Advertisement

PSLVಯ ಹೊಸ ಎಂಜಿನ್‌ ಪರೀಕ್ಷೆ: ಇಸ್ರೋ

01:29 AM May 11, 2024 | Team Udayavani |

ಹೊಸದಿಲ್ಲಿ: ಅಡಿಕ್ಟಿವ್‌ ಮ್ಯಾನುಫ್ಯಾಕ್ಚರಿಂಗ್‌ (ಎಎಂ) ತಂತ್ರಜ್ಞಾನದ ಮೂಲಕ ತಯಾರಿಸಲಾದ ಲಿಕ್ವಿಡ್‌ ರಾಕೆಟ್‌ ಎಂಜಿನ್‌ನ ಪರೀಕ್ಷೆಯನ್ನು ಇಸ್ರೋ ಗುರುವಾರ ಯಶಸ್ವಿಯಾಗಿ ನಡೆಸಿದೆ. ಈ “ಪಿಎಸ್‌4′ ಎಂಜಿನ್‌ ಪಿಎಸ್‌ಎಲ್‌ವಿ ಮೇಲ್ಭಾಗದ ಹಂತದಲ್ಲಿ ಬಳಸಲಾಗುತ್ತದೆ.

Advertisement

ತಮಿಳುನಾಡಿನ ಮಹೇಂದ್ರಗಿರಿ ಯಲ್ಲಿ ರುವ ಇಸ್ರೋ ಸಂಸ್ಥೆಯ ಪ್ರಪಲÒನ್‌ ಕಾಂಪ್ಲೆಕ್ಸ್‌ ನಲ್ಲಿ 11 ನಿಮಿಷ 5 ಸೆಕೆಂಡ್‌ ಕಾಲ ಈ ಎಂಜಿನ್‌ ಹಾಟ್‌ ಟೆಸ್ಟ್‌(ಪೂರ್ಣ ಮಟ್ಟದ ಕಾರ್ಯಾ ಚರಣೆ ಪರೀಕ್ಷೆ) ನಡೆಸ ಲಾಯಿತು. ಸಾಂಪ್ರ ದಾ ಯಿಕವಾಗಿ ಪಿಎಸ್‌4 ಎಂಜಿನ್‌ ಅನ್ನು ಪಿಎಸ್‌ಎಲ್‌ವಿ ರಾಕೆಟ್‌ನ ನಾಲ್ಕನೇ ಹಂತದಲ್ಲಿ ಬಳಸಲಾಗುತ್ತದೆ. ಈ ರಾಕೆಟ್‌ ಭಾರತೀಯ ಉಪಗ್ರಹಗಳ ಉಡಾವಣೆಗೆ ಬಳಸುವ ಪ್ರಮುಖ ರಾಕೆಟ್‌ ಆಗಿದೆ.

ಪಿಎಸ್‌ಎಲ್‌ವಿ ಮೊದಲನೇ ಹಂತದ ರಿಯಾಕ್ಷನ್‌ ಕಂಟ್ರೋಲ್‌ ಸಿಸ್ಟಮ್‌ನಲ್ಲೂ ಈ ಎಂಜಿನ್‌ ಬಳಸಲಾಗುತ್ತದೆ. ಇಸ್ರೋದ ಲಿಕ್ವಿಡ್‌ ಪ್ರಪಲÒನ್‌ ಸಿಸ್ಟಮ್ಸ್‌ ಸೆಂಟರ್‌(ಎಲ್‌ಪಿಎಸ್‌ಸಿ) ಅಭಿವೃದ್ಧಿಪಡಿಸಿರುವ ಈ ಎಂಜಿನ್‌, ನೈಟ್ರೋಜೆನ್‌ ಟೆಡ್ರಾ ಕ್ಸೆ„ಡ್‌ ಆ್ಯಕ್ಸಿಡೈಸರ್‌ ಆಗಿ ಮತ್ತು ಮೋನೋ ಮೆಥಿಲ್‌ ಹೈಡ್ರಾಜಿನ್‌ ಇಂಧ ನದ ಸಂಯುಕ್ತವಾಗಿ ಪ್ರಸರ್‌-ಫೆಡ್‌ ಮೋಡ್‌ನ‌ಲ್ಲಿ ಕೆಲಸ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next