Advertisement

ಸುಬ್ರಹ್ಮಣ್ಯ: ಪಿ.ಯು. ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ

07:55 AM Jul 24, 2017 | Team Udayavani |

ಪಂಜ: ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಪ್ರತಿಭಾ ಪ್ರದರ್ಶನಗಳು ಅಡಿಗಲ್ಲಾಗಿವೆ ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮತ್ತು ಎಸ್‌ಎಸ್‌ಪಿಯು ಕಾಲೇಜಿನ ಸಂಚಾಲಕ ನಿತ್ಯಾನಂದ ಮುಂಡೋಡಿ ಹೇಳಿದರು.

Advertisement

ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು.ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ನಡೆದ ವಿದ್ಯಾರ್ಥಿಗಳ ದ್ವಿದಿನದ ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಲೆಯು ಶಾಂತಿ ಮತ್ತು ಆತ್ಮ ಸಂತೃಪ್ತಿಗೆ ತಾಯಿ. ಇದರ ಆಸ್ವಾದ ನಮಗೆ ಒಳಿ ತಿನೊಂದಿಗೆ ಮಾನಸಿಕ ನೆಮ್ಮದಿ ನೀಡುತ್ತದೆ. ಕಲೆ ನಮಗೆ ಒಲಿಯಲು ಕಠಿನ ಪರಿಶ್ರಮ ಅತ್ಯಗತ್ಯ ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ಯನ್ನು ವಹಿಸಿದ್ದ ಪ್ರಾಂಶುಪಾಲೆ ಸಾವಿತ್ರಿ ಕೆ. ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಕೂಡ ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಬದುಕಿನಲ್ಲಿ ಸಂತಸದ ಕ್ಷಣಗಳನ್ನು ಅನುಭವಿಸುವುದನ್ನು ಬೋಧಿಸುವ ನಿಟ್ಟಿನಲ್ಲಿ ಈ ಪ್ರತಿಭಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಅಗಾಧ ಪ್ರತಿಭೆಗಳನ್ನು ಬೆಳಕಿಗೆ ತರಲು ಇಂತಹ ಹಬ್ಬಗಳನ್ನು ನಡೆಸಲಾಗುತ್ತಿದೆ ಎಂದರು.

ತೀರ್ಪುಗಾರರಾದ ಚಲನಚಿತ್ರ ನಟ ಜಯಪ್ರಕಾಶ್‌ ಮೋಂಟಡ್ಕ, ಕಲಾವಿದ ರಮೇಶ್‌ ಮೆಟ್ಟಿನಡ್ಕ, ಕಲಾವಿದೆ ಭಾರತಿ ದಿನೇಶ್‌ ಮುಖ್ಯ ಅತಿಥಿಗಳಾಗಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯಗುರು ಕೆ.ಯಶವಂತ ರೈ, ಸಾಂಸ್ಕೃತಿಕ ವಿಭಾಗದ ಸಂಯೋಜಕ ಉಪನ್ಯಾಸಕ ರತ್ನಾಕರ ಎಸ್‌., ನಿರ್ದೇಶಕರಾದ ಸವಿತಾ ಕೈಲಾಶ್‌, ಸೌಮ್ಯಾ ದಿನೇಶ್‌, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಮೇಘಶ್ಯಾಂ ಎನ್‌.ಪಿ. ಉಪಸ್ಥಿತರಿದ್ದರು.

Advertisement

ಉಪನ್ಯಾಸಕಿ ಸವಿತಾ ಕೈಲಾಶ್‌  ಸ್ವಾಗತಿಸಿ, ಉಪನ್ಯಾಸಕ ರತ್ನಾಕರ ಎಸ್‌. ವಂದಿಸಿದರು. ಉಪನ್ಯಾಸಕಿ ಸೌಮ್ಯಾ, ದಿನೇಶ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next