ಕಲಬುರಗಿ : ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದು ಹೊರ ಬೀಳುತ್ತಿದ್ದಂತೆ ಹಣಕೊಟ್ಟು ಪಿಎಸ್ಐ ಪರೀಕ್ಷೆ ಪಾಸಾಗಿದ್ದ ಶಾಂತಾಬಾಯಿ ಮತ್ತು ಅಕ್ರಮಕ್ಕೆ ನೇರವಾಗಿ, ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿಗೆ ಹಣ ನೀಡಿದ ಆರೋಪ ಎದುರಿಸುತ್ತಿರುವ ಪತಿ ಬಸಯ್ಯ ನಾಯಕ್ ನಾಪತ್ತೆಯಾಗಿದ್ದು ಕೊನೆಗೂ ಎರಡು ತಿಂಗಳ ಬಳಿಕ ಸಿಐಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಗರಣ ಬಯಲಾಗುತ್ತಿದ್ದಂತೆಯೇ ಪಕ್ಕದ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಅಡಗಿಕೊಂಡಿದ್ದ ಇಬ್ಬರಿಗಾಗಿ ಕಳೆದ 2 ತಿಂಗಳಿಂದ ಸಿಐಡಿ ತಂಡ ಹುಡುಕುತ್ತಿತ್ತು. ಈ ಮಧ್ಯೆ ಒಟ್ಟು ಮೂವತ್ತ ಏಳಕ್ಕೂ ಹೆಚ್ಚು ಜನರ ಬಂಧನವಾಗಿದೆ, ಹಲವು ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಯುತ್ತಿದ್ದರೂ ಪಕ್ಕದ ರಾಜ್ಯದಲ್ಲಿ ತಣ್ಣಗೆ ತಲೆಮರೆಸಿಕೊಂಡು ಕಲಬುರಗಿಯಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳನ್ನು ತಿಳಿದುಕೊಂಡಿದ್ದ ಶಾಂತಾಬಾಯಿ ಮತ್ತು ಆಕೆಯ ಪತಿ ಬಸಯ್ಯ ನಾಯಕ್ ಅವರನ್ನು ಕಲ್ಬುರ್ಗಿಯ ಸಿಐಡಿ ತಂಡ ಕೊನೆಗೂ ಹಿಡಿದು ತರುವಲ್ಲಿ ಯಶಸ್ವಿಯಾಗಿದೆ.
ಈ ಇಬ್ಬರ ವಿಚಾರಣೆ ಬಳಿಕ ಇನ್ನಷ್ಟು ಹೊಸ ವಿದ್ಯಮಾನಗಳು ಹೊರಬೀಳುವ ಸಾಧ್ಯತೆಯಿದೆ ಹಣದ ವಿಲೇವಾರಿ ಮತ್ತು ಹಣವನ್ನು ತಲುಪಿಸಿರುವುದು ಯಾರಿಗೆ ಎನ್ನುವ ವಿಷಯಗಳು ಇನ್ನಷ್ಟು ಬಹಿರಂಗವಾಗಲಿವೆ.
ಇದನ್ನೂ ಓದಿ : ನೇಪಾಲ ವಿಮಾನ ದುರಂತ; ಮಹಾರಾಷ್ಟ್ರದ ನಾಲ್ವರು ಸೇರಿ ಎಲ್ಲಾ 22 ಮಂದಿ ಸಾವು: ವರದಿ