Advertisement
ನಗರದ ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ರಂಗಾಯಣ ಕಲಬುರಗಿ ವತಿಯಿಂದ ಗುರುವಾರ ಆಯೋಜಿಸಿದ್ದ ಮಕ್ಕಳ ಬೇಸಿಗೆ ಶಿಬಿರ ಚಿಣ್ಣರ ನಾಟಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇವತ್ತಿನ ದಿನಗಳಲ್ಲಿ ಇಂತಹ ಮುಕ್ತವಾದ ಅವಕಾಶಗಳಿಂದ ವಂಚಿತರಾಗಿ ಪಾಲಕರ ಮತ್ತು ಪರಿಸರದಲ್ಲಿನ ಒತ್ತಡಗಳಿಗೆ ತಲೆ ಕೊಟ್ಟು ತಡಕಾಡುತ್ತಿದ್ದ ಮಕ್ಕಳಿಗೆ ರಂಗಾಯಣ ಆರಂಭಿಸಿರುವ ಬೇಸಿಗೆ ಶಿಬಿರ ಉತ್ತಮ ಸಂಸ್ಕಾರವಲ್ಲದೆ, ಸ್ವತಂತ್ರ ಮನೋಭಾವ ಕಲಿಸಿದೆ.
Related Articles
Advertisement
ಮುಖ್ಯ ಅತಿಥಿಯಾಗಿದ್ದ ಪತ್ರಕರ್ತ ಶಿವರಂಜನ್ ಸತ್ಯಂಪೇಟೆ ಮಾತನಾಡಿದರು. ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಂಚಾಲಕ ಸಂದೀಪ ಬಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ಕಾರ್ಯಕ್ರಮ ನಿರೂಪಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ, ಡಾ| ಶ್ರೀಶೈಲ ಘೂಳಿ, ಗಿರಿಜಾ ಕರ್ಪೂರ, ಡಾ| ಶಿವರಾಮ ಅಸುಂಡಿ, ಡಾ| ಕಾಶಿನಾಥ ಅಂಬಲಗಿ, ಶಂಕ್ರಯ್ಯ ಆರ್. ಘಂಟಿ ಇದ್ದರು. ಮೈನಾ ಚಿಣ್ಣರ ತಂಡ ಪ್ರಸ್ತುತಪಡಿಸಿದ ಆರ್. ಕೆ. ಶ್ಯಾನಬೋಗ ರಚಿಸಿದ ಸಾಜೀದ್ ಶೇಖ್ ನಿರ್ದೇಶನದ ಸೋಮಾರಿ ಕಾಗೆ ನಾಟಕ ಪ್ರೇಕ್ಷರನ್ನು ಹಿಡಿದಿಡುವಲ್ಲಿ ಯಶಸ್ವಿಯಾಯಿತು.