Advertisement

ಏ.10ರೊಳಗೆ ಪಿಯು ಮೌಲ್ಯಮಾಪನ ಪೂರ್ಣ

12:20 PM Mar 28, 2019 | Team Udayavani |

ಬೆಂಗಳೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆ ವೇಗವಾಗಿ ಸಾಗುತ್ತಿದ್ದು, ಏ.10ರೊಳಗೆ ಪ್ರಕ್ರಿಯೆ ಪೂರ್ಣಗೊಂಡು, ಏಪ್ರಿಲ್‌ ಅಂತ್ಯಕ್ಕೆ ಫ‌ಲಿತಾಂಶ ನೀಡಲಾಗುತ್ತದೆ ಎಂದು ಪಿಯು ಶಿಕ್ಷಣ ಇಲಾಖೆ ನಿರ್ದೇಶಕ ಡಾ.ಪಿ.ಸಿ.ಜಾಫ‌ರ್‌ ತಿಳಿಸಿದರು.

Advertisement

ಈ ಕುರಿತು ಮಾಹಿತಿ ನೀಡಿದ ಅವರು, ಮಂಗಳವಾರ ಬೆಳಗ್ಗೆ ಏಕಕಾಲದಲ್ಲಿ ಆನ್‌ಲೈನ್‌ ಮೂಲಕ ಅಂಕ ಅಪ್‌ಲೋಡ್‌ಗೆ ಲಿಂಕ್‌ ಓಪನ್‌ಮಾಡಿರುವುದರಿಂದ ನೆಟ್‌ವರ್ಕ್‌ ಸಮಸ್ಯೆಯಾಗಿತ್ತು. ಮಾಧ್ಯಾಹ್ನದೊಳಗೆ ಆ ರೀತಿಯ ಎಲ್ಲ ಸಮಸ್ಯೆಯನ್ನು ಬಗೆಹರಿಸಿದ್ದೆವು. ಹೀಗಾಗಿ ಸರ್ವರ್‌ ಸಂಬಂಧಿಸಿದ ಯಾವುದೇ ಸಮಸ್ಯೆ ಇಲ್ಲ. ಮೌಲ್ಯಮಾಪಕರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದು ವಿವರ ನೀಡಿದರು. ಮೌಲ್ಯಮಾಪನ ಪ್ರಕ್ರಿಯೆಗೆ ಉಪನ್ಯಾಸಕರು ನಿಯಮಿತವಾಗಿ ಬರುತ್ತಿದ್ದಾರೆ. ಏ.10ರೊಳಗೆ ಸಂಪೂರ್ಣ ಪ್ರಕ್ರಿಯೆ ಮುಗಿಸಲಿದ್ದೇವೆ. ಏಪ್ರಿಲ್‌ ಅಂತ್ಯದೊಳಗೆ ಫ‌ಲಿತಾಂಶ ನೀಡಲಿದ್ದೇವೆ ಎಂದರು.

25 ಸಾವಿರ ವಿದ್ಯಾರ್ಥಿಗಳು ಗೈರು
ಬುಧವಾರ ನಡೆದ ದ್ವಿತೀಯ ಭಾಷೆ ಇಂಗ್ಲಿಷ್‌ ಪರೀಕ್ಷೆಗೆ 8,00,640 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 7,74,803 ವಿದ್ಯಾರ್ಥಿಗಳು ಹಾಜರಾಗಿದ್ದು, 25,837 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಪರೀಕ್ಷಾ ಅಕ್ರಮದಡಿ ಬೆಂಗಳೂರು ದಕ್ಷಿಣ ಜಿಲ್ಲೆಯ ಒರ್ವ ವಿದ್ಯಾರ್ಥಿಯನ್ನು ಡಿಬಾರ್‌ ಮಾಡಲಾಗಿದೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

ಫ‌ಲಿತಾಂಶ ಸರಿಪಡಿಸಲು ಆಗ್ರಹ
ಶಿಕ್ಷಕರ ಅರ್ಹತಾ ಪರೀಕ್ಷೆಗೆ (ಟಿಇಟಿ) ಫ‌ಲಿತಾಂಶದಲ್ಲಿ ಸಾಕಷ್ಟು ಗೊಂದಲವಿದೆ. ಆದಷ್ಟು ಬೇಗ ಸರಿಪಡಿಸಿ ಎಂದು ಕೆಲವು ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಆಗ್ರಹಿಸಿದ್ದಾರೆ. ಸರ್ಕಾರಿ ಶಾಲಾ ಶಿಕ್ಷಕರಾಗಲು ಶಿಕ್ಷಕರ ಅರ್ಹತಾ ಪರೀಕ್ಷೆಗೆ(ಟಿಇಟಿ)
ಕಡ್ಡಾಯವಾಗಿದೆ. ಇತ್ತೀಚೆಗೆ ನಡೆಸಿದ ಟಿಇಟಿಯಲ್ಲಿ ಸುಮಾರು 60 ಸಾವಿರ ಅಭ್ಯರ್ಥಿ ಪರೀಕ್ಷೆ ಬರೆದಿದ್ದರು.

ಕೇಂದ್ರೀಕೃತ ದಾಖಲಾತಿ ಘಟಕವು ಪರೀಕ್ಷೆ ನಡೆಸಿ, ಫ‌ಲಿತಾಂಶ ಪ್ರಕಟಿಸಿತ್ತು. ಆದರೆ, ಫ‌ಲಿತಾಂಶದಲ್ಲಿ ಸಾಕಷ್ಟು ಗೊಂದಲವಿದೆ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಪತ್ರಿಕೆ-2ರ ಕೆಲವೊಂದು ಪ್ರಶ್ನೆಗಳು ಗೊಂದಲ ಮಯವಾಗಿದ್ದು, ಸರಿ ಉತ್ತರವನ್ನು ತಪ್ಪು ಎಂದು ನಮೂದಿಸಿದ್ದಾರೆ. ಪುಸ್ತಕದಲ್ಲಿ ಇರುವ ಉತ್ತರವನ್ನೇ ಬರೆದಿದ್ದರೂ ಕೇಂದ್ರೀಕೃತ ದಾಖಲಾತಿ ಘಟಕದಿಂದ ತಪ್ಪು ಹೇಳುತ್ತಿದ್ದಾರೆ. ಇದರಿಂದಾಗಿ ಒಂದೆರೆಡು ಅಂಕದಲ್ಲಿ ನೂರಾರು ವಿದ್ಯಾರ್ಥಿಗಳು ಭವಿಷ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ.

Advertisement

ಹೀಗಾಗಿ ಫ‌ಲಿತಾಂಶವನ್ನು ಪುನರ್‌ ಪರಿಶೀಲಿಸಬೇಕು ಎಂದು ಹಲವು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ. ಸಮಸ್ಯೆ ಸರಿಪಡಿಸಲು ಕೆಲವರು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು
ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next