Advertisement
ರಜಾ ದಿನವಾದ ಭಾನುವಾರದಂದು ವಿಶೇಷ ತರಗತಿ ನಡೆಸುವ ಬದಲಿಗೆ ವಾರದ ಇತರ ದಿನಗಳಲ್ಲೇ ಕಾಲೇಜುಅವಧಿಗೆ ಮೊದಲು ಅಥವಾ ನಂತರ ವಿಶೇಷ ತರಗತಿಗಳನ್ನು ನಡೆಸಲು ತೀರ್ಮಾನಿಸಿದೆ.
ವರ್ಷದಲ್ಲಿ 25 ಭಾನುವಾರಗಳಂದು ಈ ತರಗತಿಗಳು ನಡೆದಿವೆ. 2017ರ ಆಗಸ್ಟ್ 6ರಂದು ಮೊದಲ ತರಗತಿ ಆರಂಭವಾಗಿದ್ದಾಗ ತಲಾ 2 ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತರಗತಿಯಲ್ಲಿ ಸೇರಿದ್ದರು. ಕ್ರಮೇಣ ಅದು
400-500ರಿಂದ 40-50ಕ್ಕೆ ಇಳಿದಿತ್ತು. ಭಾನುವಾರದ ವಿಶೇಷ ತರಗತಿಗೆ 500 ರೂ.ಗೌರವ ಧನ ನೀಡುತ್ತಿದ್ದರೂ ಉಪನ್ಯಾಸಕರು ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ವಿದ್ಯಾರ್ಥಿಗಳೂ ಬರುತ್ತಿರಲಿಲ್ಲ. ಭಾನುವಾರದ ಬದಲಿಗೆ ವಾರದಲ್ಲಿ ಎರಡು ಅಥವಾ ಮೂರು ದಿನ ಬೆಳಗ್ಗೆ ಅಥವಾ ಸಂಜೆ ಹೆಚ್ಚುವರಿ ಕಾಲಾವಕಾಶ ಪಡೆದು ವಿಶೇಷ ತರಗತಿ ನಡೆಸಲು ತೀರ್ಮಾನಿಸಿದ್ದಾರೆ. ಭಾನುವಾರದ ವಿಶೇಷ ತರಗತಿಯಲ್ಲಿ ಕೊನೆ ಕೊನೆಗೆ ವಿದ್ಯಾರ್ಥಿಗಳ ಹಾಜರಾತಿ ಕುಸಿತವಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ ವಾರದ ನಡುವಿನಲ್ಲಿ ವಿಶೇಷ ತರಗತಿ ನಡೆಸಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಎಲ್ಲ ಕಾಲೇಜಿಗೂ
ಮಾಹಿತಿ ನೀಡಲಿದ್ದೇವೆ.
– ಸಿ.ಶಿಖಾ,
ನಿರ್ದೇಶಕಿ, ಪಿಯು ಇಲಾಖೆ