Advertisement
ನಂತರ ಮಾತನಾಡಿದ ಅವರು, ಗ್ರಾಮದ 1ನೇ ಅಂಗನವಾಡಿ ಕೇಂದ್ರವು ಕಳೆದ ಹಲವು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿನ ಕಟ್ಟಡದಲ್ಲಿ ನಡೆಯುತ್ತಿತ್ತು. ಆದರೆ ಸಮರ್ಪಕ ಮೂಲ ಸೌಕರ್ಯ ಇರಲಿಲ್ಲ. ಇದರ ಜತೆಗೆ ಕಳೆದ 3 ವರ್ಷಗಳಿಂದೀಚೆ ಕಟ್ಟಡ ಶಿಥಿಲಾ ವಸ್ಥೆ ಯ ಹಂತ ತಲುಪಿತ್ತು. ಇದರಿಂದ ಮಕ್ಕಳು ಹಾಗೂ ನೌಕರರು ತೊಂದರೆ ಪಡುವಂತಾಗಿತ್ತು ಎಂದರು.
Related Articles
Advertisement
ಹುತ್ತೂರು ಶಾಲೆಗೆ ಭೇಟಿ: ಬಳಿಕ ಹುತ್ತೂರು ಗ್ರಾಮಕ್ಕೆ ತೆರಳಿದ ಶಾಸಕರು ಅಲ್ಲಿನ ಉನ್ನತೀಕರಿಸಿದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪ್ರಗತಿ ಹಂತದಲ್ಲಿರುವ ಶಾಲಾ ಕಟ್ಟಡದ ಕಾಮಗಾರಿಯನ್ನು ವೀಕ್ಷಿಸಿ ಸಂಬಂಧಪಟ್ಟವರಿಗೆ ಕಾಮಗಾರಿ ಗುಣಮಟ್ಟವನ್ನು ಕಾಯ್ದು ಕೊಳ್ಳುವುದರ ಮೂಲಕ ಬೇಗ ಪೂರ್ಣ ಗೊಳಿಸಬೇಕು ಎಂದು ಸೂಚಿಸಿದರು.
ಇದೇ ವೇಳೆ ಬಿಸಿಯೂಟ ಸವಿಯುುತ್ತಿದ್ದ ವಿದ್ಯಾ ರ್ಥಿಗಳ ಬಳಿ ತೆರಳಿ ಊಟದ ರುಚಿ, ಶುಚಿಯ ಬಗ್ಗೆ ಮಕ್ಕಳಿಂದ ಅನಿಸಿಕೆ ಪಡೆದುಕೊಂಡರು. ಈ ವೇಳೆ ಮಕ್ಕಳು ಬಿಸಿಯೂಟ ಉತ್ತಮವಾಗಿ ನೀಡುತ್ತಿದ್ದಾರೆ ಸರ್ ಎಂಬ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯೆ ಶಿವಮ್ಮ, ಲೊಕ್ಕನಹಳ್ಳಿ ಗ್ರಾಪಂ ಅಧ್ಯಕ್ಷ ರಂಗಶೆಟ್ಟಿ, ಸದಸ್ಯರಾದ ಮಲ್ಲಯ್ಯ, ರುದ್ರಪ್ಪ, ಸನ್ನಿಯಪ್ಪ, ಇತರರು ಇದ್ದರು.
1.30 ಕೋಟಿ ವೆಚ್ಚದ ಕಾಮಗಾರಿಗೆ ಭೂಮಿಪೂಜೆ:
ಲೊಕ್ಕನಹಳ್ಳಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಲೋಕೋ ಪಯೋಗಿ ಇಲಾಖಾ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಮಂಜೂರಾಗಿದ್ದ 1.30 ಕೋಟಿ ರೂ. ವೆಚ್ಚದಲ್ಲಿನ ಸಿ.ಸಿ. ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಆರ್. ನರೇಂದ್ರ ಭೂಮಿಪೂಜೆ ನೆರವೇರಿಸಿದರು.
ಕ್ಷೇತ್ರ ವ್ಯಾಪ್ತಿಯ ಕಂಡಯ್ಯನಪಾಳ್ಯ, ಬೂದಿ ಪಡಗ, ಪಿ.ಜಿ ಪಾಳ್ಯ, ಹುತ್ತೂರು ಹಾಗೂ ಇನ್ನಿತರೆ ಗ್ರಾಮಗಳಲ್ಲಿ ಭೂಮಿಪೂಜೆ ನೆರವೇರಿಸಿದ ಬಳಿಕ ಮಾತನಾಡಿ, ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ 400 ಕ್ಕೂ ಹೆಚ್ಚು ಗ್ರಾಮಗಳಿದ್ದು, ಗಿರಿಜನರು, ಪರಿಶಿಷ್ಟ ಜಾತಿ, ಪಂಗಡ, ಅಲ್ಪ ಸಂಖ್ಯಾತರು ಸೇರಿದಂತೆ ಇನ್ನು ಹಲವು ವರ್ಗದ ಜನರಿದ್ದಾರೆ ಎಂದರು.
