Advertisement

ಮಕ್ಕಳ ಸೃಜನಶೀಲತೆಗೆ ವೇದಿಕೆ ಕಲ್ಪಿಸಿ

11:48 AM Jan 17, 2020 | Suhan S |

ದೊಡ್ಡಬಳ್ಳಾಪುರ: ತಾಲೂಕಿನ ಕಂಟನಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಲಹರಿ ಸಂಭ್ರಮದಿಂದ ನಡೆಯಿತು.

Advertisement

ಕ್ಷೇತ್ರ ಶಿಕ್ಷಣಾಧಿಕಾರಿ ಬೈಯಪ್ಪ ರೆಡ್ಡಿ ಮಾತನಾಡಿ, ಮಕ್ಕಳಿಗೆ ಅವರ ಕಲ್ಪನೆಗಳಿಗೆ ಪೂರಕವಾಗಿ ಚಿಂತಿಸುವ ಹಾಗೂ ಕಲಿಯುವ ಮನೋಭಾವಕ್ಕೆ ಪೋಷಕರು ಅವಕಾಶ ಕಲ್ಪಿಸಿಕೊಡಬೇಕಿದೆ. ಇಂದು ಆಧುನಿಕ ಸಂವಹನ ಮಾಧ್ಯಮಗಳಿಂದ ಮಾನವೀಯ ಸಂಬಂಧಗಳು ಮರೆಯಾಗುತ್ತಿವೆ. ಮೊಬೈಲ್‌ನಿಂದ ಉಪಯೋಗಕ್ಕಿಂತ ಹಾನಿಯೇ ಹೆಚ್ಚಾಗುತ್ತಿದೆ. ಪೋಷಕರು ಮೊಬೈಲ್‌ ಹಾಗೂ ಟಿ.ವಿ.ಗಳಿಗೆ ದಾಸರಾದರೆ ಮಕ್ಕಳೂ, ಅದನ್ನೇ ಅನುಸರಿಸುತ್ತಾರೆ. ಮಕ್ಕಳ ಮನಸ್ಸನ್ನು ಪೋಷಕರು ಹಾಗೂ ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು. ಶಿಕ್ಷಣವೆಂದರೆ ಬರೀ ಅಂಕ ಗಳಿಕೆ ಮಾತ್ರವಲ್ಲ. ನಮ್ಮ ಸೃಜನಶೀಲತೆ ಗುರುತಿಸಿ, ಅದಕ್ಕೆ ಉತ್ತಮ ವೇದಿಕೆ ಕಲ್ಪಿಸಕೊಡಬೇಕು. ಶಿಕ್ಷಣವೇ ಸಂಪತ್ತು. ಉತ್ತಮ ಶಿಕ್ಷಣವಿದ್ದರೆ ಶಿಕ್ಷಣ ಅರಸಿ ಬರುವ ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಶಿಕ್ಷಣವೆಂದರೆ ಬರೀ ಓದು ಬರಹ ಕಲಿಯುವುದಲ್ಲ. ಬದಲಾಗಿ ಸಮಾಜಕ್ಕೆ ನೆರವಾಗಬೇಕು. ಸರಕಾರಿ ಶಾಲೆಯ ಮಕ್ಕಳಲ್ಲಿಯೂ ಒಳ್ಳೆಯ ಪ್ರತಿಭೆಯಿದೆ. ಅದನ್ನು ಹೊರತರಲು ಇಂತಹ ವೇದಿಕೆಗಳ ಅಗತ್ಯವಿದೆ ಎಂದರು.

ತಾಪಂ ಮಾಜಿ ಅಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ, ಗ್ರಾಪಂ ಅಧ್ಯಕ್ಷ ಅಶೋಕ್‌, ಎಸ್‌ಡಿಎಂಸಿ ಅಧ್ಯಕ್ಷ ಲೋಕೇಶ್‌ ಮತ್ತಿತರರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

Advertisement

Udayavani is now on Telegram. Click here to join our channel and stay updated with the latest news.

Next