ಸಂಡೂರು: ಮಳೆ ಇಲ್ಲದೆ ರೈತರು ಧೂಳಿನಿಂದ ಸಂಕಷ್ಟ ಅನುಭವಿಸಿದರೆ, ಈಗ ಮಳೆ ಬಂದು ಗಣಿ ಪ್ರದೇಶದ ಚೆಕ್ ಡ್ಯಾಂ ಗಳು ಒಡೆದು ತಾಲೂಕಿನ ಭುಜಂಗನಗರ ಗ್ರಾಮದ ರೈತರ ನೂರಾರು ಎಕರೆ ಭೂಮಿ ಗಣಿ ಮಣ್ಣಿನಿಂದ ಮುಚ್ಚಿದ್ದು ಸೂಕ್ತ ಪರಿಹಾರ ಕೊಡಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಬಿ.ಎಂ. ಉಜ್ಜಿನಯ್ಯ ಒತ್ತಾಯಿಸಿದರು.
ಅವರು ತಾಲೂಕಿನ ಭುಜಂಗನಗರ ಗ್ರಾಮದಹಿಂಭಾಗದಲ್ಲಿ ನದೀಂ ಗಣಿ ಕಂಪನಿ ಮತ್ತು ಎನ್ ಎಂಡಿಸಿ ಗಣಿ ಕಂಪನಿಗಳ ಚೆಕ್ ಡ್ಯಾಂ ಮತ್ತು ಸ್ಲರಿ ಸಂಗ್ರಹ ಕೇಂದ್ರಗಳು ಒಡೆದ ಪರಿಣಾಮ ವಿಪರೀತ ನಷ್ಟಕ್ಕೆ ರೈತರು ಒಳಗಾಗಿದ್ದಾರೆ, ಗಣಿ ಕಂಪನಿಗಳಿಗೆ ಈ ಹಿಂದಿನ ವರ್ಷವೂ ಸಹ ಎಚ್ಚರಿಕೆಯನ್ನು ನೀಡಲಾಗಿತ್ತು. ಅದರೆ ಅದನ್ನು ಲೆಕ್ಕಿಸದ ಕಂಪನಿಗಳು ಇಂದು ರೈತರ ಕೈಗೆ ಬಂದ ಬೆಳೆ ಮಣ್ಣು ಪಾಲಾಗುವಂತೆ ಮಾಡಿದ್ದಾರೆ.
ಅಲ್ಲದೆ ಈ ಹಿಂದೆ ಎನ್‌ಎಂಡಿಸಿ ಗಣಿ ಕಂಪನಿಯವರ ಸ್ಲರಿ ಡ್ಯಾಂ ಒಡೆದು ಇಡೀ ಭುಜಂಗನಗರ ರೈತರ ಭೂಮಿಗಳಬೆಳೆ ಮತ್ತು ಬೋರುಗಳೂ ಸಹ ಮುಚ್ಚಿಕೊಂಡು ಹೋಗಿದ್ದವು, ಖುದ್ದು ಕೃಷಿ ಇಲಾಖೆಯೂ ಸಹ ಅಪಾರ ನಷ್ಟದ ವರದಿ ಕೊಟ್ಟರೂ, ಎಸ್.ಆರ್.ಹಿರೇಮಠ ಅವರು ಹೋರಾಟ ಮಾಡಿದರೂ ಸಹ ಸರಿಯಾದ ಪ್ರತಿಫಲ, ಪರಿಹಾರವನ್ನು ಕೊಡಲಿಲ್ಲ, ಈಗ ಅದೇ ರೀತಿಯಲ್ಲಿ ಮತ್ತೂಮ್ಮೆ ನಷ್ಟಕ್ಕೆ ರೈತರುಸಿಲುಕಿದ್ದಾರೆ. ಅವರಿಗೆ ತಕ್ಷಣ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ಶಿವಕುಮಾರ್, ಕೃಷಿ ಅ ಧಿಕಾರಿ ನಾಗರಾಜ ಅವರು ಪ್ರತಿಕ್ರಿಯಿಸಿ ಇಲಾಖೆಯಿಂದ ತಕ್ಷಣ ನಷ್ಟದ ಪ್ರಮಾಣವನ್ನು ಸರ್ವೇ ಮಾಡಿ ಯಾರ ಜಮೀನಿನಲ್ಲಿಯಾವ ಬೆಳೆಗಳು ನಷ್ಟಕ್ಕೆ ಗುರಿಯಾಗಿವೆ, ಎಷ್ಟು ಪ್ರಮಾಣದಲ್ಲಿ ಎಂಬುದನ್ನು ಗುರುತಿಸಿ ಪರಿಹಾರಕ್ಕೆ ಗಣಿ ಕಂಪನಿಗಳ ಮಾಲೀಕರನ್ನು ನೇರವಾಗಿಕರೆದು ಚರ್ಚಿಸಿ ಪರಿಹಾರದ ಸೂಕ್ತ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆಯನ್ನುನೀಡಿದರು. ಈ ಸಂದರ್ಭದಲ್ಲಿ ಭುಜಂಗನಗರ ಗ್ರಾಮದ ರೈತರು, ರೈತ ಸಂಘದ ಅದ್ಯಕ್ಷರು, ಪದಾಧಿಕಾರಿಗಳು, ಅಧಿಕಾರಿಗಳು ಇದ್ದರು.