ಈಗಾಗಲೇ ಕಳೆದ ಅವಧಿಯಲ್ಲಿ ಎಸ್‌ಇಪಿ, ಟಿಎಸ್‌ಪಿ ಯೋಜನೆಯಡಿ ಗಿರಿಜನರು ಹಾಗೂ ಪರಿಶಿಷ್ಟ ಜಾತಿ, ಪಂಗಡದ ಜನರು ವಾಸಿಸುವ ಕಾಲನಿಗಳಲ್ಲಿ ಶೇಕಡ 80ರಷ್ಟು ಸಿ.ಸಿ. ರಸ್ತೆ ಹಾಗೂ ಚರಂಡಿಯನ್ನು ನಿರ್ಮಿಸಲಾಗಿದ್ದು, ಇನ್ನುಳಿದ ಶೇ.20ರಷ್ಟು ಗ್ರಾಮದ ಕೆಲವು ಕಾಲನಿಗಳಲ್ಲಿ ಸಿ.ಸಿ. ಹಾಗೂ ಚರಂಡಿ ರಸ್ತೆ ನಿರ್ಮಿಸಿರಲಿಲ್ಲ. ಈ ಬಗ್ಗೆ ಸರ್ಕಾರಕ್ಕೆ ತಂದು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಈ ದಿಸೆಯಲ್ಲಿ ಲೊಕ್ಕನಹಳ್ಳಿ ಜಿಪಂ ಕ್ಷೇತ್ರ ವ್ಯಾಪ್ತಿಗೆ 1.30 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಇದೀಗ ಭೂಮಿಪೂಜೆ ನೆರವೇರಿಸಲಾಗುತ್ತಿದೆ ಎಂದು ತಿಳಿಸಿದರು.
ಗುಣಮಟ್ಟ ಕಾಯ್ದುಕೊಳ್ಳಿ: ಕಾಮಗಾರಿಯ ಜವಾ ಬ್ದಾರಿ ಹೊತ್ತವರು ಗುಣಮಟ್ಟವನ್ನು ಕಾಯ್ದು ಕೊಳ್ಳುವುದರ ಮೂಲಕ ಬೇಗ ಪೂರ್ಣ ಗೊಳಿಸ ಬೇಕು. ಒಂದು ವೇಳೆ ಕಾಮಗಾರಿ ಕಳಪೆಯಿಂದ ಕೂಡಿದ್ದರೆ ಬಿಲ್ ತಡೆಹಿಡಿಯ ಲಾಗುವುದು. ಆಗಾಗಿ ಗುತ್ತಿಗೆದಾರರು ಎಚ್ಚರ ವಹಿಸಬೇಕು. ಈ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು. ಜತೆಗೆ ಗ್ರಾಮಸ್ಥರು ಕಾಮಗಾರಿಯ ವೇಳೆ ಪರಿಶೀಲನೆ ನಡೆಸಬೇಕು. ಕಾಮಗಾರಿ ಕಳಪೆಯಿಂದ ಕೂಡಿದ್ದರೆ ನನ್ನ ಹಾಗೂ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು. ಜಿಪಂ ಸದಸ್ಯೆ ಮರಗದಮಣಿ, ತಾಪಂ ಅಧ್ಯಕ್ಷ ರಾಜೇಂದ್ರ, ಸದಸ್ಯೆ ಶಿವಮ್ಮ, ಗ್ರಾಪಂ ಅಧ್ಯಕ್ಷೆ ಪುಷ್ಪಾ, ಸದಸ್ಯರಾದ ದಾಸೇಗೌಡ, ಪುಟ್ಟಮ್ಮ, ಪಿಡಬ್ಯುಡಿ ಇಇ ರಮೇಶ್, ಎಇಇ ಮಹದೇವ ಸ್ವಾಮಿ, ಗುತ್ತಿಗೆದಾರರಾದ ನಾತೀಕ್ ಪಾಷಾ, ಶಿವಶಂಕರ, ಶಾಂತರಾಜು ಮುಖಂಡ ರಾದ ಕೆ.ಸಿ ಮಾದೇಶ್, ರವಿಕುಮಾರ್ ಇದ್ದರು.