ಹೂವಿನಹಡಗಲಿ: ರಾಜ್ಯದಲ್ಲಿ ದಲಿತರಿಗೆ, ಬಡವರಿಗೆ. ರೈತರಿಗೆ, ವಿದ್ಯಾರ್ಥಿಗಳಿಗೆ, ಆಲ್ಪ ಸಂಖ್ಯಾತರಿಗೆ ಮಹಿಳೆಯರಿಗೆ ಹೀಗೆ ಎಲ್ಲಾ ವರ್ಗದವರ ಏಳ್ಗೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ ಎಂದು ಮಾಜಿ ಸಚಿವ, ಶಾಸಕ ಪಿ.ಟಿ. ಪರಮೇಶ್ವರನಾಯ್ಕ ಹೇಳಿದರು.
ತಾಲೂಕಿನ ಹಿರೇಹಡಗಲಿಯಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ಮಾತನಾಡಿದ ಅವರು, ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳ ಮೂಲಕವಾಗಿ ಜನತೆಗೆ ನೆಮ್ಮದಿಯ ಬದುಕು ನೀಡಿದೆ ಆಷ್ಟೇ ಆಲ್ಲದೆ ಸಾಕಷ್ಟು ಆಭಿವೃದ್ದಿಯನ್ನು ಸಹ ಕೈಗೊಂಡಿದೆ.
ಇನ್ನೂ ಕ್ಷೇತ್ರದಲ್ಲಿ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ, ಆಸ್ಪತ್ರೆಗೆ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಿರುವುದು, ತಾಲೂಕಿನ ವಿವಿಧ ಹಳ್ಳಿಗಳಿಗೂ ಸಹ ರಸ್ತೆ ಸಂಪರ್ಕ ಕಲ್ಪಿಸಿರುವುದು, ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಪ್ರತಿ ಹಳ್ಳಿಗಳಲ್ಲಿಯೂ ಸಹ ಶುದ್ಧವಾದ ಕುಡಿಯುವ ನೀರಿನ ಘಟಕ ಪ್ರಾರಂಭ ಮಾಡಿರುವುದು, ಈ ಭಾಗದಲ್ಲಿನ ಜನತೆ ಉದ್ಯೋಗ ಅರಸಿಗುಳೆ ಹೋಗುವುದನ್ನು ತಡೆಯಲು
ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಮೂಲಕವಾಗಿ ರೈತರ ಜಮೀನುಗಳಿಗೆ ನೀರಿನ ಸೌಲಭ್ಯ ಒದಗಿಸುವ ನೀರಾವರಿ ಯೋಜನೆ ಹೀಗೆ ಹತ್ತು ಹಲವಾರು ಕಾರ್ಯಗಳನ್ನು ಕಳೆದ 5 ವರ್ಷದ ಆವಧಿಯಲ್ಲಿ ಕೈಗೊಳ್ಳಲಾಗಿದೆ. ಕಾರಣ ಅಭಿವೃದ್ಧಿ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಇನ್ನೂ ಅನೇಕ ಕಾರ್ಯ ನಡೆಯಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಮಾತನಾಡಿ ಕ್ಷೇತ್ರದಲ್ಲಿ ಆಭಿವೃದ್ಧಿ ಪರವಾಗಿ ಕೆಲಸ ಮಾಡುವ ಶಾಸಕರನ್ನು ಮತದಾರರು ಬೆಂಬಲಿಸಬೇಕಾಗಿದೆ ಎಂದರು.
ಹಡಗಲಿ ಬ್ಲಾಕ್ ಕಾಂಗ್ರೆಸ್ ಆಧ್ಯಕ್ಷ ಎಂ. ಪರಮೇಶ್ವರಪ್ಪ ಮಾತನಾಡಿದರು. ಸಂದರ್ಭದಲ್ಲಿ ಮುಖಂಡರಾದ ವಾರದ ಗೌಸುಮೊಹದ್ದಿನ್, ಆಟವಾಳಗಿ ಕೊಟ್ರೇಶ್, ಆರವಳ್ಳಿ ವೀರಣ್ಣ, ಜಿ.ಪಂ ಮಾಜಿ ಸದಸ್ಯ ಜಿ. ವಸಂತ, ತಾ.ಪಂ ಸದಸ್ಯೆ ಶಾರದಮ್ಮ, ಗ್ರಾ.ಪಂ ಅಧ್ಯಕ್ಷೆ ಚನ್ನಮ್ಮ ಇದ್ದರು.