ಬಸವಕಲ್ಯಾಣ: ಗಾಂಜಾ ಆರೋಪಿಯನ್ನು ಬಂಧಿಸಲು ತೆರಳಿದಾಗ ರಸ್ತೆ ಅಪಘಾತದಲ್ಲಿ ಸಾವನಪ್ಪಿದ ತಾಲೂಕಿನ ದಾಸರವಾಡಿ ಗ್ರಾಮದ ನಿವಾಸಿ ಪಿಎಸ್‌ಐ ಅವಿನಾಶ್ ಕಾಶಿನಥ ರೋಳಾ ಅವರ ಅಂತ್ಯಕ್ರಿಯೆಯು ಸೋಮವಾರ ಮಧ್ಯಾಹ್ನ ಅವರ ಹುಟ್ಟೂರಿನಲ್ಲಿ ಶೋಕ ಸಾಗರದ ಮಧ್ಯೆ ಜರುಗಿತು.
ರವಿವಾರ ನಸುಕಿನ ಜಾವ ಆಂದ್ರದ ಚಿತ್ತೂರ ಬಳಿ ಖಾಸಗಿ ವಾಹನದಲ್ಲಿ ತೆರಳುತ್ತಿದ್ದಾಗ ಡಿವೈಡೈರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿ ಅವರು ಸ್ಥಳದಲ್ಲಿಯೇ ಸಾವನಪ್ಪಿದ್ದರು. ಅವಿನಾಶ ಅವರ ಪಾರ್ಥಿವ ಶರೀರ ಸೋಮವಾರ ನಸುಕಿನ ಜಾವ ಸ್ವಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು ಹಾಗೂ ಆಪ್ತರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಬೆಂಗಳೂರನ ಡಿವೈಎಸ್‌ಪಿ ವೈಜಿನಾಥ ಸೂರ್ಯವಂಶಿ ಅವರ ನೇತೃತ್ವದಲ್ಲಿ ಪಾರ್ಥಿವ ಶರೀರ ತರಲಾಯಿತು. ಬೆ. 9.30ರಿಂದ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಮಾಡಲಾಗಿತ್ತು. ಗ್ರಾಮಸ್ಥರು, ಅವರ ಸಹದ್ಯೋಗಿಗಳು ಅಂತಿಮ ದರ್ಶನ ಪಡೆದರು. ಬಳಿಕ ಜಮೀನುವರೆಗೆ ಮೆರವಣಿಗೆ ನಡೆಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಸಲಾಯಿತು.
ಇದನ್ನೂ ಓದಿ : ಆರ್‌ಎಸ್‌ಎಸ್ ಕಾರ್ಯಕರ್ತ ಸಾವನ್ನಪ್ಪಿದ್ದು ಹೃದಯಾಘಾತದಿಂದ : ಕೇರಳ ಪೊಲೀಸ್
ಅಂತ್ಯಕ್ರಿಯೆಯಲ್ಲಿ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರರು, ಶಾಸಕರಾದ ಶರಣು ಸಲಗರ, ರಾಜಶೇಖರ ಪಾಟೀಲ ಹುಮನಾಬಾದ, ಮಾಜಿ ಎಂಎಲ್ಸಿ ವಿಜಯಸಿಂಗ್, ಐಜಿಪಿ ಮನೀಷ್ ಖರ್ಬಿಕರ, ಹೆಚ್ಚುವರಿ ಎಸ್ಪಿ ಜಿಲ್ಲಾ ಮಹೇಶ ಮೇಘಣ್ಣನವರ, ಸಹಾಯಕ ಆಯುಕ್ತ ರಮೇಶ ಕೋಲಾರ, ತಹಸೀಲ್ದಾರ ಸಾವಿತ್ರಿ ಸಲಗರ, ಜಿಪಂ ಮಾಜಿ ಅಧ್ಯಕ್ಷ ಅನೀಲ ಭೂಸಾರೆ, ಮಾಜಿ ಸದಸ್ಯ ಗುಂಡುರೆಡ್ಡಿ ಪ್ರಮುಖರಾದ ಮಾಲಾ ನಾರಾಯಣರಾವ, ಆನಂದ ದೇವಪ್ಪ, ನೀಲಕಂಠ ರಾಠೋಡ, ಅರ್ಜುನ ಕನಕ