Advertisement

PSI ಮೌನೇಶ್ ವಿಷಯ ಕೈ ಬಿಡಿ : ಪ್ರತಿಭಟನಾಕಾರರಿಗೆ ಶ್ರೀರಾಮುಲು ಸಿಂಹಘರ್ಜನೆ ಸೇನೆಯಿಂದ ಮನವಿ

12:11 PM Mar 27, 2022 | Team Udayavani |

ಕುರುಗೋಡು : ವಿಚಾರಣೆ ನೆಪದಲ್ಲಿ ಇಬ್ಬರು ಯುವಕರಿಗೆ ಮನಸೋ ಇಚ್ಛೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಪಿಎಸ್ ಐ ಗೆ ಅಮಾನತು ಆದೇಶ ಹೊರಡಿಸಿ ಒಂದು ದಿನ ಕೂಡ ಆಗಿಲ್ಲ ಈಗಾಗಲೇ ಸಚಿವ ಬಿ.ಶ್ರೀರಾಮುಲು ಸಿಂಹಘರ್ಜನೆ ಸೇನೆ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಸೋಮಲಾಪುರ ಚಿದಾನಂದ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ನಾಯಕ್, ಗ್ರಾಪಂ ಸದಸ್ಯರಾದ ಸಿದ್ದಪ್ಪ, ಬೆಂಕಿ ಮಲ್ಲಿಕಾರ್ಜುನ, ಟಿ, ಪರುಶುರಾಮ್ ಇವರು ಈ ಘಟನೆ ಕುರಿತು ಪ್ರತಿಭಟನೆಕಾರರಿಗೆ ಮನವಿಯನ್ನು ರವಾನಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Advertisement

ಪಿಎಸ್ಐ ರಾಥೋಡ್ ಅವರು ಎಮ್ಮೆ ಕದ್ದ ಆರೋಪ ಬಂದ ಹಿನ್ನಲೆ ಮತ್ತು ದೂರು ನೀಡಿದ ಕಾರಣದಿಂದ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ಆರೋಪಿಗಳನ್ನು ವಿಚಾರಣೆಗೆ ಕರೆತಂದು ಘಟನೆಗೆ ಸಂಬಂಧಿಸಿದ ವಿಷಯವನ್ನು ತಿಳಿದುಕೊಳ್ಳಲು ಎರಡು ಏಟು ಹೊಡೆದಿರುತ್ತಾರೆ. ಆರೋಪಿಗಳನ್ನು ಮುದ್ದು ಮಾಡಿ ವಿಚಾರಣೆ ನಡೆಸಿದರೆ ತಪ್ಪು ಒಪ್ಪಿಕೊಳ್ಳುತ್ತಾರೆ ಇಲ್ವಾಲ್ಲ ಹಾಗಾಗಿ ಪಿಎಸ್ಐ ರಾಥೋಡ್ ಅವರು ತಮ್ಮ ಕೆಲಸ ತಾವು ಮಾಡಿದ್ದಾರೆ. ಅದನ್ನು ಬಿಟ್ಟು ಇತರ ದೊಡ್ಡ ಪ್ರಮಾಣದಲ್ಲಿ ವಿಷಯವನ್ನು ಹಬ್ಬಿಸುವುದು ಸರಿಯಲ್ಲ ಅದನ್ನು ಇಲ್ಲಿಗೆ ಕೈ ಬಿಡಬೇಕು ಎಂದು ಮನವಿ ಮಾಡಿಕೊಂಡಿರುವ ದೃಶ್ಯ ವಳಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ನೂ ಇತರ ದೊಡ್ಡ ಪ್ರಮಾಣದಲ್ಲಿ ವಿಷಯ ಹಬ್ಬಿಸುವುದಾದರು ಯಾರು. ಇದರ ಹಿಂದೆ ಯಾರು ಇದ್ದಾರೆ ಅಂತ ಕೂಡ ಪ್ರೆಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ನಾಳೆಯಿಂದ 9 ಎಸ್ಸೆಸ್ಸೆಲ್ಸಿ ಪರೀಕ್ಷೆ; ಪೂರ್ವಸಿದ್ಧತೆ ಪೂರ್ಣ

ಘಟನೆ ವಿವರ :

ವಿಚಾರಣೆ ನೆಪದಲ್ಲಿ ಇಬ್ಬರು ಯುವಕರಿಗೆ ಮನಸೋ ಇಚ್ಛೆ ಹೊಡೆದ ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ತಡರಾತ್ರಿ ಪ್ರತಿಭಟನೆ ನಡೆಸಿದ ಘಟನೆ ಕುರಗೋಡು ಪಟ್ಟಣದಲ್ಲಿ ಶುಕ್ರವಾರ ರಾತ್ರಿಯಿಂದ 2 ದಿನ ಪ್ರತಿಭಟನೆ ಮುಂದುವರಿದಿತ್ತು.

