Advertisement

ಧಾರ್ಮಿಕ ಚಿಂತನೆಯಿಂದ ಮಾನಸಿಕ ನೆಮ್ಮದಿ ಸಾಧ್ಯ: ಪತ್ತಾರ

12:19 PM Aug 04, 2018 | |

ತಾಳಿಕೋಟೆ : ಚೈತನ್ಯ ಶಕ್ತಿ ಎಂಬುದು ಗುರುವಿನಲ್ಲಿರುತ್ತದೆ. ಅದಕ್ಕಾಗಿಯೇ ಹರ ಮುನಿದರೂ ಗುರು ಕಾಯುವನು ಎಂಬುದು ಮಹಾಶರಣರ ಮಾತಾಗಿದೆ ಎಂದು ಪ್ರತಿಭಾಲೋಕ ಕರಿಯರ ಅಕಾಡೆಮಿ ಸಂಸ್ಥಾಪಕ ಶ್ರೀಕಾಂತ ಪತ್ತಾರ ಹೇಳಿದರು.

Advertisement

ಸ್ಥಳೀಯ ಶಿರಡಿ ಸಾಯಿ ಸೇವಾ ಟ್ರಸ್ಟ್‌ ವತಿಯಿಂದ ಗುರುಪೂರ್ಣಿಮೆ ಕುರಿತು ನಿಮಿಷಾಂಭಾ ದೇವಿ ಮಂದಿರದಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭಕ್ತಿಯಿಂದ ಗುರುಪೂರ್ಣಿಮೆ ದಿನದಂದು ಸಾಯಿಬಾಬಾ ಅವರ ಸ್ಮರಣೆ ಮಾಡುತ್ತಿರುವದು ಭಗವಂತನ ಪ್ರೀತಿಗೆ ಪಾತ್ರರಾಗುವಂತಹದ್ದಾಗಿದೆ. ಇದು ಭಾರತೀಯ ನಾಗರಿಕತೆ ಎಂಬುದು ಮೆಚ್ಚುವಂತಹದ್ದಾಗಿದೆ ಎಂದರು. 

ಜಗತ್ತಿಗೆ ಭಾರತ ದೇಶ ಸಂತರ ನಾಡೆಂದು ಕರೆಸಿಕೊಳ್ಳಲಾಗುತ್ತಿದೆ. ಹೊರ ದೇಶದವರು ವಿಜ್ಞಾನಿಗಳಾದರೂ ಅಂತರಂಗದ ಶೋಧನೆ ಮಾಡಿದ ಸ್ವಾಮಿ ವಿವೇಕಾನಂದರು ಗುರು ರಾಮಕೃಷ್ಣ ಪರಮಹಂಸ ಅವರಿಂದ ಭಗವಂತನನ್ನು ಕಾಣಲು ಮುಂದಾಗಿ ಗುರುವಿನ ಶಕ್ತಿ ಎಂತಹದೆಂಬುದು ತಿಳಿದುಕೊಂಡರೆಂದರು.

ಭಾರತದ ಆತ್ಮ ಎಂದರೆ ಅಧ್ಯಾತ್ಮ ಎನ್ನುವದಾಗಿದೆ. ಧಾರ್ಮಿಕ ಭಜನೆ, ಚಿಂತನೆ, ಆರಾಧನೆ ಮಾಡುವುದರಿಂದ ಮಾನಸಿಕ ನೆಮ್ಮದಿ ದೊರೆಯಲಿದೆ. ಮಹಾಭಾರತದ ಇತಿಹಾಸ, ಛತ್ರಪತಿ ಶಿವಾಜಿ ಮಹಾರಾಜರಿಗೆ ದೊರೆತ ಗುರು ರಾಮದಾಸ ಮಹಾರಾಜರ ಶಿಕ್ಷಣ ಕುರಿತು ವಿವರಿಸಿದರಲ್ಲದೇ ಭಕ್ತ ಕನಕದಾಸರು ತಿಳಿಸಿದಂತೆ ನನ್ನೊಳಗೆ ನಾನು ಇರುವ ಅಹಂಕಾರವನ್ನು ಸಾಧಿಸಬೇಕೆಂದ ಅವರು ಸತ್ಯ ಸಾಯಿಬಾಬಾರವರು ಸತ್ಯವಂತರಿಗೆ ಒಲಿಯುತ್ತಾ ಅವರ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾ ಸಾಗಿದ ಸಾಯಿಬಾಬಾರವರ ಮಹಿಮೆ ಅವರ ಪವಾಡಗಳ ಕುರಿತು ವಿವರಿಸಿದರು.

ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಮಾತನಾಡಿ, ಸಾಯಿಬಾಬಾರವರ ಭಕ್ತರು ಕೇವಲ ಭಾರತದೇಶದಲ್ಲಿ ಅಷ್ಟೇ ಅಲ್ಲಾ ಸುಮಾರು 30ಕ್ಕೂ ಹೆಚ್ಚು ಹೊರದೇಶದಲ್ಲಿಯೂ ಇದ್ದಾರೆ. ಸಾಯಿಬಾಬಾರವರ ಮಹಿಮೆ ಅಪಾರವಾಗಿದ್ದು
ಅವರು ಭಕ್ತಿಯಿಂದ ಭಜಿಸಿದವರಿಗೆ ಬಹಳೇನು ದೂರವಿಲ್ಲವೆಂದರು.

Advertisement

ಶಿರಡಿ ಸಾಯಿ ಸೇವಾ ಟ್ರಸ್ಟ್‌ ಗೌರವಾಧ್ಯಕ್ಷ ಡಾ| ಎನ್‌.ಎಲ್‌. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸೇವಾ ಟ್ರಸ್ಟ್‌ ಅಧ್ಯಕ್ಷ ಸುರೇಶ ಸಾಲಂಕಿ, ಉಪಾಧ್ಯಕ್ಷ ಎಂ.ಜಿ. ಪಾಟೀಲ, ನಿರ್ದೇಶಕರಾದ ಜಿ.ಜಿ. ಕಾದಳ್ಳಿ, ಸಿ.ಬಿ. ತಿಳಗೂಳ, ಕಾಶೀನಾಥ ಪಾಟೀಲ, ಬಸನಗೌಡ ಮದರಕಲ್ಲ, ಸತೀಶ ದಪೆ¤ದಾರ, ಕಾಶೀನಾಥ ಸಜ್ಜನ, ಹಿರಿಯರಾದ ಶಂಕ್ರಪ್ಪಣ್ಣ ಸೋನಾರ, ಪ್ರೇಂಡ್ಸ್‌ ಕ್ಲಬ್‌ ಅಧ್ಯಕ್ಷ ಶಿವಾನಂದ ಹೂಗಾರ, ಅಣ್ಣಪ್ಪ ಜಗತಾಪ, ಬಿ.ಎಸ್‌. ಇಸಾಂಪುರ, ಉಪನ್ಯಾಸಕ ಪಿ.ವೈ. ಮಾರಲಭಾವಿ, ಸಂಗನಗೌಡ ಅಸ್ಕಿ(ಹಿರೂರ), ಈರಣ್ಣ ಕ್ವಾಟಿ, ಎಂ.ಎಸ್‌.ಸರಶೆಟ್ಟಿ, ಸಿ.ಎಂ.ದಾಯಪುಲೆ, ಗೀತಾ ಬಳಗಾನೂರ, ಜಯಶ್ರೀ ಸಜ್ಜನ, ಮಹಾನಂದ ತಿಳಗೂಳ, ಸವಿತಾ ವಾಲಿ, ಮೀನಾಕ್ಷಿ ಮೆಣಸಿನಕಾಯಿ, ರೇಣುಕಾ ಕಾಜೋಳ, ಪ್ರಭಾ ಕತ್ತಿ, ಸುಲೋಚನಾ ಶೆಟ್ಟಿ, ಸ್ನೇಹಾ ತಿಳಗೂಳ ಇದ್ದರು.

ಕಾರ್ಯಕ್ರಮದ ಮೊದಲಿಗೆ ಸಾಯಿಬಾಬಾರ ಭಾವಚಿತ್ರಕ್ಕೆ ಮಾಲಾರ್ಪಣೆ ಮಹಾಪೂಜೆ ಜರುಗಿತಲ್ಲದೇ ಭಕ್ತಿಭಾವದೊಂದಿಗೆ ಮಹಾಭಜನಾ ಕಾರ್ಯಕ್ರಮ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next