ರಾಮನಗರ: ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ನಿರ್ಮಿಸಲು ನೋಟಿಸ್ ನೀಡದೆ. ಪರಿಹಾರವನ್ನು ನೀಡದೇ ಮರಗಳನ್ನು ಕತ್ತರಿಸಿ ಹಾಕಿರುವ ಕ್ರಮ ಸರಿಯಲ್ಲ. ಪರಿಹಾರ ನೀಡಿ ನಂತರ ಕಾಮಗಾರಿ ಆರಂಭಿಸುವಂತೆ ಜಿಲ್ಲಾಡಳಿತ ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನ ಸೆಳೆಯುವುದಾಗಿ ಎಂ.ಎಲ್.ಸಿ ಸಿ.ಎಂ.ಲಿಂಗಪ್ಪ ಭರವಸೆ ನೀಡಿದರು.
ತಾಲೂಕಿನ ವಿಜಯಪುರ ಗ್ರಾಮದ ಬಳಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ಕೆಲವು ದಿನಗಳ ಹಿಂದೆ ಮಾವಿನ ಮರಗಳನ್ನು ಕಡಿದು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ರೈತರ ಮನವಿ ಆಲಿಸಿದ ಅವರು ಮಾತನಾಡಿ, ವಿಜಯಪುರ ಗ್ರಾಮಕ್ಕೆ ಸಂಬಂಧಿಸಿದಂತೆ ಹೆದ್ದಾರಿ ರಸ್ತೆಗೆ ಬೇಕಾಗಿರುವ ಭೂಮಿ, ಅದರಲ್ಲಿರುವ ಮರಗಳು ಇತ್ಯಾದಿ ವಿವರಗಳನ್ನು ಕಲೆ ಹಾಕುವಂತೆ ತಾವು ಸರ್ವೇ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಖೀತು ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಭೂಮಿಗೆ ಅರಣ್ಯ ಇಲಾಖೆ ದುಡ್ಡು ಪಡೆದಿದೆ: ಈ ವೇಳೆ ಮಾತನಾಡಿದ ರೈತರು, ತಾವೆಲ್ಲ ಕಣ್ವ ನಿರಾಶ್ರಿತರು, ಮೈಸೂರು ಮಹಾರಾಜರು ತಮ್ಮ ಕುಟುಂಬಗಳಿಗೆ ಈ ಸ್ಥಳ ನೀಡಿದ್ದಾರೆ. ಉಳುಮೆ ಮಾಡಿ ಬದುಕು ಕಟ್ಟಿಕೊಂಡಿದ್ದೇವೆ. ಆದರೆ, ಪ್ರಾಧಿಕಾರ ತಮಗೆ ನೋಟಿಸನ್ನು ನೀಡದೆ, ಪರಿಹಾರವನ್ನು ಘೋಷಿಸದೇ ಏಕಾ ಏಕಿ ಮರಗಳನ್ನು ಕತ್ತರಿಸಿ ಹಾಕಿದೆ. ಅರಣ್ಯ ಇಲಾಖೆ ಭೂಮಿ ತನ್ನದು ಎಂದು ಹೇಳುತ್ತಿದೆ. ಅರಣ್ಯ ಇಲಾಖೆಯ ಮಾತನ್ನೇ ನಂಬಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪರಿಹಾರದ ಮೊತ್ತವನ್ನು ಅರಣ್ಯ ಇಲಾಖೆಗೆ ಕೊಟ್ಟಿದೆ ಎಂಬ ಮಾಹಿತಿ ಇದೆ. ಪ್ರಾಧಿಕಾರ ನಮ್ಮ ಬದುಕಿನ ಮೇಲೆ ಪೆಟ್ಟು ಕೊಟ್ಟಿದೆ ಎಂದು ಅಲವತ್ತುಕೊಂಡರು.
ರೈತರಿಗೆ ಬೆದರಿಕೆ: ಪರಿಹಾರ ಕೊಡುವಂತೆ ತಾವೆಲ್ಲ ಪ್ರಾಧಿಕಾರದ ಯೋಜನಾಧಿಕಾರಿಗಳ ಬಳಿ ಮನವಿ ಮಾಡಿದರೆ, ಅವರು ಉದ್ದಟತನದ ಮಾತನಾಡುತ್ತಿದ್ದಾರೆ. ಪೊಲೀಸರನ್ನು ಕರೆಸುವುದಾಗಿ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ರೈತರು ದೂರಿದರು. ಅ.15ರೊಳಗಾಗಿ ಸಮಸ್ಯೆ ಇತ್ಯರ್ಥ: ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ತಾವು ವಿಜಯಪುರ ವಿಚಾರದಲ್ಲಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿದ್ದು, ಅ.15ರೊಳಗಾಗಿ ಸಮಸ್ಯೆ ಇತ್ಯರ್ಥ ಪಡಿಸುವು