Advertisement
ಆಲೂರಲ್ಲಿ ಪ.ಪೂ. ಕಾಲೇಜು ಸಾಧ್ಯವಾದರೆ ಹರ್ಕೂರು, ಆಲೂರು, ಕಳಿ ಮಾತ್ರವಲ್ಲದೆ ನಾಡ ಗುಡ್ಡೆಯಂಗಡಿ, ಹುಂತನಗೋಳಿಯಲ್ಲಿ ಶಾಸಕರ ಮುತುವರ್ಜಿಯಲ್ಲಿ ಸೇತುವೆಯೂ ಆಗಿರುವುದರಿಂದ ಕಾಲ್ತೋಡು, ಹೇರೂರು ಗ್ರಾಮಗಳ ಮಕ್ಕಳಿಗೂ ಪಿಯುಸಿ ವ್ಯಾಸಂಗಕ್ಕೆ ಅನುಕೂಲವಾಗಲಿದೆ.
Related Articles
Advertisement
ಗ್ರಾ.ಪಂ. ಕಚೇರಿ ಕಟ್ಟಡ 40 ವರ್ಷಗಳಿಗೂ ಹಿಂದಿನದ್ದಾಗಿದ್ದು, ಹೊಸ ಸುಸಜ್ಜಿತ ಕಟ್ಟಡದ ಬೇಡಿಕೆಯೂ ಇದೆ.
ಕೈಗಾರಿಕೆ ಆರಂಭವಾಗಲಿ…
ಆಲೂರಲ್ಲಿ ಕಲಿತ ಯುವಜನರು ಉದ್ಯೋಗ ಅರಸಿಕೊಂಡು ಬೇರೆ ಜಿಲ್ಲೆಗಳು, ಪರ ಊರಿಗೆ ವಲಸೆ ಹೋಗಬೇಕಿದೆ. ಇಲ್ಲಿ ಯಾವುದೇ ಕೈಗಾರಿಕೆ, ಉದ್ಯಮವಾಗಲಿ ಇಲ್ಲ. ಗ್ರಾಮದ ಜನರಿಗೆ ಉದ್ಯೋಗ ಕಲ್ಪಿಸುವಂಥ ಬಟ್ಟೆ ಅಥವಾ ಇನ್ನಿತರ ಯಾವುದಾದರೂ ಕೈಗಾರಿಕೆ ಸ್ಥಾಪನೆಯಾದರೆ ಅನುಕೂಲವಾಗಲಿದೆ. ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೇ ನಂಬರ್ 102ರಲ್ಲಿ 330.67 ಎಕರೆ ಜಾಗವಿದೆ. ಇದರಲ್ಲಿ ಒಂದಷ್ಟು ಮೀಸಲು ಅರಣ್ಯ ಸಮಸ್ಯೆಯಿದ್ದರೂ, ಅದನ್ನು ನಿವಾರಿಸಿ, ಕೈಗಾರಿಕೆ ಆರಂಭಿಸಲು ಅವಕಾಶವಿದೆ.
ನಿವೇಶನ ಕೊಡಿ: ಆಲೂರಿಗೆ ಅಗತ್ಯವಾಗಿ ಪಿಯುಸಿ ಕಾಲೇಜು ಬೇಕಿದೆ. ಇನ್ನು ಗ್ರಾಮದಲ್ಲಿ ಅನೇಕ ಮಂದಿ ನಿವೇಶನ ರಹಿತರಿದ್ದು, ಸಾಕಷ್ಟು ಸರಕಾರಿ ಜಾಗವಿದ್ದರೂ, ಡೀಮ್ಡ್ ಫಾರೆಸ್ಟ್ ಸಮಸ್ಯೆ ನಿವಾರಿಸಿದರೆ ಇದು ಸುಗಮವಾಗಲಿದೆ. ವಸತಿ ರಹಿತರಿಗೂ ತ್ವರಿತಗತಿಯಲ್ಲಿ ಮನೆ ಮಂಜೂರಾಗಬೇಕಿದೆ. ಇನ್ನು ಇಲ್ಲಿನ ಯುವಜನರಿಗೆ ಉದ್ಯೋಗ ಕಲ್ಪಿಸಲು ಕೈಗಾರಿಕೆಗಳು ಆರಂಭವಾಗಬೇಕು. –ಪ್ರಶಾಂತ್ ಕುಲಾಲ್ ಆಲೂರು, ಗ್ರಾಮಸ್ಥರು
ಪ್ರಯತ್ನಿಸಲಾಗುವುದು: ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು ಈಗಾಗಲೇ ಗ್ರಾಮಸ್ಥರಿಗೆ ತಿಳಿಸಿದ್ದು, ಅದನ್ನು ನಿರ್ಣಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಲಾಗುವುದು. ಪಿಯುಸಿ ಕಾಲೇಜು ಬೇಡಿಕೆ ಬಗ್ಗೆ ಈ ಹಿಂದೆಯೇ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮತ್ತೆ ಸಂಬಂಧಪಟ್ಟ ಸಚಿವರು, ಇಲಾಖಾ ಅಧಿಕಾರಿಗಳ ಗಮನಕ್ಕೆ ತರಲಾಗುವುದು. –ರವಿ ಶೆಟ್ಟಿ ಉಪಾಧ್ಯಕ್ಷರು, ಆಲೂರು ಗ್ರಾ.ಪಂ.
ಪ್ರಶಾಂತ್ ಪಾದೆ