Advertisement

ಶಾಲೆಗೆ ಬರಲು ಮಕ್ಕಳಿಗೆ ಬಸ್‌, ಹಾಸ್ಟೆಲ್‌ ಕಲ್ಪಿಸಿ

01:45 PM Jan 03, 2021 | Team Udayavani |

ಎಚ್‌.ಡಿ.ಕೋಟೆ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶಾಲಾ-ಕಾಲೇಜುಗಳು ಪುನಾರಂಭವಾಗಿದ್ದು, ವಿದ್ಯಾರ್ಥಿಗಳು ಹುಮ್ಮಸ್ಸಿನಿಂದ ಹಾಜರಾಗಿದ್ದರು. ಪೂರ್ಣ ಪ್ರಮಾಣದಲ್ಲಿ ಶಾಲಾ ಕಾಲೇಜುಗಳಿಗೆ ಆಗಮಿಸಲು ಬಸ್‌ ಸೌಲಭ್ಯ, ಬಸ್‌ ಪಾಸ್‌, ಹಾಸ್ಟೆಲ್‌ ವ್ಯವಸ್ಥೆ ಕಲ್ಪಿಸಬೇಕಿದೆ. ದೂರದ ಊರುಗಳಿಂದ ಬರುವ ಮಕ್ಕಳಿಗೆ ಬಿಸಿಯೂಟ ಕಲ್ಪಿಸಬೇಕಾಗಿದೆ. ಈ ಸೌಲಭ್ಯಗಳು ಇಲ್ಲದಕಾರಣ ಸಾಕಷ್ಟು ಮಕ್ಕಳು ಶಾಲೆಗೆ ಬರಲು ಪರದಾಡುತ್ತಿರುವುದು ಕಂಡು ಬಂತು.

Advertisement

ಮೊದಲ ದಿನ ಶೇ.65 ರಷ್ಟು ವಿದ್ಯಾರ್ಥಿಗಳ ಹಾಜರಾತಿ ಕಂಡುಬಂತು. 9 ತಿಂಗಳಿನಿಂದ ಶಾಲಾ ಕಾಲೇಜುಗಳತ್ತ ಮುಖ ಮಾಡಿದವಿದ್ಯಾರ್ಥಿಗಳು ಉತ್ಸಹದಿಂದ ತರಗತಿಗೆ ಹಾಜರಾದರೆ, ಶಾಲೆಗಳಿಲ್ಲದೇ ಸೊರಗಿದ್ದ ಶಿಕ್ಷಕರಲ್ಲೂ ಉತ್ಸಾಹದ ಚಿಲುಮೆಕಂಡು ಬಂತು. ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಶಿಕ್ಷಕರು ಪಾಠ ಮಾಡಿದರು.

ಪಟ್ಟಣದ ಆದರ್ಶ ಶಾಲೆಯ 10ನೇ ತರಗತಿಯ ಒಟ್ಟು 78 ವಿದ್ಯಾರ್ಥಿಗಳ ಪೈಕಿ 70 ಮಕ್ಕಳು ಆಗಮಿಸಿದ್ದು, ಶೇ.90 ಹಾಜರಾತಿಕಂಡು ಬಂತು. ಇನ್ನು ತಾಲೂಕಿನ ವಿವಿಧ ಗ್ರಾಮೀಣ ಭಾಗದಶಾಲೆಗಳಲ್ಲಿ ಶಿಕ್ಷಕರು ಶಾಲಾರಂಭದ ದಿನದಂದು ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ಹಲವು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಜೊತೆಗೆ ಮಾಹಿತಿ ಪಡೆದುಕೊಂಡರು. 3 ಪಟ್ಟು ದೊಡ್ಡ ತಾಲೂಕು: ಎಚ್‌.ಡಿ.ಕೋಟೆ ಇತರೆ ತಾಲೂಕುಗಳಿಗೆ ಹೋಲಿಕೆ ಮಾಡಿದರೆ ವಿಸ್ತೀರ್ಣದಲ್ಲಿ 3 ಪಟ್ಟುದೊಡ್ಡದಿದೆ. ಬಹು ದೂರದ ಗ್ರಾಮೀಣ ಪ್ರದೇಶಗಳಿಂದಆಗಮಿಸುವ ವಿದ್ಯಾರ್ಥಿಗಳಿಗೆ ಶಾಲೆಗೆ ಬರಲು ಸಮರ್ಪಕ ಸಾರಿಗೆವ್ಯವಸ್ಥೆ, ಬಿಸಿಯೂಟ, ಹಾಸ್ಟೆಲ್‌ಗ‌ಳು ಇಲ್ಲ. ಹೀಗಾಗಿ ಪೂರ್ಣಪ್ರಮಾಣದಲ್ಲಿ ಮಕ್ಕಳು ಶಾಲಾ, ಕಾಲೇಜುಗಳಿಗೆ ಆಗಮಿಸುತ್ತಿಲ್ಲ.ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಬರಲು ಸಮರ್ಪಕಬಸ್‌ ವ್ಯವಸ್ಥೆ, ಪಾಸ್‌ ಸೌಲಭ್ಯ, ಹಾಸ್ಟೆಲ್‌ ತೆರೆಯಲು ಕ್ರಮ ವಹಿಸಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ

ಬಸ್‌ ಸಂಚಾರಕ್ಕೆ ಮನವಿ: ಶಿಕ್ಷಣಾಧಿಕಾರಿ ರೇವಣ್ಣ :

Advertisement

ತಾಲೂಕಿನ ಹಲವು ಗ್ರಾಮೀಣ ಭಾಗದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಈಗ ಶಾಲಾ ಕಾಲೇಜುಗಳು ಪುನರಾರಂಭಗೊಂಡಿದ್ದು, ಬಸ್‌ ಇಲ್ಲದ್ದಕ್ಕೆ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸಾರಿಗೆ ಸಂಸ್ಥೆ ವ್ಯವಸ್ಥಾಪಕರ ಜೊತೆ ಸಮಾಲೋಚನೆ ನಡಸಿ ಬಸ್‌ ಸಂಚಾರ ಆರಂಭಕ್ಕೆ ಮನವಿ ಮಾಡಲಾಗಿದೆ. ಶಾಲೆ ಆರಂಭದ ಮೊದಲ ದಿನ ನಾನೇ ಖುದ್ದುವಿವಿಧ ಶಾಲೆಗಳಲಿಗೆ ಭೇಟಿ ನೀಡಿದ್ದೇನೆ. ತಾಲೂಕಿನಲ್ಲಿ ಮೊದಲ ದಿನವೇ ಶೇ.75ರಷ್ಟು ಹಾಜರಾತಿ ಕಂಡು ಬಂತು. ಹಾಸ್ಟೆಲ್‌ಗ‌ಳು, ಬಸ್‌ಗಳು ಕಾರ್ಯಾರಂಭಗೊಂಡರೆ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next