Advertisement
ಕೋವಿಡ್-19 ಸಂದರ್ಭದಲ್ಲಿಯೂ ತಮ್ಮ ಪ್ರಾಣವನ್ನು ಲೆಕ್ಕಿಸದೇ, ಫಲಾನು ಭವಿಗಳ ಗಣನೀಯ ಸೇವೆ ಮಾಡಿದ್ದಾರೆ. ಈ ಸಂದರ್ಭ ದಲ್ಲಿ ಕೆಲವು ಸಾವಿಗೂ ತುತ್ತಾಗಿದ್ದಾರೆ. ಆದರೂ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರು ಕನಿಷ್ಠ ಸೌಲಭ್ಯವಿಲ್ಲ, ಸರ್ಕಾರಿ ಸವಲತ್ತುಗಳಿಲ್ಲದೇ ಕೆಲಸ ಮಾಡುತ್ತಿ ದ್ದಾರೆ ಎಂದು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ತಿಳಿಸಿದ್ದಾರೆ.
– ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಪುನರ್‌ರಚನೆಯ ಹೆಸರಿನಲ್ಲಿ ಅಂಗನವಾಡಿಗಳಲ್ಲಿ ಐಸಿಡಿಎಸ್ ಅನ್ನು ಖಾಸಗೀಕರ ಣಗೊಳಿಸುವುದನ್ನು ನಿಲ್ಲಿಸಿ.
– “ಪೋಷಣ್ ಮಟ್ಕಾ’ದಂತಹ ಯೋಜನೆಗಳ ಪರಿಚಯಿಸುವು ದನ್ನು ಮೊದಲು ಕೈಬಿಡಿ.
– ಎನ್‌ಇಪಿ-2020 ಅನ್ನು ಹಿಂದೆಗೆದುಕೊಂಡು, ಆರ್‌ಇಟಿ ಕಾಯ್ದೆಯಡಿ 0-6 ವಯಸ್ಸಿನ ಮಕ್ಕಳನ್ನು ಒಳಗೊಂಡ ಪ್ರತ್ಯೇಕ ಸಮಗ್ರ ಕಾನೂನು ರಚಿಸಬೇಕು.
– ಅಪೌಷ್ಟಿಕತೆ, ಕಾಯಿಲೆಗಳು, ಅನಕ್ಷರತೆಯಿಂದ ಸಮಾಜ ವನ್ನು ಮುಕ್ತಗೊಳಿಸಲು ಅಂಗನವಾಡಿಗಳನ್ನು ನೋಡಲ್ ಕೇಂದ್ರಗಳನ್ನಾಗಿ ಮಾಡಬೇಕು.
– ಎಲ್ಲ ಅಂಗನವಾಡಿ ಕಾರ್ಯಕರ್ತೆಯರನ್ನು 3ನೇ ದರ್ಜೆ ಮತ್ತು ಸಹಾಯಕರನ್ನು 4ನೇ ದರ್ಜೆಯ ಸರಕಾರಿ ನೌಕರರನ್ನಾಗಿ ನೇಮಿಸಬೇಕು.
– ಗ್ರಾಚ್ಯುಟಿ, ಪಿಂಚಣಿ, ಭವಿಷ್ಯ ನಿಧಿ, ವೈದ್ಯಕೀಯ ಸೌಲಭ್ಯಗಳು ಇತ್ಯಾದಿ ಸೇರಿದಂತೆ ಸಾಮಾಜಿಕ ಭದ್ರತಾ ಪ್ರಯೋಜನಗಳನ್ನು ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಒದಗಿಸಬೇಕು.
– ಇಎಸ್‌ಐ, ಇಪಿಎಫ್ ಯೋಜನೆ ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸೇರಿಸಬೇಕು.
– ಅಂಗನವಾಡಿ ನೌಕರರಿಗೆಂದು ರಾಷ್ಟ್ರೀಯ ಮಟ್ಟದ ಕಲ್ಯಾಣ ನಿಧಿ ರಚಿಸಬೇಕು.
