂತ್ರ ಅಳವಡಿಸುವ ಮೂಲಕ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸುವಾಗ ವಿಶೇಷ ನಿಗಾ ವಹಿಸಲಾಗಿತ್ತು. ವಾಹನವನ್ನು ಮಾರ್ಗ ಮಧ್ಯದಲ್ಲಿ ನಿಲ್ಲಿಸದೇ ನೇರವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲಾಯಿತು. ಪರೀಕ್ಷೆ ಮುಗಿದ ಬಳಿಕವೂ ನಂತರ ನಿಯೋಜಿತ ಪೊಲೀಸ್‌ ಸಿಬ್ಬಂದಿಯೊಂದಿಗೆ ಉತ್ತರ ಪತ್ರಿಕೆಗಳನ್ನು ಅಂಚೆ ಕಚೇರಿಗೆ ತಲುಪಿಸಲಾಯಿತು ಎಂದು ಡಿಡಿಪಿಯುವ ಮಾಧವ ಮಾದಗಿ ತಿಳಿಸಿದ್ದಾರೆ.

ದೇವದುರ್ಗ: 1,041 ವಿದ್ಯಾರ್ಥಿಗಳು ಹಾಜರು
ದೇವದುರ್ಗ: ಪಟ್ಟಣದ ಬಾಲಕಿಯರ, ಬಾಲಕರ ಮತ್ತು ಬಸವ ಪ್ರೌಢಶಾಲೆಯಲ್ಲಿ ನಡೆದ ಭೌತಶಾಸ್ತ್ರ ಮತ್ತು ಅರ್ಥಶಾಸ್ತ್ರ ವಿಷಯ ದ್ವಿತೀಯ ಪಿಯು ಪರೀಕ್ಷೆಗೆ 1041 ವಿದ್ಯಾರ್ಥಿಗಳು ಹಾಜರಾಗಿದ್ದರು. 

Advertisement

100 ವಿದ್ಯಾರ್ಥಿಗಳು ಗೈರಾಗಿದ್ದರು. ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ 36 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಅರ್ಥಶಾಸ್ತ್ರ ವಿಷಯ 390 ವಿದ್ಯಾರ್ಥಿಗಳು ಹಾಜರಾಗಿದ್ದರು. ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಅರ್ಥಶಾಸ್ತ್ರ 248 ವಿದ್ಯಾರ್ಥಿಗಳು, ಭೌತಶಾಸ್ತ್ರ 37 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬಸವ ಪ್ರೌಢಶಾಲೆಯಲ್ಲಿ ಭೌತಶಾಸ್ತ್ರ ವಿಷಯ 33 ವಿದ್ಯಾರ್ಥಿಗಳು ಹಾಜರಾಗಿದ್ದರು.
 
ಅರ್ಥಶಾಸ್ತ್ರ 297 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಮೂರು ಪರೀಕ್ಷಾ ಕೇಂದ್ರಗಳ ವ್ಯಾಪ್ತಿಯಲ್ಲಿ 31 ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು. ಕೇಂದ್ರ ಸುತ್ತಲೂ ಯಾವುದೇ ನಕಲು ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಪರೀಕ್ಷೆ ಮುಖ್ಯ ಅಧೀಕ್ಷಕರಾದ ಗರುಡ ವಾಹನ, ದೊಡ್ಡಮನಿ, ಪವನ ಕುಮಾರ ರಾಯಚೂರು ಸೇರಿ ಸಹಾಯಕ ಅಧಿಕಾರಿಗಳು ಸಿದ್ದಣ್ಣ, ಪ್ರಾಚಾರ್ಯ ಮಸರಕಲ್‌, ಡಾ| ರಫಿಕ ಅಹ್ಮದ್‌, ಯಮನಪ್ಪ, ಜಾವೀದ್‌ ಪಾಷ, ತಿರುಪತಿ ಸೂಗೂರು, ಶಿವಗೇನಿ, ವೆಂಕಟೇಶ ಚಲುವಾದಿ, ಶಿವುಕುಮಾರ ಗಲಗ, ಶ್ರೀಕಾಂತ್‌ ಬಿಲ್ಲವ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next