ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪ ಮೇರೆಗೆ ಜೈಲು ಪಾಲಾಗಿರುವ, ಡಿವೈಎಸ್ಪಿ ಮಲ್ಲಿಕಾರ್ಜುನ ಸಾಲಿ ಸೇರಿದಂತೆ ಇತರ ಐದು ಜನರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಕಲಬುರಗಿಯ ಮೂರನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ್ದು ಇದರೊಂದಿಗೆ ಜೈಲುವಾಸ ಮುಂದುವರೆದಿದೆ.
ಅಮಾನತ್ತುಗೊಂಡ ಡಿವೈಎಸ್ಪಿ ಮಲ್ಲಿಕಾರ್ಜುನ್ ಸಾಲಿ, ಶಹಾಬಾದ್ ನಗರಸಭೆ ಎಸ್ ಡಿಎ ಜ್ಯೋತಿ ಪಾಟೀಲ್, ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿಯರಾದ ಸುನಂದಾ, ಅರ್ಚನಾ ಹಾಗೂ ಮಧ್ಯವರ್ತಿ ಶ್ರೀಧರ್ ಪವಾರ್ ಅವರ ಜಾಮೀನು ನ್ಯಾಯಾಲಯ ತಿರಸ್ಕರಿಸಲಾಗಿದೆ.
ನ್ಯಾಯಮೂರ್ತಿ ಬಸವರಾಜ್ ನೇಸರಗಿ ಜಾಮೀನು ನಿರಾಕರಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿದರೆ ಸ್ವಾಗತ: ಡಿ.ಕೆ.ಸುರೇಶ್