Advertisement

ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಸೌಲಭ್ಯ ಕಲ್ಪಿಸಿ

03:39 PM Jul 10, 2019 | Team Udayavani |

ಬ್ಯಾಡಗಿ: ರಾಜ್ಯದ ವಿವಿಧೆಡೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ನೀಡುತ್ತಿರುವ ಪ್ರಮಾಣಪತ್ರಗಳನ್ನು ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೂ ನೀಡಬೇಕು ಎಂದು ಒತ್ತಾಯಿಸಿ ಸ್ವಾತಂತ್ರ್ಯ ಹೋರಾಟಗಾರ ಮಳ್ಳಪ್ಪ ಕೊಪ್ಪದ ನೇತೃತ್ವದಲ್ಲಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಭವನ ಎಲ್ಲರ ಬಳಕೆಗೂ ಮುಕ್ತವಾಗಿಸಬೇಕು, ಸ್ವಾತಂತ್ರ್ಯ ಹೋರಾಟಗಾರ ಸೇವೆ ಪರಿಗಣಿಸಿರುವ ಸರ್ಕಾರ ವಿವಿಧ ಸೌಲಭ್ಯ ಪಡೆಯುವ ಉದ್ದೇಶದಿಂದ ಅವರ ಮಕ್ಕಳಿಗೆ ಪ್ರಮಾಣಪತ್ರ ನೀಡುತ್ತಿದೆ. ಆದರೆ, ಬ್ಯಾಡಗಿ ತಾಲೂಕಿನ ತಹಶೀಲ್ದಾರರು ಪ್ರಮಾಣಪತ್ರ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.

ಪುರಸಭೆ ಮಾಜಿ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ ಮಾತನಾಡಿ, ಪಟ್ಟಣದಲ್ಲಿರುವ ಸ್ವಾತಂತ್ರ್ಯಭವನವನ್ನು ಅವರಿಗಾಗಿ ಮೀಸಲಿಡದೆ ಸತಾಯಿಸಲಾಗುತ್ತಿದೆ. ನಿವೃತ್ತ ನೌಕರರು ಸ್ವಾತಂತ್ರ್ಯ ಹೋರಾಟಗಾರರ ಭವನ ಎಂಬ ನಾಮಫಲಕವನ್ನೇ ಅಳಿಸಿ ಹಾಕಿರುವುದು ದುರದೃಷ್ಟಕರ. ಸರ್ಕಾರದ ಕಟ್ಟಡವೊಂದು ನಿಗದಿತ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿವೃತ್ತ ನೌಕರರು ಬಳಕೆ ಮಾಡಿಕೊಳ್ಳಲು ನಮ್ಮದೇನೂ ತಕರಾರಿಲ್ಲ ಆದರೆ, ನಾಮಫಲಕವನ್ನೇ ಬದಲಿ ಮಾಡಿರುವುದು ಖಂಡನೀಯ ಎಂದರು.

ಪಟ್ಟಣದ ಮುಖ್ಯರಸ್ತೆಗೆ ಮಹಾತ್ಮಾ ಗಾಂಧಿ ಮುಖ್ಯರಸ್ತೆ ಎಂದು ಮರುನಾಮಕರಣ ಮಾಡುವ ಮೂಲಕ ದೇಶಕ್ಕಾಗಿ ಅವರು ಮಾಡಿದ ತ್ಯಾಗ ಸ್ಮರಿಸುವ ಕೆಲಸವಾಗಬೇಕು. ಅಷ್ಟೇ ಅಲ್ಲದೆ ಪಟ್ಟಣದ ಹಳೇ ಪುರಸಭೆ ಎದುರಿಗೆ ಮಹಾತ್ಮ ಗಾಂಧೀಜಿ ಅವರ ಪ್ರತಿಮೆ ನಿರ್ಮಿಸಿ, ಆ ವೃತ್ತಕ್ಕೂ ಅವರ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಹನುಮಂತಪ್ಪ ಮುಳ್ಳಾಳ, ಪಾರಮ್ಮ ಕುಂಬಾರ, ನೀಲಪ್ಪ ದಡ್ಡಿಕೊಪ್ಪ, ಗದಿಗೆಪ್ಪ ಚೊರ್ಚಿಕೊಪ್ಪ, ಬಸವಂತಪ್ಪ ನೆಲ್ಲಿಕೊಪ್ಪ, ಮಂಜಪ್ಪ ಬಡಿಗೇರ, ಹನುಮಗೌಡ ಕೆಂಪಣ್ಣನವರ, ಗದಿಗೆಯ್ಯ ಮಠದ, ಮರಿಗೌಡ ಮಾಳಾಪುರ ಶಶಿಧರ ಗೊಲ್ಲರಹಳ್ಳಿಮಠ ಹಾಗೂ ಇನ್ನಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next