ಬನಹಟ್ಟಿ: ಮನುಷ್ಯನಿಗೆ ಜೀವನದಲ್ಲಿ ತೃಪ್ತಿ ಎನ್ನುವುದು ಇರಬೇಕು ಎಂದು ಬನಹಟ್ಟಿಯ ಹಿರಿಯ ದಿವಾಣಿ ನ್ಯಾಯಾ ಧೀಶರಾದ ರೇಷ್ಮಾ ಗೋಣಿ ಹೇಳಿದರು. ರಬಕವಿಯ ಶಂಕರಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿ ಕಾರ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಂಘಟಿತ ಕಾರ್ಮಿಕರಿಗೆ ಸರಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಕಾರ್ಮಿಕರು ಸಂಘಟಿತರಾಗಿ ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು. ರಾಮಪುರದ ಪವಾಡ ಸಿದ್ದಲಿಂಗೇಶ್ವರ ಮಠದ ಸಂಗಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ನೇಕಾರ ಸೇವಾ ಸಂಘ, ಅಧ್ಯಕ್ಷ ಶಿವಲಿಂಗ ಟಿರ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಮಖಂಡಿ ಕಾರ್ಮಿಕ ನೀರಿಕ್ಷಕ ಜಿ.ಬಿ. ಧೂಪದ ಕಾರ್ಮಿಕರ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಯಾಗಿ ಹಿರಿಯ ವಕೀಲರಾದ ಎಂ. ಜಿ. ಕೆರೂರ, ವಕೀಲರ ಸಂಘದ ಅಧ್ಯಕ್ಷ ಎಸ್. ಎಂ. ಫಕೀರಪುರ, ಎಸ್. ಎಸ್. ಗೊಳಸಂಗಿ ಆಗಮಿಸಿದ್ದರು. ರವಿ ಕೊರತಿ, ಶ್ರೀಶೈಲ ಕೊಪ್ಪದ, ಸಂತೋಷ ಮಾಚಕನೂರ, ರಾಮಣ್ಣ ಕುಲಗೊಡ, ಆನಂದ ಖವಟಗಿ, ಬಸವರಾಜ ಜಮಖಂಡಿ, ಪ್ರಕಾಶ ಅಥಣಿ, ರಾಜೇಂದ್ರ ಮಿರ್ಜಿ, ಸಂಗಮೇಶ ಮರೆಗುದ್ದಿ, ಮಲ್ಲಪ್ಪ ಗುಳೆದಗುಡ್ಡ ಸೇರಿದಂತೆ ಅನೇಕರು ಇದ್ದರು. ಬಸವರಾಜ ಮನ್ಮಿ ನಿರೂಪಿಸಿದರು. ಸದಾಶಿವ ಕೊಕಟನೂರ ವಂದಿಸಿದರು.
■ಲೋಕಾಪುರ: ಕಟ್ಟಡ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಅಭಿವೃದ್ಧಿ ಸೇವಾ ಸಂಘದ ವತಿಯಿಂದ ಕಾರ್ಮಿಕರ ದಿನಾಚರಣೆ ನಿಮಿತ್ತ ಸ್ಥಳೀಯ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಸ್ಲಂ ಹಳ್ಳದಮನಿ, ಹಸನ ನದಾಫ್, ವಿಠ್ಠಲ ಗಿರಸಾಗರ, ಮಂಜು ಭೋವಿ, ಬಂದೆನಮಾಜ ರಾಮದುರ್ಗ, ಶ್ರೀಪತಿ ಹೂಗಾರ, ಮಾನಿಂಗಪ್ಪ ಹುಂಡೇಕರ, ಮೈಬೂಬಸಾಬ ಹಳ್ಳದಮನಿ, ಭುಜಂಗ ಬೋವಿ, ಸಂಜು ಬೋವಿ, ಶಿವು ಬೋವಿ, ಬಂದೆನಮಾಜ ತೋರಗಲ್ಲ, ಶಿವು ಕೌಜಲಗಿ, ಸುಭಾನಿ ಜಮಾದಾರ, ವಿಠ್ಠಲ ಕೌಜಲಗಿ, ಅಲ್ಲಾಬಕ್ಷ ಹಳ್ಳದಮನಿ, ಮೌಸೀನ ರಾಮದುರ್ಗ, ಅಬ್ದುಲ ರಾಮದುರ್ಗ, ಶಬ್ಬೀರ ಜಾಗೀರದಾರ ಹಾಗೂ ಕಟ್ಟಡ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಸೇವಾ ಸಂಸ್ಥೆ ಮತ್ತು ಅಸಂಘಟಿತ ಕಾರ್ಮಿಕ ಕಲ್ಯಾಣ ಅಭಿವೃದ್ಧಿ ಸೇವಾ ಸಂಘದ ಪದಾಧಿಕಾರಿಗಳು ಹಾಗೂ
ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.