Advertisement
ಘಟನೆಯ ವಿವರ: ರಮ್ಜಾನ್ ಸಂದರ್ಭದಲ್ಲಿ ಫಜೀರಿನ ಅಡ್ಕದ ಕ್ರೈಸ್ತ ಧರ್ಮಕ್ಕೆ ಸೇರಿದವರ ಮನೆಯಲ್ಲಿ ಮುಸ್ಲಿಂ ಸಮುದಾಯದ ಗೋಮಾಂಸ ಮಾರಾಟ ಮಾಡುತ್ತಿದ್ದ ನಾಲ್ವರು ಮನೆಯಲ್ಲೇ ಅಕ್ರಮ ಕಸಾಯಿಖಾನೆ ನಡೆಸಿ ಸಂಘಟನೆಯೊಂದರ ಕೈಯಲ್ಲಿ ಪೆಟ್ಟು ತಿಂದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಘಟನೆಯನ್ನು ಸುಖಾಂತ್ಯಗೊಳಿಸಿದ್ದರು. ಅಕ್ರಮ ಕಸಾಯಿಖಾನೆ ಮಾಡಿ ದನವನ್ನು ಕೊಂದ ಆರೋಪಿಗಳನ್ನು ಮೊಬೈಲ್‌ನಲ್ಲಿ ವೈರಲ್ ಆಗಿರುವ ಉತ್ತರ ಭಾರತದ ಅಪ್ರಾಪ್ತ ವಯಸ್ಕಳನ್ನು ಅತ್ಯಾಚಾರ ನಡೆಸಿದ ಆರೋಪಿಯನ್ನು ನಾಗರಿಕರೇ ಹಿಂಸಿಸಿ ಕೊಲೆ ನಡೆಸಿದ ವೀಡಿಯೋ ಮತ್ತು ಚಿತ್ರವನ್ನು ಡೌನ್‌ಲೋಡ್ ಮಾಡಿ ಅತ್ಯಾಚಾರ ಆರೋಪಿಯ ಸತ್ತ ಫೋಟೋದ ಪಜೀರಿನಲ್ಲಿ ಅಕ್ರಮ ಕಸಾಯಿಖಾನೆ ನಡೆಸಿದ ಆರೋಪಿಗಳಿಗೂ ಇದೇ ಗತಿ ಕಾಣಿಸಬೇಕು ಎಂದು ಕ್ಯಾಪ್ಶನ್ ಹಾಕಿ ಸ್ಟೇಟಸ್‌ನಲ್ಲಿ ಮೋಹನ್ ಹಾಕಿದ್ದು, ಸ್ಟೇಟಸ್ ನೋಡಿ ಪಜೀರಿನ ಲ್ಯಾನ್ಸಿ ಡಿ’ಸೋಜಾ ಮೋಹನ್ ವಿರುದ್ಧ ದೂರು ದಾಖಲಿಸಿದ್ದರು.
ಮೋಹನ್ ಪ್ರಕರಣ ಮಾತ್ರ ಅಲ್ಲದೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮೂರು ತಿಂಗಳಿನಿಂದ ಇಂತಹ ಅನೇಕ ಪ್ರಕರಣಗಳು ದಾಖಲಾಗಿವೆ. ಬಿಜೆಪಿಯ ರಾಜಕೀಯ ಮುಖಂಡ ಅಶ್ರಫ್ ಹರೇಕಳ ಅವರ ಫೋಟೋ ಹಾಕಿ ವಾಟ್ಸ್‌ಆ್ಯಪ್ ಮೂಲಕ ಅವಹೇಳನ ಮಾಡುವ ಲೇಖನ ಹಾಕಿದ ವಿಚಾರದಲ್ಲಿ ಪ್ರಕರಣ ದಾಖಲಾಗಿದ್ದು, ಹಿಂದೂ ಸಂಘಟನೆಯ ಮುಖಂಡ ಪ್ರೇಮ್ ಹರೇಕಳ ಅವರ ಫೋಟೋ ಹಾಕಿ ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಆರೋಪಿಯೆಂದು ಬಿಂಬಿಸಿ ತೇಜೋವಧೆ ನಡೆಸುವ ಯತ್ನ ನಡೆದಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚಿನ ಆರೋಪಿಗಳು ಕೋರ್ಟ್‌ನಲ್ಲೇ ಶರಣಾಗತ
ರಾಗಿ ಜಾಮೀನು ಪಡೆದುಕೊಂಡರೆ, ಶನಿವಾರ ನಡೆದ ಪ್ರಕರಣದ ಆರೋಪಿ ಮೋಹನ್ ದೂರು ದಾಖಲಾಗುತ್ತಿದ್ದಂತೆ ಕೊಣಾಜೆ ಪೊಲೀಸ್ ಠಾಣೆಗೆ ಆಗಮಿಸ್ನಿ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.