Advertisement

ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಿ

04:49 PM Oct 30, 2021 | Team Udayavani |

ಬಳ್ಳಾರಿ: ಸರ್ಕಾರ ನೀಡುವ ವೇತನಕ್ಕೆ ಸರಿಯಾಗಿ ಕೆಲಸ ಮಾಡಬೇಕು. ಹಣ ಅಥವಾ ಬೇರೆ ಯಾವುದೇ ದುರಾಸೆಗೆ ಬೀಳದೆ ಸಾರ್ವಜನಿಕರಿಗೆ ನಿಸ್ವಾರ್ಥ ಸೇವೆ ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್‌.ಮಂಜುನಾಥ ಹೇಳಿದರು.

Advertisement

ನಗರದ ಡಿಸಿ ಕಚೇರಿಯ ಕೆಸ್ವಾನ್‌ ವೀಡಿಯೋ ಸಭಾಂಗಣದಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‌ ಠಾಣೆ ವತಿಯಿಂದ ಭ್ರಷ್ಟಾಚಾರ ವಿರುದ್ಧದ ಜಾಗೃತಿ ಅರಿವು ಹ ನ?ಸಪ್ತಾಹದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉದ್ದೇಶಪೂರ್ವಕವಾಗಿ ಸಾರ್ವಜನಿಕರಿಗೆ ತೊಂದರೆ ಕೊಡುವ ಕೆಲಸ ಮಾಡಬಾರದು. ಸರ್ಕಾರದ ಸೇವೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ವಿನಾಕಾರಣ ತಡ ಮಾಡದೆ, ನಿಗದಿತ ಸಮಯದಲ್ಲಿ ಸೇವೆ ಒದಗಿಸಬೇಕು. ನೀವು ತೆಗೆದುಕೊಳ್ಳುವ ಸಂಬಳಕ್ಕೆ ಯೋಗ್ಯವಾದ ಕೆಲಸ ಮಾಡಬೇಕು. ಜೀವನದಲ್ಲಿ ಪ್ರಾಮಾಣಿಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕೋರಿದರು.

ಎಸಿಬಿ ಬಳ್ಳಾರಿ ವಲಯದ ಪೊಲೀಸ್‌ ಅಧಿಧೀಕ್ಷಕ ಗುರುನಾಥ ಬ.ಮತ್ತೂರ ಮಾತನಾಡಿ, ಇಂದಿನ ಯುವ ಜನತೆ ಪಣ ತೊಟ್ಟರೆ, ಭಷ್ಟಾಚಾರವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು. ಆತ್ಮಸಾಕ್ಷಿ, ಮನಸಾಕ್ಷಿಗೆ ಅನುಗುಣವಾಗಿ ಕೆಲಸಮಾಡಬೇಕು ಮತ್ತು ಭಷ್ಟಾಚಾರವನ್ನು ಸಂಪೂರ್ಣವಾಗಿ ತೊಲಗಿಸಲು ಎಲ್ಲರೂಕೈಜೋಡಿಸಬೇಕು. ಪಾರದರ್ಶಕವಾಗಿ, ಕಾನೂನಿನ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಬೇಕು ಎಂದು ವಿವರಿಸಿದರು. ಭ್ರಷ್ಟಾಚಾರ ನಿಗ್ರಹದಳದ ಆರಕ್ಷಕ ಉಪ ಅಧಿಧೀಕ್ಷಕ ಎ.ಸೂರ್ಯನಾರಾಯಣ ರಾವ್‌ ಮಾತನಾಡಿ, ಸರ್ಕಾರಿ ನೌಕರರು ಸರ್ಕಾರ ನಿಗದಿಪಡಿಸುವ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು. ಯಾವುದೇ ಅವ್ಯವಹಾರಕ್ಕೆ ಮುಂದಾಗಬಾರದು. ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದಿಸಿದರೆ ಅಂತವರನ್ನು ವಿಚಾರಣೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಭ್ರಷ್ಟಾಚಾರನಿಗ್ರಹದಳದ ಆರಕ್ಷಕ ನಿರೀಕ್ಷಕ ಪ್ರಭುಲಿಂಗಯ್ಯ ಹಿರೇಮಠ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next