Advertisement

Provision of short term crop loan: ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಕೃಷಿ ತಜ್ಞರ ಸಭೆ

11:57 PM Jan 12, 2024 | Team Udayavani |

ಮಂಗಳೂರು: 2024-25ನೇ ಸಾಲಿಗೆ ಅಲ್ಪಾವಧಿ ಬೆಳೆ ಸಾಲ ಮಿತಿಯನ್ನು ನಿಗದಿ ಪಡಿಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿ ತಜ್ಞ ಪ್ರತಿನಿ ಧಿಗಳ ಸಮಾಲೋಚನ ಸಭೆಯು ಎಸ್‌ಸಿಡಿಸಿಸಿ ಬ್ಯಾಂಕಿನಲ್ಲಿ ಶುಕ್ರವಾರ ನಡೆಯಿತು.

Advertisement

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕ್‌ 2023-24ನೇ ಸಾಲಿಗೆ ಬೆಳೆಸಾಲಗಳ ಗುರಿಯು 2,133.00 ಕೋಟಿ ರೂ. ಆಗಿದ್ದು, 31-03-2023ರ ಅಂತ್ಯಕ್ಕೆ ಹೊರಬಾಕಿ 1,674.00 ಕೋಟಿ ರೂ. ಆಗಿರುತ್ತದೆ. ಈಗಾಗಲೇ 1633.43 ಕೋಟಿ ರೂ. ಬೆಳೆಸಾಲ ನೀಡಿದೆ ಎಂದರು.
ನಬಾರ್ಡ್‌ ಪುನರ್ಧನ ಸಾಲ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕಿನ ಸ್ವಂತ ಬಂಡವಾಳದಿಂದ ಕೃಷಿ ಉದ್ದೇಶಕ್ಕಾಗಿ 2022-23ನೇ ಸಾಲಿನಲ್ಲಿ ಒಟ್ಟು 150.20 ಕೋಟಿ ರೂ. ಅವಧಿ ಸಾಲವನ್ನು ನೀಡಲಾಗಿದೆ. 2023-24ನೇ ಸಾಲಿಗೆ ಈಗಾಗಲೇ 82.09 ಕೋಟಿ ರೂ. ಮಧ್ಯಮಾವಧಿ/ದೀರ್ಘಾವಧಿ ಕೃಷಿ ಸಾಲವನ್ನು ಬ್ಯಾಂಕ್‌ ನೀಡಿದೆ ಎಂದು ತಿಳಿಸಿದರು.
2024-25ನೇ ಸಾಲಿಗೆ ವಿವಿಧ ಬೆಳೆಗಳಿಗೆ ಕೊಡತಕ್ಕ ಅಲ್ಪಾವಧಿ ಬೆಳೆಸಾಲದ ಮಿತಿಯನ್ನು ಕೃಷಿ ತಜ್ಞ ಪ್ರತಿನಿಧಿಗಳೊಂದಿಗೆ, ನಬಾರ್ಡ್‌, ಲೀಡ್‌ ಬ್ಯಾಂಕ್‌, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಇಲಾಖೆ, ತೋಟಗಾರಿಕೆ, ಕೃಷಿ ಹಾಗೂ ಇತರ ಇಲಾಖಾಧಿಕಾರಿಗಳ ಸಮಾಲೋಚನೆಯ ಮೂಲಕ ನಿಗದಿಪಡಿಸಲಾಯಿತು.

ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್‌ ಸೂರಿಂಜೆ, ನಿರ್ದೇಶಕರಾದ ಎಂ. ವಾದಿರಾಜ್‌ ಶೆಟ್ಟಿ, ಶಶಿಕುಮಾರ್‌ ರೈ, ಎಸ್‌. ಬಿ. ಜಯರಾಮ ರೈ, ಕೆ. ಜೈರಾಜ್‌ ಬಿ. ರೈ, ಅಶೋಕ್‌ ಕುಮಾರ್‌ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಚ್‌.ಎನ್‌. ರಮೇಶ್‌, ನಬಾರ್ಡ್‌ ಡಿಡಿಎಂ ಸಂಗೀತಾ ಕರ್ತಾ, ಬ್ಯಾಂಕಿನ ಸಿಇಒ ಕೆ. ಗೋಪಾಲಕೃಷ್ಣ ಭಟ್‌ ಕೆ, ಲೀಡ್‌ ಜಿಲ್ಲಾ ಪ್ರಬಂಧಕಿ ಸುಮನಾ ಶಿವರಾಮ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಸಹಾಯಕ ನಿರ್ದೇಶಕಿ ಪ್ರೇಮಾ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಎಚ್‌.ಆರ್‌. ನಾಯಕ್‌, ಸಹಾಯಕ ನಿರ್ದೇಶಕ ದರ್ಶನ್‌ ಕೆ., ಪಶುಸಂಗೋಪನ ಇಲಾಖೆಯ ಉಪ ನಿರ್ದೇಶಕ ಡಾ| ಅರುಣ್‌ಕುಮಾರ್‌ ಶೆಟ್ಟಿ, ವಲಯ ಪಶು ವೈದ್ಯಾಧಿಕಾರಿ ಡಾ| ಗಜೇಂದ್ರ ಕುಮಾರ್‌, ಫಿಶ್‌ ಮಾರ್ಕೆಟಿಂಗ್‌ ಫೆಡರೇಶನ್‌ನ ಎಂ.ಡಿ. ದರ್ಶನ್‌ ಕೆ.ಟಿ., ಕರ್ಣಾಟಕ ಬ್ಯಾಂಕಿನ ಅಧಿಕಾರಿ ಅಜಿತ್‌ ಕುಮಾರ್‌ ಕೆ.ಎ., ಸಹಕಾರ ಸಂಘಗಳ ಸಹಾಯಕ ನಿಬಂಧಕ ಸುಧೀರ್‌ ಕುಮಾರ್‌, ತ್ರಿವೇಣಿ ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಒಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next