– ಅಂಗನವಾಡಿ ಕಾರ್ಯಕರ್ತೆಯರಿಗೆ 32,000 ರೂ.ಗಳ ನುರಿತ ಕಾರ್ಮಿಕರ ಕನಿಷ್ಠ ವೇತನ ಮತ್ತು ಅರೆ ಕುಶಲ ಕಾರ್ಯಕರ್ತರಿಗೆ, ಸಹಾಯಕರಿಗೆ ರೂ.26,000 ವೇತನ ನೀಡಬೇಕು.
– ಅಂಗನವಾಡಿ ನೌಕರರಿಗೆ ವೇತನ ಸಹಿತ ವೈದ್ಯಕೀಯ ರಜೆ ನೀಡಬೇಕು.
– ಮಿನಿ-ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿ ರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಮಾನ್ಯ ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಾನವಾದ ವೇತನ ಮತ್ತು ಸವಲತ್ತುಗಳನ್ನು ನೀಡಬೇಕು.
– “ಪೋಷಣ್ ಟ್ರ್ಯಾಕರ್’ ಆ್ಯಪ್ ಹೆಸರಿನಲ್ಲಿ ಕಾರ್ಮಿಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು.
– ಸ್ಮಾರ್ಟ್‌ಫೋನ್‌ಗಳು, ಡೇಟಾ ಮತ್ತು ನಿರ್ವಹಣೆಯ ಎಲ್ಲ ವೆಚ್ಚಗಳನ್ನು ವಾಸ್ತವಿಕವಾಗಿ ಪಾವತಿಸಬೇಕು.
– ದೇಶಾದ್ಯಂತ ಮಕ್ಕಳ ಪೌಷ್ಟಿಕಾಂಶದ ಸ್ಥಿತಿಯನ್ನು ತಿಳಿದುಕೊಳ್ಳಲು ವಾರ್ಷಿಕ ವರದಿಯನ್ನು ಬಡುಗಡೆಗೊಳಿಸಬೇಕು.
– ಅಂಗನವಾಡಿ ನೌಕರರಿಗೆ ವಾರ್ಷಿಕ ಶೇ.10ರಷ್ಟು ವೇತನ ಹೆಚ್ಚಳ ಮಾಡಬೇಕು. ಇದು ಬಾಕಿ ಉಳಿದಿದ್ದು, ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವ ವೇತನ ಹೆಚ್ಚಳವನ್ನು ಸಹಾಯಕಿಯರಿಗೂ ವಿಸ್ತರಿಸಬೇಕು.
– ಶುದ್ಧ ಕುಡಿಯುವ ನೀರು, ಗ್ಯಾಸ್ ಸಂಪರ್ಕ, ಆಧುನಿಕ ಅಡುಗೆ ಸಲಕರಣೆಗಳಾದ ಕುಕ್ಕರ್, ಎಲೆಕ್ಟ್ರಿಕ್ ರೊಟ್ಟಿ ಮೇಕರ್, ಇಡ್ಲಿ ಮೇಕರ್ ಮುಂತಾದ ಎಲ್ಲ ಮೂಲಸೌಕರ್ಯಗಳನ್ನು ಒದಗಿಸಬೇಕು.
– ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರನ್ನು ಎಎನ್‌ಎಂ, ಪ್ರಾಂತಿಕ ಶಾಲಾ ಶಿಕ್ಷಕಿಯರು, ಗ್ರಾಮ ಸೇವಕರು ಎಂಬ ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ನೀಡಬೇಕು.
– ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಅಕಾ ಲಿಕ ಮರಣಕ್ಕೆ ತುತ್ತಾದರೆ, ಅವರ ಮಕ್ಕಳಿಗೆ ಅನುಕಂಪದ ಆಧಾರದ ಮೇಲೆ ಯವುದೇ ಷರತ್ತುಗಳಿಲ್ಲದೇ ಕೆಲಸ ನೀಡಬೇಕು.