ಮಂಗಳೂರು: ಹಿಂದುಸ್ಥಾನಿ ಗಾಯಕ ಪಂಡಿತ್ ವೆಂಕಟೇಶ್ ಕುಮಾರ್ ಅವರಿಗೆ ಸ್ಯಾಕ್ಸೊಫೋನ್ ಮಾಂತ್ರಿಕ ಡಾ| ಕದ್ರಿ ಗೋಪಾಲನಾಥ್ ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಶನಿವಾರ ನಗರದಲ್ಲಿ ನಡೆದ ಕದ್ರಿ ಸಂಗೀತ ಸೌರಭ-2023ರ ಸಂದರ್ಭ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯನು 50 ಸಾವಿರ ರೂ. ನಗದನ್ನು ಒಳಗೊಂಡಿದೆ.
ಪ್ರಶಸ್ತಿ ಪ್ರದಾನ ನೆರವೇರಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ|ಮೋಹನ ಆಳ್ವ ಅವರು ಮಾತನಾಡಿ, ಡಾ| ಕದ್ರಿ ಅವರು ಸಜಿಪದಂತಹ ಹಳ್ಳಿಯಲ್ಲಿ ಜನಿಸಿ ಮೇರು ಮಟ್ಟಕ್ಕೆ ಏರಿದಂತಹವರು.
ಸ್ಯಾಕೊÕಫೋನ್‌ನಂತಹ ವಿದೇಶಿ ವಾದ್ಯವನ್ನು ಭಾರತದ ಸಂಗೀತಕ್ಕೆ ಯಶಸ್ವಿಯಾಗಿ ಅಳವಡಿಸಿಕೊಂಡವರು. ಸ್ಯಾಕೊÕಫೋನ್‌ನಲ್ಲಿ ನಿಖರತೆ ಹಾಗು ಸ್ಪಷ್ಟತೆಗೆ ಹೆಸರುವಾಸಿ, ವಿಶ್ವವಿಖ್ಯಾತ ವಾದ್ಯ ಜಾಝ್ ಮ್ಯೂಸಿಕ್ ಉತ್ಸವದಲ್ಲೂ ತಮ್ಮ ಹೆಸರಿನ ಛಾಪು ಮೂಡಿಸಿದವರು ಎಂದು ಬಣ್ಣಿಸಿದರು.
ವಜ್ರದೇಹಿ ಮಠದ ಶ್ರೀ ರಾಜ ಶೇಖರಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಪಂಡಿತರಿಗೆ ನೀಡುತ್ತಿರುವುದರಿಂದ ಪ್ರಶಸ್ತಿಗೆ ವಿಶೇಷ ಗೌರವ ಬಂದಿದೆ ಎಂದರು. ಹಿರಿಯ ಕಲಾವಿದ, ಗೋಮತಿದಾಸ್, ಶಾಸಕ ವೇದವ್ಯಾಸ ಕಾಮತ್ ಮಾತನಾಡಿದರು.
ರಂಗಕಲಾವಿದ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್,ಜಾನಪದ ಪರಿಷತ್ ಅಧ್ಯಕ್ಷ ಪಮ್ಮಿ ಕೊಡಿಯಾಲ್‌ಬೈಲ್, ಕಸಾಪ ಮಾಜಿ ಅಧ್ಯಕ್ಷ ಪ್ರದೀಪ್‌ಕುಮಾರ್ ಕಲ್ಕೂರ, ಉದ್ಯಮಿ ಹರೀಶ್ ಶೇರಿಗಾರ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಡಾ| ಕದ್ರಿ ಅವರ ಪತ್ನಿ ಸರಸ್ವತಿ ಉಪಸ್ಥಿತರಿದ್ದರು. ಕದ್ರಿ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಮಣಿಕಾಂತ್ ಕದ್ರಿ ಸ್ವಾಗತಿಸಿದರು.