ಮಂಡ್ಯ: ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಗುರುತಿಸಲ್ಪಟ್ಟಿರುವ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಸೇರಿದಂತೆ ಮೂಲ ಸೌಲಭ್ಯ ಕಲ್ಪಿಸುವ ಕೆಲಸ ಸಮರೋಪಾದಿಯಲ್ಲಿ ಆಗಬೇಕು ಎಂದು ಜಿಪಂ ಸಿಇಒ ಎಸ್.ಎಂ.ಜುಲ್ ಫಿಖಾರ್ ಉಲ್ಲಾ ಹೇಳಿದರು.
ನಗರದ ಜಿಪಂ ಕಚೇರಿಯಲ್ಲಿ ಮಂಗಳವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಜಿಲ್ಲೆಯಲ್ಲಿ ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮೀಣ ಭಾಗದಲ್ಲಿ ಕಂಡು ಬಂದ ಅರ್ಹ ಸಫಾಯಿ ಕರ್ಮಚಾರಿಗಳ ಪುನರ್ವಸತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬದ್ಧತೆಯಿಂದ ಕೆಲಸ ನಿರ್ವಹಿಸಿ: ಬಿಡುಗಡೆಗೊಂಡ ಜೀತದಾಳುಗಳು ಮತ್ತು ಗ್ರಾಮಾಂತರ ಪ್ರದೇಶದ ಅರ್ಹ ಸಫಾಯಿ ಕರ್ಮಚಾರಿಗಳಿಗೆ ಪುನರ್ವಸತಿ ಜೊತೆಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳುಬದ್ಧತೆಯಿಂದ ತ್ವರಿತವಾಗಿ ಕೆಲಸ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಜೀತವಿಮುಕ್ತರ ಮಾಹಿತಿಯನ್ನು ಕಡ್ಡಾಯವಾಗಿ ನಿರ್ವಹಿಸಿ ಅವರವಿಳಾಸ, ಸಂಪರ್ಕ ಸಂಖ್ಯೆಗಳು, ಅವರಿಗೆ ನೀಡಿರುವ ಸೌಲಭ್ಯಗಳ ವಿವರಗಳನ್ನು ದಾಖಲಿಸಬೇಕು.ಜೀತದಿಂದ ಬಿಡುಗಡೆಗೊಂಡ ಕುಟುಂಬಗಳ ಬಗ್ಗೆನಿಗಾ ವಹಿಸಬೇಕು ಎಂದರು.
ಅರ್ಹರಿಗೆ ಅನುದಾನ ತಲುಪಿಸಿ: ಜೀತ ವಿಮುಕ್ತರು ಮತ್ತು ಸಫಾಯಿ ಕರ್ಮಚಾರಿಗಳ ಕುರಿತು ಉಪನ್ಯಾಸನೀಡಿದ ಡೈರಕ್ಟರ್ ಮಾರ್ಗ ಇನ್ಸ್‌ಟ್ಯೂಟ್‌ನರಾಜೇಂದ್ರನ್ ಪ್ರಭಾಕರ್, ಜೀತ ವಿಮುಕ್ತರು ಮತ್ತುಅರ್ಹ ಸಫಾಯಿ ಕರ್ಮಚಾರಿಗಳ ಪುನರ್ವಸತಿಗಾಗಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ಅನುದಾನ ಬಿಡುಗಡೆಮಾಡುತ್ತಿದ್ದು, ಅರ್ಹರಿಗೆ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಯಾರೊಬ್ಬರೇ ಆಗಲಿ ಕುಟುಂಬಗಳನ್ನುಜೀತಕ್ಕಿರಿಸಿಕೊಂಡು ದುಡಿಸಿಕೊಳ್ಳಬಾರದು. ಕನಿಷ್ಠವೇತನ, ಮೂಲ ಸೌಕರ್ಯಗಳನ್ನು ನೀಡದಿರುವುದು. ಸಮಾನ ವೇತನ ಪಾವತಿಸದಿರುವುದು ಹಾಗೂ ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ದುಡಿಸಿಕೊಳ್ಳುವುದು ಶಿಕ್ಷಾರ್ಹ. ಚರಂಡಿಯಂಥ ಅಪಾಯಕಾರಿ ಸ್ಥಳಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ದೈಹಿಕವಾಗಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ಇಂಥಪ್ರಕರಣಗಳು ಕಂಡುಬಂದಲ್ಲಿ ಅಂಥವರ ವಿರುದ್ಧಕ್ರಿಮಿನಲ್ ಪ್ರಕರಣ ದಾಖಲಿಸಿ, ಕಠಿಣ ಶಿಕ್ಷೆಗೆಗುರಿಪಡಿಸಬೇಕು ಎಂದು ಹೇಳಿದರು.
ಸೌಲಭ್ಯದ ಕುರಿತು ಮಾಹಿತಿ: ಸರ್ಕಾರದಿಂದಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳು, ಸಹಾಯಧನ, ಸಾಲ ಸೌಲಭ್ಯ, ಸಂಪರ್ಕಿಸಬೇಕಾದ ಕಚೇರಿ, ಆರೋಗ್ಯಕ್ಕೆ ಸಂಬಂಧಿಸಿದ ಆಯುಷ್ಮಾನ್ ಭಾರತ ಯೋಜನೆಯ ಪ್ರಯೋಜನಾ ಪಡೆಯುವ ಬಗ್ಗೆ, ಬ್ಯಾಂಕ್‌ಗಳಿಂದ ಸಿಗುವ ಸಹಾಯಧನ, ಸಾಲಸೌಲಭ್ಯ ಕುರಿತು ಮಾಹಿತಿ ನೀಡಲಾಯಿತು.ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಡಿಬರುವ ವಿವಿಧ ನಿಗಮಗಳ ವತಿಯಿಂದ ದೊರೆಯುವ ವಿವಿಧ ಸವಲತ್ತುಗಳನ್ನು ಕಲ್ಪಿಸುವ ಸಂಬಂಧ ಜೀತ ವಿಮುಕ್ತರು ಮತ್ತು ಅರ್ಹ ಸಫಾಯಿಕರ್ಮಚಾರಿಗಳಿಂದ ಸ್ಥಳದಲ್ಲಿಯೇ ಅರ್ಜಿ ಸ್ವೀಕರಿಸಲಾಯಿತು. ಜಿಪಂ ಉಪಕಾರ್ಯದರ್ಶಿ (ಅಭಿವೃದ್ಧಿ) ಧನರಾಜ್, ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ) ಸವಿತಾ, ಯೋಜನಾ ನಿರ್ದೇಶಕರು (ಡಿಆರ್‌ಡಿಎ) ಷಣ್ಮುಗಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ, ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸೋಮಶೇಖರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.