Advertisement

ಕ್ವಾರಂಟೈನ್‌ ಕೇಂದ್ರಗಳಿಗೆ ಮೂಲಸೌಕರ್ಯ ಕಲ್ಪಿಸಿ

08:26 AM May 19, 2020 | Lakshmi GovindaRaj |

ಕೋಲಾರ: ಜಿಲ್ಲೆಯಲ್ಲಿ ಕೊವಿಡ್‌ ಶಂಕಿತ ವ್ಯಕ್ತಿಗಳನ್ನು ಇನ್ಸ್ಟಿಟ್ಯೂಷನಲ್‌ ಕ್ವಾರಂ ಟೈನ್‌ ಮಾಡುತ್ತಿದ್ದು, ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಹಾಗೂ ಸ್ವಚ್ಛತೆ ಕಾಪಾಡಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಉಮಾ ಮಹಾದೇವನ್‌ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ನ್ಯಾಯಾಂಗ ಸಭಾಂಗಣದಲ್ಲಿ ಕೊವಿಡ್‌-19 ಕುರಿತಂತೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ  ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇರಳದ ಕ್ವಾರಂಟೈನ್‌ ಕೇಂದ್ರಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಿಂದ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಕಡಿಮೆ ಆಗಿದೆ. ಕೇರಳದಲ್ಲಿ 93 ವರ್ಷದ ವ್ಯಕ್ತಿಯನ್ನು ಸಹ ಗುಣಪಡಿಸಲಾಗಿದೆ.

ಈ ನಿಟ್ಟಿನಲ್ಲಿ ವೈದ್ಯರು ಗುಣಮುಖರಾಗುವ ಪ್ರಮಾಣ ಹೆಚ್ಚಿಸಬೇಕು  ಎಂದು ತಿಳಿಸಿದರು. ಹೊರ ಜಿಲ್ಲೆ ಮತ್ತು ರಾಜ್ಯಗಳಿಂದ ಬರುವ ಚಾಲಕ ಮತ್ತು ಕ್ಲೀನರ್‌ಗಳನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಿ ಪಾಸಿಟಿವ್‌ ಪ್ರಕರಣ ಹೊಂದಿರುವ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಪರೀಕ್ಷೆಗೆ ಒಳಪಡಿಸಿ  ಕ್ವಾರಂಟೈನ್‌ನಲ್ಲಿ ಇಡಬೇಕು ಎಂದರು.

ಅಗತ್ಯ ವಸ್ತುಗಳ ಅಂಗಡಿಗಳು ಸಾರ್ವಜ ನಿಕರಿಗೆ ಸದಾಕಾಲ ದೊರೆಯುವಂತೆ ನೋಡಿಕೊಳ್ಳಿ, ಈ ಅಂಗಡಿಗಳನ್ನು 3 ಶಿಫ್ಟ್‌  ಗಳಾಗಿ ವಿಂಗಡಿಸಿ ತೆರೆಯುವ ಹಾಗೆ ವ್ಯವಸ್ಥೆ ಮಾಡಲು ಸಾಧ್ಯವೇ  ಎಂಬುದನ್ನು ಪರಿಶೀಲಿಸಿ ಎಂದರು. ಜಿಲ್ಲಾಧಿಕಾರಿ ಸಿ.ಸತ್ಯಭಾಮ ಜಿಲ್ಲೆಯಲ್ಲಿ ಇದುವರೆಗೆ 9 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿದ್ದು, ಇವರ ಎಲ್ಲಾ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳನ್ನು ಕ್ವಾರಂಟೈನ್‌ ಮಾಡಲಾಗಿದೆ  ಎಂದರು.

Advertisement

Udayavani is now on Telegram. Click here to join our channel and stay updated with the latest news.

Next