Advertisement

ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿ: ಇಬ್ಬರ ಬಂಧನ

12:35 AM Apr 12, 2019 | Sriram |

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ದ್ವಿತೀಯ ಪಿಯು ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ವಾಟ್ಸ್‌ಆ್ಯಪ್‌ ಮೂಲಕ ಸುಳ್ಳು ವದಂತಿ ಹಬ್ಬಿಸಿದ್ದ ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಸೇರಿ ಇಬ್ಬರನ್ನು ಸೈಬರ್‌ ಕ್ರೈಂ
ಪೊಲೀಸರು ಬಂಧಿಸಿದ್ದಾರೆ.

Advertisement

ಯಾದಗಿರಿ ಜಿಲ್ಲೆಯ ಮಂಜುನಾಥ್‌ನನ್ನು ಬಂಧಿಸಿದ್ದು, ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಸರ್ಕಾರಿ ವೀಕ್ಷಣಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಗಳು 2017ರ ಪ್ರಶ್ನೆ ಪತ್ರಿಕೆಯನ್ನುಸ್ಕ್ಯಾನ್‌ ಮಾಡಿದ್ದು, ಬಳಿಕ 2019ನೇ ಸಾಲಿನ ದ್ವಿತೀಯ ಪಿಯು ಅರ್ಥಶಾಸOಉ ಪಶ್ನೆ ಪತ್ರಿಕೆ ಮೇಲಿದ್ದ ಕೋಡ್‌ಗಳನ್ನು ಕಟ್‌ ಮಾಡಿ, ನಕಲಿ ಪ್ರಶ್ನೆ ಪತ್ರಿಕೆ ಮೇಲೆ ಅಂಟಿಸಿದ್ದರು. ಪರಿಚಯವಿರುವ ಇಬ್ಬರು ವಿದ್ಯಾರ್ಥಿಗಳಿಗೆ ವ್ಯಾಟ್ಸ್‌ಆ್ಯಪ್‌ ಮೂಲಕ ಹಂಚಿಕೆ ಮಾಡಿ, ಇದೇ ನೈಜ ಪ್ರಶ್ನೆ ಪತ್ರಿಕೆ ಎಂದು ನಂಬಿಸಿದ್ದರು. ಈ
ಕುರಿತು ಪಿಯು ಬೋರ್ಡ್‌ ಅಧಿಕಾರಿಗಳು ಸೈಬರ್‌ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಸೈಬರ್‌ ಪೊಲೀಸರು 300 ಮಂದಿಯನ್ನು ವಿಚಾರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next