ಚಿಕ್ಕಬಳ್ಳಾಪುರ: ಜಲ ಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯ ಎಲ್ಲಾ ಸರ್ಕಾರಿಶಾಲೆಗಳಲ್ಲಿ ಅಡುಗೆ ಮನೆ, ಶೌಚಾಲಯ ಹಾಗೂಕುಡಿಯುವ ನೀರಿಗಾಗಿ ಪ್ರತ್ಯೇಕ ಪೈಪ್‌ಲೈನ್‌ಅಳವಡಿಸಿ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಯೋಜನೆಯಡಿ ಈಗಾಗಲೇ ಹಲವು ಕಾಮಗಾರಿ ಕೈಗೊಂಡಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಅಡುಗೆ ಕೊಠಡಿ, ಶೌಚಾಲಯ, ಕುಡಿಯುವುದಕ್ಕಾಗಿ ಹೀಗೆ ಮೂರು ಕಡೆ ಪ್ರತ್ಯೇಕ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಆಧಾರ್ ಲಿಂಕ್ ಮಾಡಿಸಿ: ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯಲ್ಲಿ ಪಿಂಚಣಿ ಪಡೆಯುತ್ತಿರುವವರು ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಬೇಕು. ಪಿಂಚಣಿದಾರರು ಮೃತಪಟ್ಟಿದ್ದರೆ, ಅಂತಹವರನ್ನು ಪತ್ತೆ ಮಾಡಿ, ಅವರ ಪಿಂಚಣಿ ರದ್ದು ಮಾಡಬೇಕು. ಎಲ್ಲಾ ಪಡಿತರ ಚೀಟಿಗಳಿಗೂ ಶೇ.100ರಷ್ಟು ಆಧಾರ್ ಸೀಡಿಂಗ್‌ನ್ನು ಕಡ್ಡಾಯವಾಗಿ ಮಾಡಬೇಕು ಎಂದು ತಿಳಿಸಿದರು.
ಪೋಡಿ ಮುಕ್ತ ತಾಲೂಕು: ಜಿಲ್ಲಾಧಿಕಾರಿ ಆರ್. ಲತಾ ಮಾತನಾಡಿ, ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ ಮೂರು ತಾಲೂಕುಗಳನ್ನು ಈಗಾಗಲೇ ಪೋಡಿಮುಕ್ತ ತಾಲೂಕುಗಳನ್ನಾಗಿಘೋಷಣೆ ಮಾಡಲಾಗಿದೆ. ಗುಡಿಬಂಡೆ ತಾಲೂಕುಜಿಲ್ಲೆಯ ಮೊಟ್ಟ ಮೊದಲ ಪೋಡಿಮುಕ್ತ ತಾಲೂಕು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಇನ್ನುಳಿದಂತೆ 3ಮೂರು ತಾಲೂಕುಗಳನ್ನು ಶೀಘ್ರದಲ್ಲೇ ಪೋಡಿಮುಕ್ತವಾಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
1,596 ಗ್ರಾಮಗಳಿಗೆ ರುದ್ರಭೂಮಿ ಬೇಕು: ಜಿಲ್ಲೆಯಲ್ಲಿ ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳವಿಲೇವಾರಿ ಘಟಕಗಳ ನಿರ್ಮಾಣಕ್ಕಾಗಿ ಒಟ್ಟು 157ಪ್ರಸ್ತಾವನೆ ಸ್ವೀಕರಿಸಲಾಗಿದ್ದು, ಈ ಪೈಕಿ ಒಟ್ಟು 124 ಗ್ರಾಪಂಗಳಿಗೆ 51 ಪ್ರಸ್ತಾವನೆಗಳಿಗೆ ಮಂಜೂರಾತಿಸಿಕ್ಕಿದೆ. ಇನ್ನೂ 26 ಗ್ರಾಪಂಗಳಿಗೆ ಮ ಪಂಚಾಯಿತಿಗಳಿಗೆ ಬಾಕಿ ಇದೆ. ಇನ್ನು ಜಿಲ್ಲೆಯಲ್ಲಿರುದ್ರಭೂಮಿ ನಿರ್ಮಾಣ ಸಂಬಂಧ ಒಟ್ಟು 1,606 ಗ್ರಾಮಗಳ ಪೈಕಿ 1,596 ಗ್ರಾಮಗಳಿಗೆ ರುದ್ರಭೂಮಿ ಕಲ್ಪಿಸಲಾಗಿದ್ದು, 10 ಗ್ರಾಮಗಳಿಗೆ ರುದ್ರಭೂಮಿ ಕಲ್ಪಿಸಬೇಕಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ 25 ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳು ಎಂದು ಗುರ್ತಿಸಲಾಗಿದ್ದು, ಈ ಪೈಕಿ 2 ಗ್ರಾಮಗಳಿಗೆಟ್ಯಾಂಕರ್ ಮೂಲಕ ಹಾಗೂ 23 ಗ್ರಾಮಗಳಿಗೆಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಮಾಡಲಾಗುತ್ತಿದೆ ಎಂದು ಗ್ರಾಮೀಣ ಕುಡಿಯುವನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಕಾರ್ಯಪಾಲಕ ಅಭಿಯಂತರರಾದ ಶಿವಕುಮಾರ್‌ಲೋಕೂರ್ ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಚ್. ಅಮರೇಶ್, ಉಪವಿಭಾಗಾಧಿಕಾರಿ ಎ.ಎನ್.ರಘುನಂದನ್, ಡಿವೈಎಸ್‌ಪಿ ರವಿಶಂಕರ್ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅದಿಕಾರಿಗಳು ಉಪಸ್ಥಿತರಿದ್ದರು.