Advertisement

ಕೋವಿಡ್ ಹೆಚ್ಚಳ ಪಾಕಿಸ್ಥಾನ ಸೂಪರ್‌ ಲೀಗ್ ಮುಂದೂಡಿಕೆ

12:12 AM Mar 05, 2021 | Team Udayavani |

ಕರಾಚಿ: ಪಾಕಿಸ್ಥಾನ ಸೂಪರ್‌ ಲೀಗ್‌ನಲ್ಲಿ  (ಪಿಎಸ್‌ಎಲ್‌) ದಿಢೀರ್‌ ಕೋವಿಡ್ ಪ್ರಕರಣ ಹೆಚ್ಚಿದ ಪರಿಣಾಮ ಟಿ20 ಕೂಟವನ್ನು ಮುಂದೂಡಲಾಗಿದೆ.

Advertisement

ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ ಗುರುವಾರ ಈ ನಿರ್ಧಾರವನ್ನು ಪ್ರಕಟಿಸಿತು. ಇದಕ್ಕೂ ಮುನ್ನ ಎರಡು ಫ್ರಾಂಚೈಸಿಗಳ ಮೂವರು ಆಟಗಾರರಿಗೆ ಕೋವಿಡ್  ವೈರಸ್‌ ದೃಢಪಟ್ಟಿರುವುದನ್ನು ಪಿಸಿಬಿ ತಿಳಿಸಿತ್ತು. ಆದರೆ ಇನ್ನೂ ಕೆಲವು ಆಟಗಾರರಿಗೆ ಸೋಂಕು ದೃಢಪಟ್ಟ ಕಾರಣ ಕೂಟವನ್ನೇ ಮುಂದೂಡುವ ನಿರ್ಧಾರಕ್ಕೆ ಬರಲಾಯಿತು.

ಕಳೆದ ವರ್ಷ ಇದೇ ಸಮಯದಲ್ಲಿ ಕೋವಿಡ್ ಕಾಣಿಸಿಕೊಂಡಾಗ ಸೆಮಿಫೈನಲ್‌ ಹಂತದಲ್ಲಿ ಪಿಎಸ್‌ಎಲ್‌ ಮುಂದೂಡಿದ್ದನ್ನು ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next