Advertisement
ಅದರಂತೆ ಪಟ್ಟಣದಲ್ಲಿಯೂ ಸಹ ಮೈಸೂರು ರಸ್ತೆ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಮೀಪ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಗೊಂಡು ವರ್ಷಗಳೆ ಕಳೆದು ಹೋಗಿದೆ. ಆದರೆ ಈ ಶುದ್ಧ ಕುಡಿಯುವ ನೀರಿನ ಘಟಕ ಸಾರ್ವಜನಿಕರಿಗೆ ಲಭ್ಯ ವಾಗದೆ ಇರುವುದು ವಿಪರ್ಯಾಸದ ಸಂಗತಿ ಆಗಿದೆ.
Related Articles
Advertisement
ಪ್ರಚಾರ ಸಾಕು, ನೀರು ಬೇಕು: ಜೊತೆಗೆ ಮೈಸೂರು ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಶುದ್ಧ ನೀರಿನ ಘಟಕ ಮುಂಭಾಗದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಹಾಗೂ ಶಾಸಕ ರೇವಣ್ಣ, ಭವಾನಿ ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಅವರ ಭಾವಚಿತ್ರಗಳನ್ನು ಪುರಸಭೆ ಹಾಕಿದೆ. ಅದರಂತೆ ಪಟ್ಟಣದಲ್ಲಿ ಉಳಿದಿ ರುವ ಶುದ್ಧ ನೀರು ಘಟಕಗಳನ್ನು ನಿರ್ಮಿಸಿ ಪಟ್ಟಣದಲ್ಲಿನ ಕುಡಿಯುವ ನೀರಿನ ಹಾಹಾಕಾರವನ್ನು ತಪ್ಪಿಸುವಲ್ಲಿಮತ್ತು ಜನ ಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬಾರದಂತೆ ಪುರಸಭೆ ಕ್ರಮಕೈಗೊಂಡು ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವುದೆ ಎಂದು ಕಾದು ನೋಡಬೇಕಿದೆ. ಈ ಬಗ್ಗೆ ಪುರಸಭೆ ಅಧ್ಯಕ್ಷೆ ಸುದಾನಳಿನಿ ಅವರು ಇಚ್ಛಾಶಕ್ತಿ ಪ್ರದರ್ಶಿಸಿ ಶೀಘ್ರವಾಗಿ ನಿಮಾ ìಣಕ್ಕೆ ಚಾಲನೆ ನೀಡುವರೆ ಎಂಬುದನ್ನು ಕಾದು ನೋಡ ಬೇಕಿದೆ. ಪಟ್ಟಣದ ಮೈಸೂರು ರಸ್ತೆಯಲ್ಲಿನ ಶುದ್ಧನೀರು ಘಟಕದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದಿದೆ. ಆದರೆ ಈ ಶುದ್ಧ ನೀರು ಘಟಕಕ್ಕೆ ನೀರಿನ ಸಂಪರ್ಕಕ್ಕೆ ಕೊಳವೆ ( ಬೋರ್‌ವೆಲ್) ತೆಗೆಸುವಲ್ಲಿ ತಡವಾಗಿದೆ. ಈ ಬೋರ್‌ವೆಲ್ ಕಳೆದ ವಾರವಷ್ಟೇ ಕೊರೆಸಲಾಗಿದ್ದು, ಭಾಗಶಃ ಕುಡಿಯುವ ನೀರಿನ ಯಂತ್ರ ಅಳವಡಿಕೆ ಒಂದೆರಡು ವಾರಗಳಲ್ಲಿ ಪೂರ್ಣಗೊಂಡು ಉದ್ಘಾ ಟನೆ ಆಗಲಿದೆ. ಪಟ್ಟಣದ ವ್ಯಾಪ್ತಿಯಲ್ಲಿ 12 ಶುದ್ಧ ನೀರು ಘಟಕ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಆದರೆ, ಇದರಲ್ಲಿ ಎರಡು ಮಾತ್ರ ಪುರಸಭೆಯಿಂದ ಉಳಿದವುಗಳು ಜಿಲ್ಲಾ ಪಂಚಾಯಿತಿ ವತಿಯಿಂದ ಮಾಡಿಸುವ ಯೋಜನೆ ಇದೆ.
●ಶಾಂತಲಾ, ಪುರಸಭೆ ಮುಖ್ಯಾಧಿಕಾರಿ ಈ ಶುದ್ದ ನೀರು ಘಟಕ ಕಾಮಗಾರಿ ಪೂರ್ಣಗೊಂಡು ವರ್ಷಗಳೆ ಕಳೆದಿದೆ. ಆದರೆ ಇದಕ್ಕೆ ಬೇಕಾದ ಸವಲತ್ತುಗಳ ಅಳವ ಡಿಕೆಯಲ್ಲಿ ಭಾರಿ ನಿಧಾನಗತಿಯಿಂದ ನಡೆದಿದ್ದು ತಾವು ಈ ಬಗ್ಗೆ ಕ್ರಮಕೈಗೊಂಡಿದ್ದು, ಒಂದೆರಡು ವಾರಗಳಲ್ಲಿ ಸಾರ್ವಜನಿಕರಿಗೆ ಲಭಿಸಲಿದೆ.
●ಜಿ.ಕೆ.ಸುಧಾನಳಿನಿ, ಪುರಸಭೆ ಅಧ್ಯಕ್ಷ ಈ ಶುದ್ಧ ನೀರು ಘಟಕ ನಿರ್ಮಾಣ ಕಾರ್ಯ ತ್ವರಿತಗತಿಯಿಂದ ಮಾಡಬೇಕಿತ್ತು. ಆದರೆ ಪುರಸಭೆ ಆಮೆಗತಿ ಅನುಸರಿಸಿದೆ. ಇದು ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಎಂದು ಹೇಳಬಹುದಾಗಿದೆ.
●ರಾಘವೇಂದ್ರ,
ಪುರಸಭೆ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ●ಎನ್.ಎಸ್.ರಾಧಾಕೃಷ್ಣ