Advertisement

ಅಗತ್ಯವುಳ್ಳವರಿಗೆ ನೆರವು ಒದಗಿಸಿ: ರೆ|ಪಾವ್ಲ್ ಡಿ’ಸೋಜಾ

06:05 AM Aug 08, 2017 | Team Udayavani |

ಬಲ್ಮಠ: ಸಮಾಜ ಸೇವಾ ಸಂಸ್ಥೆಗಳು ಮಕ್ಕಳು, ಮಹಿಳೆಯರು, ಬಡ ಜನರು, ರೋಗಿಗಳು  ಸಹಿತ ಆವಶ್ಯಕತೆ ಇರುವವರಿಗೆ ಸಹಾಯ ಮಾಡಬೇಕು. ಈ ಮೂಲಕ ಅವರು ಸಮಾಜದಲ್ಲಿ  ಎಲ್ಲರಂತೆ ಬದುಕು ಸಾಗಿಸಲು ನೆರವಾಗಬೇಕು ಎಂದು ಮಂಗಳೂರಿನ ಬಿಷಪ್‌ ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಹೇಳಿದರು.

Advertisement

ಅವರು ರವಿವಾರ ಇಲ್ಲಿನ ಡಾನ್‌ಬಾಸ್ಕೊ ಹಾಲ್‌ನಲ್ಲಿ   ಜರಗಿದ ಸಂತ ಕ್ರಿಸ್ಟೋಫರ್‌ ಅಸೋಸಿಯೇಶನಿನ ಸುವರ್ಣ ಮಹೋತ್ಸವ ಸಮಾರಂಭ ದಲ್ಲಿ  ಅಧ್ಯಕ್ಷತೆ ವಹಿಸಿದ್ದರು. ಸಂತ ಕ್ರಿಸ್ಟೋಫರ್‌ ಅಸೋಸಿ ಯೇಶನ್‌ ಕಳೆದ 5 ದಶಕಗಳಲ್ಲಿ ವಿವಿಧ ಸೇವಾ ಕಾರ್ಯಗಳ ಮೂಲಕ ಸಮಾಜದ ಜನರ ಏಳಿಗೆಗೆ ಸಹಕರಿಸಿದೆ ಎಂದು ಸಂಘದ ಪೋಷಕರೂ ಆದ ಬಿಷಪ್‌ ಅವರು ಅಭಿನಂದಿಸಿದರು. 

ಮೇಯರ್‌ ಕವಿತಾ ಸನಿಲ್‌ ಉದ್ಘಾಟಿಸಿದರು. ಅಪಾರ್ಥ  ಸಲ್ಲದುಕ್ರೈಸ್ತರ ಸಮಾಜ ಸೇವೆಗೆ ಕೆಲವರು ಅಪಾರ್ಥ ಕಲ್ಪಿಸುತ್ತಿದ್ದಾರೆ. ಇದು ವಿಷಾದನೀಯ. ಈ ಬಗ್ಗೆ ಕ್ರೈಸ್ತರು ಎದೆಗುಂದದೆ ಸೇವಾ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು. ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ ನಿಸ್ವಾರ್ಥ ಸೇವೆ ಸಲ್ಲಿಸಿದ್ದರಿಂದ 50 ವರ್ಷಗಳಿಂದ ಬದುಕುಳಿದು ಬೆಳೆದಿದೆ ಎಂದರು.

ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ  ಮಾತನಾಡಿ, ಸಂತ ಕ್ರಿಸ್ಟೋಫರ್‌ ಅಸೋಸಿಯೇಶನ್‌ ಹುಟ್ಟು ಹಾಕಿದ ಮ್ಯಾಕೋ ಸಹಕಾರ ಸಂಘವು ಮಂಗಳೂರಿನ 4,900 ಆಟೋರಿಕ್ಷಾಗಳಿಗೆ ನೆರವು ಒದಗಿಸಿದೆ. ರಿಕ್ಷಾಗಳ ನವೀಕರಣಕ್ಕೆ ಸಾಲ ಸೌಲಭ್ಯ ಒದಗಿಸುವ ಏಕೈಕ ಸಂಸ್ಥೆ  ಇದಾಗಿದೆ ಎಂದರು. 

ಅಸೋಸಿಯೇಶನ್‌ ನಡೆಸುತ್ತಿರುವ ಸಂತ ಕ್ರಿಸ್ಟೋಫರ್‌ ಕಾರ್ಮಿಕರ ಹಾಸ್ಟೆಲ್‌  ನವೀಕರಣಕ್ಕೆ ಸರಕಾರದಿಂದ 50 ಲಕ್ಷ ರೂ. ಒದಗಿಸಲು ಪ್ರಯತ್ನಿಸುತ್ತೇನೆ ಎಂದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ವ್ಯವಸ್ಥೆಯನ್ನು ಆರಂಭಿಸಬೇಕೆಂದು ಸಲಹೆ ಮಾಡಿದರು. 

