Advertisement
ಭರವಸೆ: ಪಟ್ಟಣದ ಹೊರ ವಲಯದ ಮೀನು ಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮೀನು ಗಾರರ ಜತೆ ನಡೆದ ಸಂವಾದದಲ್ಲಿ ಮಾತ ನಾಡಿದ ಮೀನುಗಾರರು, ಹೊಗೇನಕಲ್ ವ್ಯಾಪ್ತಿ ಯ ತಮಿಳುನಾಡು ಭಾಗದಲ್ಲಿ ಮೀನುಗಾರಿಕೆ ಅವ ಕಾಶವಿದೆ. ಆದರೆ, ನಮ್ಮ ವ್ಯಾಪ್ತಿಯಲ್ಲಿ ಅರಣ್ಯಧಿ ಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಚಿವರು, ಸಂಬಂಧಿಸಿದ ಇಲಾಖೆ ಜತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
Related Articles
Advertisement
ಮನೆ ಮಂಜೂರಾತಿ: ಪಟ್ಟಣ ವ್ಯಾಪ್ತಿಯಲ್ಲಿ ಮೀನು ಮಾರಾಟಕ್ಕೆ ಮಳಿಗೆಗಳಲ್ಲಿ ಅವಕಾಶ ಮಾಡಿಕೊಡಬೇಕು. ಮೀನು ಕೊಂಡೊಯ್ಯಲು ವಾಹನ ವ್ಯವಸ್ಥೆ ಕಲ್ಪಿಸಿ, ಸಮರ್ಪಕ ದೋಣಿ, ಬಲೆ ಕೊಡಿಸಬೇಕು. ಜತೆಗೆ ಮನೆ ಮಂಜೂರಾತಿ ಮಾಡಿಕೊಡುವಂತೆ ಮನವಿ ಮಾಡಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ತಾಲೂಕು ವ್ಯಾಪ್ತಿಯ ಮೀನುಗಾರಿಗೆ ಉತ್ತೇಜನ ನೀಡಲು ಕೆರೆಗಳಲ್ಲಿ ತುಂಬಿರುವ ಹೂಳನ್ನು ಸಣ್ಣ ನೀರಾವರಿ ಸೇರಿ ಆಯಾ ಇಲಾಖೆ ವ್ಯಾಪ್ತಿಯ ಬರುವ ಅಧಿಕಾರಿಗಳಿಗೆ ಸೂಚಿಸಿ ತೆಗೆಸಲಾಗುವುದು. ಜತೆಗೆ ಕೆರೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಲಾಗುವುದೆಂದರು.
ಮೀನುಗಾರಿಕೆ ನಿರ್ದೇಶಕ ದಿನೇಶ್ ಕುಮಾರ್ ಕಳ್ಳೇರ್, ಜಂಟಿ ನಿರ್ದೇಶಕ ಗಣೇಶ್, ಮೀನುಗಾರಿಕೆ ಉಪ ನಿರ್ದೇಶಕ ಮಂಜೇಶ್ವರ್, ಚಾಮರಾಜನಗರ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ, ಪ್ರಶಾಂತ್, ತಾಲೂಕು ಸಹಾಯಕ ನಿರ್ದೇಶಕ ವಿವೇಕ್, ಪುರಸಭೆ ಸದಸ್ಯ ಎನ್.ಕುಮಾರ್ ಇತರರಿದ್ದರು.
ಮೀನುಗಾರರ ಹಿತಕಾಯಲು ಸರ್ಕಾರ ಬದ್ಧ : ಮೀನುಗಾರರ ಹಿತಕಾಯಲು ಸರ್ಕಾರ ಬದ್ಧವಾಗಿದೆ ಎಂದು ಒಳನಾಡು ಬಂದರು ಮತ್ತು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ತಿಳಿಸಿದರು. ಪಟ್ಟಣದ ಮೀನುಗಾರಿಕೆ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಮಾತನಾಡಿ, ಮೀನುಗಾರಿಕೆ ಮಾಡುವವರಿಗೆ ಸೂರು ಕಲ್ಪಿಸಬೇಕು ಎಂದು ಉದ್ದೇಶದಿಂದ ಆಶ್ರಯ ಮನೆ ಯೋಜನೆಯಡಿ ಮನೆ ಮಂಜೂರಾತಿಗೆ ಸಿದ್ಧತೆ ನಡೆಸ ಲಾಗುತ್ತಿದೆ. ತಾಲೂಕಿನಲ್ಲಿ 15 ಮಂದಿಗೆ ಮನೆ ಮಂಜೂರು ಮಾಡಲಾಗುವುದೆಂದರು.
ಜಿಲ್ಲಾ ವ್ಯಾಪ್ತಿಯಲ್ಲಿ ಮೀನು ಸಾಕಣೆ ಮತ್ತು ಮಾರಾಟ ಕಡಿಮೆ ಇರುವ ಹಿನ್ನೆಲೆ ಸಮುದ್ರದ ಮೀನು ತಂದು ಇಲ್ಲಿ ಮಾರಾಟ ಮಾಡಬಹುದಾ ಎಂಬುದರ ಮಾಹಿತಿ ಪಡೆದು ಸಮುದ್ರದ ಮೀನು ತರಲು ಪ್ರಯತ್ನಿಸಲಾಗುವುದು. ಅಷ್ಟೇ ಅಲ್ಲದೆ ಮೀನುಗಾರಿಕೆಗೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದೆಂದರು.