Advertisement
ಪುತ್ತೂರಿನಲ್ಲಿ ಈಗಿರುವ ಬ್ರಿಟಿಷ್ ಕಾಲದ ನ್ಯಾಯಾಲಯ ಕಟ್ಟಡಕ್ಕೆ ಪರ್ಯಾಯ ವಾಗಿ ನಗರದಿಂದ 6 ಕಿ.ಮೀ. ದೂರದಲ್ಲಿ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಮುಂದಿನ ವರ್ಷಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
Related Articles
Advertisement
ಒಟ್ಟು 50 ಕೋ. ರೂ. ವೆಚ್ಚದಲ್ಲಿ 4 ಮಹಡಿಯ ನ್ಯಾಯಾಲಯ ಸಂಕೀರ್ಣ ನಿರ್ಮಿಸುವ ಪ್ರಸ್ತಾವ ಲೋಕೋಪಯೋಗಿ ಇಲಾಖೆ ಮೂಲಕ ಸರಕಾರಕ್ಕೆ ಸಲ್ಲಿಕೆಯಾಗಿತ್ತು. ಇದರಲ್ಲಿ 25 ಕೋ.ರೂ. ಮಂಜೂರುಗೊಂಡು ಮೊದಲ ಹಂತದಲ್ಲಿ 2 ಅಂತಸ್ತಿನ ಸಮುಚ್ಚಯ ನಿರ್ಮಾಣಗೊಳ್ಳಲಿದ್ದು ಅಡಿಪಾಯ ಪೂರ್ಣಗೊಂಡು ಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಮಳೆ ನೀರು ಹಾದುಹೋಗಲು ಪೂರಕವಾಗಿ ಚರಂಡಿ ಕಾಮಗಾರಿ ಕೂಡ ನಡೆಯುತ್ತಿದೆ.
ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಉಳಿದ 25 ಕೋ.ರೂ. ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ದ.ಕ.ಜಿಲ್ಲೆ ಯಲ್ಲಿ ಮಾದರಿ ನ್ಯಾಯಾಲಯ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ. -ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಕಾಮಗಾರಿ ಪ್ರಾರಂಭವಾಗಿದೆ.ಅಡಿಪಾಯ ಕೆಲಸ ಪೂರ್ಣಗೊಂಡಿದೆ. ಸುಮಾರು 15 ಶೇ.ಕಾಮಗಾರಿ ಮುಗಿದಿದೆ. ಮೊದಲ ಹಂತದ ಕಾಮಗಾರಿ ಮೇ ತಿಂಗಳೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. -ಪ್ರಮೋದ್ ಕುಮಾರ್ ಕೆ., ಸಹಾಯಕ ಎಂಜಿನಿಯರ್