Advertisement
ಸುದ್ದಿಗಾರರ ಜತೆ ಮಾತನಾಡಿದ ಅವರು, ಪಿಎಸ್‌ಐ ನೇಮಕಾತಿ ಹಗರಣದಿಂದ ಬಹಳಷ್ಟು ಮಂದಿಗೆ ತೊಂದರೆಯಾಗಿದೆ. ನೇಮಕಾತಿಯೂ ನಿಂತು ಹೋಗಿದೆ. ಎಲ್ಲವೂ ಸರಿ ಹೋಗಿದ್ದರೆ 545 ಮಂದಿ ಪಿಎಸ್‌ಐಗಳ ನೇಮಕಾತಿಯಾಗಬೇಕಾಗಿತ್ತು, ಈಗ ಮತ್ತೆ ಗೃಹ ಇಲಾಖೆ 400 ಮಂದಿ ಪಿಎಸ್‌ಐಗಳ ನೇಮಕ ಮಾಡಿಕೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿದೆ. ಈ ಎರಡೂ ಸೇರಿ ಒಟ್ಟು ಸಾವಿರ ಮಂದಿ ಪಿಎಸ್‌ಐಗಳ ನೇಮಕಾತಿ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಕ್ಷಮೆ ಕೇಳುವ ಅಗತ್ಯವಿಲ್ಲ: ಶಾಸಕ ಬಿ.ಆರ್. ಪಾಟೀಲ್ ಕ್ಷಮೆ ಕೇಳಬೇಕಾಗಿಲ್ಲ, ಕ್ಷಮೆ ಕೇಳಿ ಎಂದು ಯಾರೂ ಹೇಳಿಲ್ಲ. ಬೇರೆ ಉದ್ದೇಶಕ್ಕೆ ನಾವು ಈ ರೀತಿ ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಸಿಎಲ್‌ಪಿ ಸಭೆ ಕರೆಯುವಂತೆ ಶಾಸಕರು ಮನವಿ ಮಾಡಿದ್ದರು. ಅದರಂತೆ ಸಭೆ ಕರೆದು ಚರ್ಚೆ ಮಾಡಲಾಗಿದೆ ಅಷ್ಟೆ. ಈ ಬಗ್ಗೆ ವಿನಾ ಕಾರಣ ಅರ್ಥ ಕಲ್ಪಿಸುವುದು ಅನಗತ್ಯ ಎಂದು ಹೇಳಿದರು.