Advertisement

ಟೌನ್‌ಶಿಪ್‌ನಲ್ಲಿ ಮೂಲಸೌಕರ್ಯ ಕಲ್ಪಿಸಿ

04:57 PM Oct 06, 2020 | Suhan S |

ಬಳ್ಳಾರಿ: ನಗರದ ಹೊರವಲಯದ ಮುಂಡರಗಿ ಆಶ್ರಯ ಮಹಾತ್ಮಗಾಂಧಿ ಟೌನ್‌ಶಿಪ್‌ ಅಡಿ ಜಿ+2 ಮಾದರಿಯ ಮನೆಗಳ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಎಸ್‌.ಎಸ್‌ .ನಕುಲ್‌ ಅಧ್ಯಕ್ಷತೆಯಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

Advertisement

ಮುಂಡರಗಿ ವಸತಿ ಯೋಜನಾ ಪ್ರದೇಶದ ಸಭಾಂಗಣದಲ್ಲಿಯೇ ನಡೆದ ಸಭೆಯಲ್ಲಿ ಇದುವರೆಗೆ ಆಗಿರುವ ಪ್ರಗತಿ, ಫಲಾನುಭವಿಗಳ ವಂತಿಗೆ, ಬ್ಯಾಂಕ್‌ಗಳ ಸಹಕಾರ ಹಾಗೂ ಇನ್ನೂ ಆಗಬೇಕಾದ ಕೆಲಸ-ಕಾರ್ಯಗಳ ಕುರಿತು ಸುದೀರ್ಘ‌ ಚರ್ಚೆಗಳು ನಡೆದವು. ಮುಂಡ್ರಿಗಿ ಟೌನ್‌ಶಿಪ್‌ನಲ್ಲಿ ಈಗಾಗಲೇ 5616 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಮೊದಲನೇ ಹಂತದಲ್ಲಿ 2592 ಮನೆಗಳನ್ನು ನಿರ್ಮಿಸಲು ಮತ್ತು ಉಳಿದ ಮನೆಗಳನ್ನು ಎರಡನೇ ಹಂತದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. 2259 ಫಲಾನುಭವಿಗಳು ವಂತಿಕೆ ಪಾವತಿಸಿದ್ದಾರೆ. ಉಳಿದ 250 ಫಲಾನುಭವಿಗಳು ವಂತಿಗೆ ಪಾವತಿಸಿದ ನಂತರ ದಾಖಲೆಗಳನ್ನು ಪಡೆದು ಅಟ್ಯಾಚ್‌ಮೆಂಟ್‌ ಮಾಡಲು ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಸಭೆಗೆ ತಿಳಿಸಿದರು.

ಇದರಲ್ಲಿ 1265 ಫಲಾನುಭವಿಗಳಿಗೆ ಕೆನರಾ ಬ್ಯಾಂಕ್‌, 994 ಫಲಾನುಭವಿಗಳಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಸಾಲ-ಸೌಲಭ್ಯ ಕಲ್ಪಿಸಲಿದೆ. 1055 ಎಸ್ಸಿ/ಎಸ್ಟಿ ಫಲಾನುಭವಿಗಳು, 1204ಇತರೆ/ಅಲ್ಪಸಂಖ್ಯಾತ ಫಲಾನುಭವಿಗಳುಸೇರಿದಂತೆ ಒಟ್ಟು 2259 ಫಲಾನುಭವಿಗಳು 4.59 ಕೋಟಿ ರೂ.ಹಣ ಪಾವತಿಸಿದ್ದಾರೆ. ಎಸ್ಸಿ/ಎಸ್ಟಿ ಫಲಾನುಭವಿಗಳಿಗೆ 50 ಸಾವಿರ ಮತ್ತು ಇತರೆ/ ಅಲ್ಪಸಂಖ್ಯಾತ ಸಮುದಾಯಗಳಿಗೆ 1 ಲಕ್ಷ ರೂ. ಮುಂಗಡ ವಂತಿಕೆ ಗುರಿ ನಿಗದಿಪಡಿಸಲಾಗಿತ್ತು ಎಂದು ಅವರು ವಿವರಿಸಿದರು.

ಮೂಲಸೌಕರ್ಯ ಕಲ್ಪಿಸಲು ಸೂಚನೆ: ಮುಂಡರಗಿ ವಸತಿ ಯೋಜನೆಯ ಇದುವರೆಗಿನ ಸಂಪೂರ್ಣ ಪ್ರಗತಿಯನ್ನು ಪರಿಶೀಲಿಸಿದ ಡಿಸಿ ನಕುಲ್‌ ಅವರು ಈ ಟೌನ್‌ಶಿಪ್‌ನಲ್ಲಿ ರಸ್ತೆ,ಒಳಚರಂಡಿ, ನೀರು ಸರಬರಾಜು ಮಾಡುವನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆ, ಒಳಚರಂಡಿ ಹಾಗೂ ಇನ್ನಿತರೆ ಸೌಕರ್ಯಗಳು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಕೂಡಲೇ ಅಂದಾಜುಪಟ್ಟಿ ಸಲ್ಲಿಸುವಂತೆ ಸೂಚನೆ ನೀಡಿದ ಡಿಸಿ ನಕುಲ್‌ ಅವರು, ಈಗಾಗಲೇ ಎಲ್ಲೆಲ್ಲಿ ಮನೆಗಳು ನಿರ್ಮಿಸಲಾಗಿದೆಯೋ ಅಲ್ಲಲ್ಲಿ ಮೊದಲು ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಕ್ರಮವಹಿಸಲಾಗುವುದು ಮತ್ತು ಈ ಟೌನ್‌ಶಿಫ್‌ ಬಳಿ ಕೈಗಾರಿಕೆಗಳು ಸ್ಥಾಪಿಸುವ ನಿಟ್ಟಿನಲ್ಲಿಯೂ ಈಗಾಗಲೇ ಪ್ರಯತ್ನ ನಡೆಸಿರುವುದನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಮುಂಡರಗಿ ವಸತಿ ಯೋಜನೆಗೆ ಎಲ್ಲ ರೀತಿಯಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಸಭೆಯಲ್ಲಿ ಪಾಲ್ಗೊಂಡು ಅನೇಕ ಸಲಹೆ-ಸೂಚನೆಗಳನ್ನು ನೀಡಿದರು. ಬಳಿಕ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಗೂ ಮುನ್ನ

Advertisement

ಜಿಲ್ಲಾ ಧಿಕಾರಿ ಎಸ್‌.ಎಸ್‌.ನಕುಲ್‌ ಅವರು ನಿರ್ಮಿಸಲಾಗಿರುವ ಜಿ+2 ಮನೆಗಳನ್ನು ಪರಿಶೀಲಿಸಿದರು. ಸಭೆಯಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ರಾಹುಲ್‌ ಸಂಕನೂರು, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕಾರ್ಯನಿರ್ವಾಹಕ ಎಂಜನಿಯರ್‌ ಕಾಳಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next