Advertisement

ಮಾಜಿ ಆಧ್ಯಾತ್ಮಿಕ ನಿರ್ದೇಶಕರನ್ನು ಮತ್ತು 21 ಮಂದಿ ಸ್ಥಾಪಕ ಸದಸ್ಯರನ್ನು ಗೌರವಿಸಲಾಯಿತು. ಅಸೋಸಿಯೇಶನಿನ ಗೌರವ ಅಧ್ಯಕ್ಷ ಸುಶಿಲ್‌ ನೊರೋನ್ಹಾ  ಸ್ವಾಗತಿಸಿದರು. ಕಾರ್ಯದರ್ಶಿ ನೈಝಿಲ್‌ ಪಿರೇರಾ ವರದಿ ಮಂಡಿಸಿದರು. ಉಪಾಧ್ಯಕ್ಷ ಫ್ರಾನ್ಸಿಸ್‌ ಡಿ’ಸೋಜಾ ವಂದಿಸಿದರು. ಆಧ್ಯಾತ್ಮಿಕ ನಿರ್ದೇಶಕ ಹಾಗೂ ಖಜಾಂಚಿ ರೊಜಾರಿಯೊ ಕೆಥೆಡ್ರಲ್‌ನ ಪ್ರಧಾನ ಗುರು ಫಾ| ಜೆ.ಬಿ. ಕ್ರಾಸ್ತಾ, ಅಧ್ಯಕ್ಷ ಹೆರಾಲ್ಡ್‌  ಡಿ’ಸೋಜಾ, ಗೌರವ ಕಾರ್ಯದರ್ಶಿ ಅಲೊ#àನ್ಸ್‌  ಫೆರ್ನಾಂಡಿಸ್‌, ಸಹ ಕಾರ್ಯದರ್ಶಿ ಲೀನಾ ಡಿ’ಸೋಜಾ, ಮಾಜಿ ಆಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥೂ ವಾಸ್‌ ಉಪಸಿœತರಿದ್ದರು. ರೋಶನ್‌ ಮಾಡ್ತಾ ಅವರು ಕಾರ್ಯಕ್ರಮ ನಿರ್ವಹಿಸಿದರು. 

ಸಮಾಜ ಕಟ್ಟುವ 
ಕೆಲಸ ಆಗಲಿ

ಮುಖ್ಯ ಅತಿಥಿಯಾಗಿದ್ದ ಶಾಸಕ ಜೆ.ಆರ್‌.ಲೋಬೋ  ಮಾತನಾಡಿ, ಸಂಘ ಸಂಸ್ಥೆಗಳು ಕಟ್ಟಡಗಳನ್ನು ಕಟ್ಟುವ ಬದಲು ಜನರನ್ನು ಕಟ್ಟುವ ಕೆಲಸ ಮಾಡಬೇಕು. ಸಮಾಜದ ಹಿಂದುಳಿದ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ನೆರವು ನೀಡಿ ಅವರ ಜೀವನ ಮಟ್ಟವನ್ನು ಸುಧಾರಿಸಿ ಅವರಿಗೆ ಬದುಕು ಕಟ್ಟಲು ನೆರವಾಗುವುದೇ ನಿಜವಾದ ಸಮಾಜ ಸೇವೆ ಎಂದು ಹೇಳಿದರು. 

ನೆರವು ವಿತರಣೆ 
ಅಸೋಸಿಯೇಶನಿನ ಸುವರ್ಣ ಮಹೋತ್ಸವದ ಅಂಗವಾಗಿ ಜಪ್ಪು ಭಗಿನಿ ಸಮಾಜ, ಕಾರ್ಡ್ಸ್‌ ಪಂಪ್‌ವೆಲ್‌, ವಾಮಂಜೂರು ಆವೆ ಮರಿಯಾ ಪಲೇಟಿವ್‌ ಕೇರ್‌, ಜೀವನ್‌ದಾನ ಗುರುಪುರ ಸಂಸ್ಥೆಗಳಿಗೆ ಮತ್ತು ಮೊಡಂಕಾಪುವಿನ ಒಂದು ಬಡ ಕುಟುಂಬಕ್ಕೆ ತಲಾ 10,000 ರೂ. ನೆರವು ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next