Advertisement
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದಲ್ಲಿ ಈ ವಿಷಯ ಪ್ರಸ್ತಾಪಿಸಿದ ರಘುಪತಿ ಭಟ್, ಆಳ ಸಮುದ್ರದಲ್ಲಿ ಏನಾದರೂ ದುರಂತ ಸಂಭವಿಸಿದರೆ ರಕ್ಷಣಾ ಕಾರ್ಯಾಚರಣೆಗೆ ಹೆಚ್ಚಿನ ಸಾಮರ್ಥಯದ ಬೋಟ್ ಬೇಕು. ಅದಕ್ಕಾಗಿ 20 ಮೀಟರ್‌ನ ರೆಸ್ಕೂé ಅಪರೇಷನ್ ಬೋಟ್ ಒದಗಿಸಬೇಕು. ಜೊತೆಗೆ, ಸೀ ಆ್ಯಂಬುಲೆನ್ಸ್ ಸಹ ಒದಗಿಸಬೇಕು ಎಂದು ಮನವಿ ಮಾಡಿದರು.
Related Articles
Advertisement
ಸಮುದ್ರದಲ್ಲಿ 12 ನಾಟಿಕಲ್ ಮೈಲ್ ದಾಟಿ ಬರುವ ಹೊರರಾಜ್ಯದ ಬೋಟ್‌ಗಳಿಗೆ ಮೀನಿನ 5 ಪಟ್ಟು ಹೆಚ್ಚು ದಂಡ ವಿಧಿಸಲು ಕಾನೂನಿಗೆ ತಿದ್ದುಪಡಿ ತರಬೇಕು. ಇದರಿಂದ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟಬಹುದು ಎಂದು ರಘುಪತಿ ಭಟ್ ಸಚಿವರು ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವ ಅರಗ ಜ್ಞಾನೇಂದ್ರ, 12 ನಾಟಿಕಲ್ ಮೈಲ್ ದಾಟಿ ಬರಬೇಕೆಂದರೆ ಕೋಸ್ಟ್‌ಗಾರ್ಡ್ ದಾಟಿ ಬರಬೇಕು. ಅದಕ್ಕೆ ಕೋಸ್ಟ್‌ಗಾರ್ಡ್ ಬಿಡಲ್ಲ. ಅದಾಗ್ಯೂ ಶಾಸಕರ ಬೇಡಿಕೆಯನ್ನು ಪರಿಶೀಲಿಸಲಾಗುವುದು ಎಂದರು.
ಜೊತೆಗೆ, ಕಳ್ಳ ಸಾಗಾಣಿಕೆ, ಮಾದಕ ದ್ರವ್ಯ ಸಾಗಾಣಿಕೆ ಇನ್ನಿತರ ಚಟುವಟಿಕೆಗಳನ್ನು ನಿರ್ಬಂಧಿಸುವಲ್ಲಿ ನಿರಂತರವಾಗಿ ಗುಪ್ತಚರ ಮಾಹಿತಿ ವಿನಿಮಯ ಸಭೆಯನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಮತ್ತು ಇತರೆ ಏಜೆನ್ಸಿಯವರೊಂದಿಗೆ ಆಯೋಜಿಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಏಜೆನ್ಸಿಗಳು ತಂತ್ರಜ್ಞಾನ ಬಳಸಿಕೊಂಡು, ಗುಪ್ತಚರ ಮಾಹಿತಿ ವಿನಿಮಯ ನಿರಂತರವಾಗಿ ಮಾಡಿಕೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಎಲ್ಲಾ ಇಲಾಖಾ ಅಧಿಕಾರಿಗಳ ಸಂಪುರ್ಣ ಸಹಕಾರದೊಂದಿಗೆ ಕರ್ತವ್ಯ ನಿರ್ವಹಿಸಲಾಗುತ್ತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.