Advertisement

ಲಡಾಖ್‌ಗೆ ವಜ್ರಕವಚ; ಎಲ್‌ಎಸಿಯಲ್ಲಿ ಹೆಚ್ಚಿದ ಚೀನ ಸೇನೆ

12:50 AM Oct 03, 2021 | Team Udayavani |

ಲಡಾಖ್‌: ಲಡಾಖ್‌ನ ಪೂರ್ವ ಭಾಗ ಮತ್ತು ಉತ್ತರ ಭಾಗದಲ್ಲಿ ಚೀನ ಹೆಚ್ಚಿನ ಸಂಖ್ಯೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಸಹಿತ ಯೋಧರ ಪಡೆ ನಿಯೋಜಿಸಿದೆ.

Advertisement

ಹೀಗಾಗಿ, ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಭಾರತ ಕೂಡ ಅಲ್ಲಿಗೆ “ಕೆ-9′ ವಜ್ರ ಟ್ಯಾಂಕರ್‌ಗಳನ್ನು ರವಾನಿಸಿದೆ. ಜಗತ್ತಿನ ಅತ್ಯಂತ ಎತ್ತರದಲ್ಲಿರುವ ಯುದ್ಧಭೂಮಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಭೂಸೇನಾ ಮುಖ್ಯಸ್ಥ ಜ| ಎಂ.ಎಂ. ನರವಾಣೆ ಈ ಮಾಹಿತಿ ನೀಡಿದ್ದಾರೆ.

ಚೀನ ನಡೆಸಿ ರುವ ಈ ಕ್ರಮ ನಿಜಕ್ಕೂ ದೇಶಕ್ಕೆ ಕಳವಳ ತರುವ ವಿಚಾರ ಎಂದು ಹೇಳಿದ್ದಾರೆ. ಭಾರತ-ಚೀನ ನಡು ವಿನ ಗಡಿಯ 18 ಸೂಕ್ಷ್ಮ ಪ್ರದೇಶಗಳನ್ನು ಗುರುತಿ ಸಲಾಗಿದ್ದು, ಅಲ್ಲಿಯೇ ಹೆಚ್ಚುವರಿ ಸೇನೆ ನಿಯೋಜಿಸಲಾಗಿದೆ. ಟಿ-90 ಟ್ಯಾಂಕರ್‌ಗಳನ್ನೂ ರವಾನಿಸಲಾಗಿದೆ.

“ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯ ಮಂಚೂಣಿ ಪ್ರಾಂತ್ಯಗಳಲ್ಲಿ ಸೇನಾ ಬಲವನ್ನು ಹೆಚ್ಚಿಸಿ ದ್ದೇವೆ. ಚೀನದ ಯಾವುದೇ ದುಃಸ್ಸಾಹಕ್ಕೆ ತಡೆಯೊ ಡ್ಡಲು ಸಮರ್ಥರಾಗಿದ್ದೇವೆ ಮತ್ತು ನಮ್ಮ ಸಿದ್ಧತೆ ಯನ್ನು ಆಗಾಗ ಪರಿಶೀಲಿಸಲಾಗುತ್ತದೆ’ ಎಂದಿದ್ದಾರೆ ಜ| ನರವಾಣೆ.

ಇದನ್ನೂ ಓದಿ:ನಮಾಮಿ ಗಂಗೆ ಯೋಜನೆಗೆ ಚಾಚಾ ಚೌಧರಿ ಲಾಂಛನ

Advertisement

ಚೀನ ಸೇನಾ ಜಮಾವಣೆ ಹೆಚ್ಚಿಸಿದ್ದರಿಂದ ನಾವೂ ನಮ್ಮ ಸೇನಾ ಬಲವನ್ನು ಹೆಚ್ಚಿಸಿ ದ್ದೇವೆ. ಹಾಗೆಯೇ ಗಡಿಯಾಚೆಗೆ ಆಗುವ ಎಲ್ಲ ರೀತಿಯ ಬದಲಾ ವಣೆಗಳಿಗೆ ನಾವೂ ಇತ್ತ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತೇವೆ. ಎಲ್ಲ ಆಯಕಟ್ಟಿನ ಜಾಗಗಳಲ್ಲಿ ನಾವು ಭದ್ರತೆ ಹೆಚ್ಚಿಸುವ ಮೂಲಕ ಯಾವುದೇ ಕ್ಷಣದಲ್ಲಿ ಉಂಟಾಗುವ ಪ್ರಕ್ಷುಬ್ಧ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿದ್ದೇವೆ. ಹಾಗಾಗಿಯೇ ಸಮುದ್ರ ಮಟ್ಟಕ್ಕಿಂತ ಅತೀ ಎತ್ತರದ ಪ್ರದೇಶಗಳಲ್ಲಿ ಕಾರ್ಯಾ ಚರಣೆ ನಡೆಸಬಲ್ಲ ಟ್ಯಾಂಕರ್‌ಗಳನ್ನೇ ಈ ಭಾಗದಲ್ಲಿ ನಿಯೋಜಿಸಲಾಗಿದೆ’ ಎಂದು ನರವಾಣೆ ತಿಳಿಸಿದ್ದಾರೆ.

ಭಾರತ ಮತ್ತು ಚೀನ ನಡುವೆ ಮುಂದಿನ ವಾರ 13ನೇ ಸುತ್ತಿನ ಸೇನಾಧಿಕಾರಿಗಳ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲಿ ಗಡಿ ತಂಟೆ ಬಗೆಹರಿಸುವ ಬಗ್ಗೆ ಪ್ರಸ್ತಾವ ಮಾಡಲಾಗುತ್ತದೆ ಎಂದಿದ್ದಾರೆ.

ಎರಡು ಬಾರಿ ಕದನ ವಿರಾಮ ಉಲ್ಲಂಘನೆ
ಫೆಬ್ರವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಪಾಕಿಸ್ಥಾನ ಕದನ ವಿರಾಮ ಪಾಲಿಸಿಕೊಂಡು ಬಂದಿದೆ. ಇತ್ತೀಚೆಗೆ, ಆ ದೇಶ, ಎರಡು ಬಾರಿ ಕದನ ವಿರಾಮ ಉಲ್ಲಂ ಸಿದೆ. ಈ ಬಗ್ಗೆ ಪಾಕಿಸ್ಥಾನದ ಸೇನಾಧಿಕಾರಿಗಳಗೆ ಮಾಹಿತಿ ನೀಡಲಾಗಿದೆ. ಇದರ ನಡುವೆ, ಗಡಿಯಲ್ಲಿ ಒಳನುಸುಳುವಿಕೆ ಪ್ರಮಾಣ ಹೆಚ್ಚಾಗಿದೆ ಎಂದು ನರವಾಣೆ ತಿಳಿಸಿದ್ದಾರೆ.

ವಜ್ರದ ಹೆಗ್ಗಳಿಕೆ ಏನು?
ಎಲ್‌ ಆ್ಯಂಡ್‌ ಟಿ ನಿರ್ಮಾಣ
ದಕ್ಷಿಣ ಕೊರಿಯಾದ ಹನ್ವಾ ಡಿಫೆನ್ಸ್‌ನ ಮೂಲ ತಂತ್ರಜ್ಞಾನ
50 ಕಿ.ಮೀ. ದೂರದ ವರೆಗೆ ಶತ್ರು ನೆಲೆ ಛೇದನ

Advertisement

Udayavani is now on Telegram. Click here to join our channel and stay updated with the latest news.

Next