Advertisement

ಎಮ್ಮೆ ಕದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಯುವಕರಿಗೆ ಕುರುಗೋಡು ಪೊಲೀಸ್ ಠಾಣೆಯ ಪಿಎಸ್‌ಐ ಮೌನೇಶ್ ರಾಥೋಡ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಅಂತ ವದ್ದಟ್ಟಿ ಗ್ರಾಮಸ್ಥರು ಆರೋಪಿಸಿ ಠಾಣೆ ಮುಂದುಗಡೆ ಪ್ರತಿಭಟನೆ ಮಾಡಿ ಜೊತೆಗೆ ಠಾಣೆಯ ಒಳಗಡೆ ನುಗ್ಗಿ ಮಾತಿನ ಚಕಮಾಕಿ ಕೂಡ ನಡೆದಿತ್ತು.

ವಿಚಾರಣೆ ನೆಪದಲ್ಲಿ ಮಂಜುನಾಥ ಹಾಗೂ ಭರತ್ ಎನ್ನುವವರ ಮೇಲೆ ಪಿಎಸ್‌ಐ ರಾಥೋಡ್ ಅವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಹಿನ್ನಲೆ ಗಂಭೀರವಾಗಿ ಗಾಯಗೊಂಡಿದ್ದ ಭರತ್‌ಗೆ ಚಿಕಿತ್ಸೆ ಒಳಪಡಿಸಲಾಯಿತ್ತು. ಸದ್ಯಕ್ಕೆ ಪ್ರಾಣಾಪಾಯವಿಲ್ಲ ಅಂತ ವೈದ್ಯರು ಕೂಡ ತಿಳಿಸಿದ್ದರು.

ಆದ್ದರಿಂದ ಪಿಎಸ್ಐ ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಕಾನೂನು ಕ್ರಮ ಜರುಗಿಸಬೇಕು ಅಂತ ಕೂಡ ಹಲ್ಲೆಗೆ ಒಳಗಾದವರ ಕುಟುಂಬದ ಸದಸ್ಯರು ಒತ್ತಾಯ ಮಾಡಿದ್ರೂ ಇದಲ್ಲದೆ ವದ್ದಟ್ಟಿ ಗ್ರಾಮದ ದಲಿತ ಸಮುದಾಯಗಳು ಹಾಗೂ ಪಟ್ಟಣದ ದಲಿತ ಮುಖಂಡರು ಪಟ್ಟಣದ ಮುಖ್ಯ ವೃತ್ತದಲ್ಲಿ ಪ್ರತಿಭಟನೆಗೆ ಇಳಿದು ಮೇಲಾಧಿಕಾರಿಗಳು ಬರೋವರಿಗೂ ನಾವು ಪ್ರತಿಭಟನೆ ಯನ್ನು ನಿಲ್ಲಸಲ್ಲ ಎಂದು ಪಟ್ಟು ಹಿಡಿದಿದ್ರೂ ಈ ನಿಟ್ಟಿನಲ್ಲಿ ಸ್ಥಳಕ್ಕೆ ಎಸ್ಪಿ ಸೈದುಲ್ ಅಡಾವತ್ ಭೇಟಿ ಸಮಸ್ಯೆ ಯನ್ನು ಅರಿತು ಮನವಿಯನ್ನು ಸ್ವೀಕರಿಸಿ ಬಂಧನದ ನಿಯಮಗಳನ್ನು ಪಾಲಿಸಿಲ್ಲ ಎಂಬ ಕಾರಣದಿಂದ ಪಿಎಸ್ಐ ಮೌನೇಶ್ ರಾಥೋಡ್ ಹಾಗೂ ಪೆದೆ ಸುರೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next