Advertisement

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ಕಿಂಗ್ ಪಿನ್ ಆರ್‌.ಡಿ.ಪಾಟೀಲ್ ಜೈಲಿನಿಂದ ಬಿಡುಗಡೆ

10:15 AM Dec 18, 2022 | Team Udayavani |

ಕಲಬುರಗಿ: ಪಿಎಸ್ ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ ಕಿಂಗ್‌ ಪಿನ್ ಆರ್.ಡಿ.ಪಾಟೀಲ್ ಶನಿವಾರ ತಡರಾತ್ರಿ ಕಲಬುರಗಿಯ ಕೇಂದ್ರ ಕಾರಾಗೃಹದಿಂದ ಜೈಲಿನಿಂದ ಬಿಡುಗಡೆ ಹೊಂದಿದ್ದಾರೆ.

Advertisement

ಕಲಬುರಗಿ ಹೈ ಕೋರ್ಟ್  ಮೂರು ದಿನಗಳ ಹಿಂದೆ  ಸಹೋದರರಾದ ಆರ್.ಡಿ.ಪಾಟೀಲ್ ಮತ್ತು ಮಹಾಂತೇಶ ಪಾಟೀಲ್ ಗೆ  ಜಾಮೀನು ನೀಡಿತ್ತು. ಮಹಾಂತೇಶ ಎರಡು ದಿನಗಳ ಜೈಲಿನಿಂದ ಬಿಡುಗಡೆ ಹೊಂದಿದ್ದರು.

ಆದರೆ,  ಆರ್. ಡಿ .ಪಾಟೀಲ್ ವಿರುದ್ಧ ಇನ್ನೂ 9 ಕೇಸ್ ಇದ್ದು, ಕೆಳ ನ್ಯಾಯಾಲಯದಲ್ಲಿ  ಗುವಿವಿ ಠಾಣೆ ಮತ್ತು ಸೆನ್ ಠಾಣೆಯಲ್ಲಿನ ಕೇಸ್ ಗೆ ಸಂಬಂಧಿಸಿದಂತೆ  ವಾರೆಂಟ್ ಇದ್ದವು. ಈ ಕಾರಣಕ್ಕೆ ಆರ್.ಡಿ.ಬಿಡುಗಡೆ ಆಗಿರಲಿಲ್ಲ.

ಹೈಕೋರ್ಟ್ ಜಾಮೀನು ನೀಡಿದ ಆದೇಶ ಪ್ರತಿಯೊಂದಿಗೆ ಅವರ ಪರ ವಕೀಲರಾದ ಅಶೋಕ ಮೂಲಗೆ ಅವರು ವಾರೆಂಟ್ ರಿ ಕಾಲ್ ಮಾಡಲು ಜೆಎಂಎಫ್ ಸಿ ನ್ಯಾಯಾಲಯ ಮುಂದೆ ಕೋರಿಕೊಂಡು ಆ ಪ್ರಕ್ರಿಯೆ ಶನಿವಾರ ಮುಗಿಸಿದರು. ಬಳಿಕ ಭದ್ರತೆ  ನೀಡುವುದು ಇತ್ಯಾದಿ ಕಾರ್ಯ ಮುಗಿದ ಬಳಿಕ ನಿನ್ನೆ ಶನಿವಾರ  ತಡರಾತ್ರಿ ಜೈಲಿನಿಂದ  ಆರ್ ಡಿ ಪಾಟೀಲ್ ಬಿಡುಗಡೆ ಹೊಂದಿದ್ದಾರೆ.

ಇದನ್ನೂ ಓದಿ: ಹಿಜಾಬ್‌ ವಿರೋಧಿ ಪ್ರತಿಭಟನಾಕಾರರಿಗೆ ಬೆಂಬಲ: ಆಸ್ಕರ್‌ ವಿಜೇತ, ಖ್ಯಾತ ನಟಿಯ ಬಂಧನ

Advertisement

ಸಂಭ್ರಮಾಚರಣೆಗೆ ಬ್ರೆಕ್:

ಮಹಾಂತೇಶ ಪಾಟೀಲ್ ಬಿಡುಗಡೆಯಾದ ಹೊತ್ತಿನಲ್ಲಿ  ಅವರ ಬೆಂಬಲಿಗರು ಸಂಭ್ರಮಾಚರಣೆ ಮಾಡಿರುವುದು, ಹಲವರು  ಭೇಟಿ ಮಾಡಿ ವಿವಾದ ಆಗಿತ್ತು. ಇದು ಹಾಗೆ ಆಗಬಾರದು ಎನ್ನುವ ಕಾರಣಕ್ಕೆ ಯಾರಿಗೂ ಮಾಹಿತಿ ನೀಡದೆ ಜೈಲಿನಿಂದ ನೇರವಾಗಿ ತಮ್ಮ ಆಪ್ತರೊಂದಿಗೆ ಗುಪ್ತವಾಗಿ ಮನೆಗೆ ತೆರಳಿದ್ದಾರೆ ಎಂದು ಗೊತ್ತಾಗಿದೆ.

” ನಾನು ಜೈಲಿನಿಂದ ಬಿಡುಗಡೆಯಾಗಿದ್ದು ತನ್ನನ್ನ ಕಾಣಲು ಮನೆ ಅಥವಾ ಕಚೇರಿಗೆ ಯಾರು ಬರಬೇಡಿ ಎಂದು ಆರ್‌.ಡಿ.ಪಾಟೀಲ್ ಸಂದೇಶ ರವಾನೆ ಮಾಡಿದ್ದು, ಫೇಸ್‌ಬುಕ್‌ ಖಾತೆ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ. ನನ್ನ ಅಭಿಮಾನಿಗಳು ಹಿತೈಷಿಗಳು ನನ್ನನ್ನು ಕಾಣಲು ಕಾತುರದಿಂದ ಕಾಯುತ್ತಿದ್ದಿರಿ. ನನ್ನನ್ನು ವಿಜೃಂಭಣೆಯಿಂದ ಸ್ವಾಗತಿಸಲು ಖರ್ಚು ವೆಚ್ಚ ಮಾಡಿಕೊಂಡಿದ್ದರಿ.

ಆದರೆ ಕೆಲವು ವೈಯಕ್ತಿಕ  ಕೆಲಸದಿಂದ ಕಲಬುರಗಿಯಿಂದ ಹೊರಗಡೆ ಹೋಗಿದ್ದೇನೆ. ಒಂದು ವಾರದಲ್ಲಿ ಅಫಜಲಪುರಕ್ಕೆ ಬಂದು ನಿಮ್ಮ ಸೇವೆಯಲ್ಲಿ ತೋಡಗಿಕೊಳ್ಳುವೆ” ಎನ್ನುವ ಸಂದೇಶ ನೀಡಿದ್ದು ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next