Advertisement
ಬಿಹಾರದ ಅರಾರಿಯಾದಲ್ಲಿ ಚುನಾವಣ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಹಕ್ಕಿದೆ ಎಂದು ಮನಮೋಹನ್ ಸಿಂಗ್ ಹೇಳಿಲ್ಲ ಎಂದು ಹೇಳುತ್ತಿದ್ದಾರೆ. ಶುಕ್ರವಾರ ಕೂಡ ಅವರ ಹಳೆಯ ವೀಡಿಯೋವೊಂದು ಬಹಿರಂಗಗೊಂಡಿದ್ದು, ಅದನ್ನು ಉಲ್ಲೇಖೀಸಿದ ಮೋದಿ, ಹೊಸ ವೀಡಿಯೋದಲ್ಲೂ ಸಿಂಗ್ ಮುಸ್ಲಿಮರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳುವ ಮೂಲಕ ತಾವು ಮಾಡಿದ ಆರೋಪವನ್ನು ಸಮರ್ಥಿಸಿಕೊಂಡರು.
ಕರ್ನಾಟಕದಲ್ಲಿ ಒಬಿಸಿಯವರಿಗೆ ಇದ್ದ ಮೀಸಲಾತಿಯನ್ನು ಕಾಂಗ್ರೆಸ್ ಕಸಿದು, ಮುಸ್ಲಿಮರಿಗೆ ನೀಡಿದೆ. ಇದನ್ನೇ ದೇಶದಲ್ಲಿ ಜಾರಿ ಮಾಡಲು ಹೊರಟಿದೆ ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಜತೆಗೆ ನಾನು ಕೂಡ ಇತರ ಹಿಂದುಳಿದ ವರ್ಗಕ್ಕೆ ಸೇರಿದವನು. ಒಬಿಸಿಯವರ ನೋವು, ಕಷ್ಟಗಳೇನು ಎಂದು ನನಗೆ ಗೊತ್ತು. ಮುಂದಿನ ದಿನಗಳಲ್ಲಿ ಎಸ್‌ಸಿ, ಎಸ್‌ಟಿಗಳ ಮೀಸಲಾತಿಯನ್ನೂ ಅವರು ಕಸಿದುಕೊಳ್ಳಬಹುದು. ಎಸ್‌ಸಿ, ಎಸ್‌ಟಿ, ಒಬಿಸಿಗಳ ಮೀಸಲಾತಿಯನ್ನು ವೋಟ್‌ಬ್ಯಾಂಕ್ ರಾಜಕೀಯಕ್ಕಾಗಿ ಬೇರೆಯವರಿಗೆ ನೀಡಲು ನಾನು ಅವಕಾಶ ನೀಡುವುದಿಲ್ಲ ಎಂದೂ ಮೋದಿ ಹೇಳಿದ್ದಾರೆ.
Related Articles
ಭೋಪಾಲ್/ಬೆಮೆತಾರಾ: “ಕಾಂಗ್ರೆಸ್ ಒಬಿಸಿ ವಿರೋಧಿ ಮನಃಸ್ಥಿತಿ ಹೊಂದಿದೆ. ಅವರದ್ದು ಮುಸ್ಲಿಂ ಲೀಗ್ ಅಜೆಂಡಾ. ಆದರೆ ಅವರೇನೇ ಮಾಡಿಕೊಂಡರೂ, ಎಸ್‌ಸಿ, ಎಸ್‌ಟಿ, ಒಬಿಸಿ ಮೀಸಲಾತಿಯನ್ನು ಮುಟ್ಟಲು ಕೂಡ ನಾವು ಬಿಡುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Advertisement
ಶುಕ್ರವಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣ ರ್ಯಾಲಿ ನಡೆಸಿ ಮಾತನಾಡಿದ ಅವರು, “ಅಲ್ಪಸಂಖ್ಯಾಕರಿಗೆಂದೇ ಕಾಂಗ್ರೆಸ್ ಪ್ರತ್ಯೇಕ ಕಾನೂನು ರಚಿಸಲಿದೆ. ಈ ದೇಶವು ಶರಿಯಾ ಕಾನೂನಿನಡಿ ಬರಬೇಕೆಂದು ನೀವು ಬಯಸುತ್ತೀರಾ?’ ಎಂದು ಪ್ರಶ್ನಿಸಿದ್ದಾರೆ. ಜತೆಗೆ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ (ಯುಸಿಸಿ)ಯನ್ನು ಜಾರಿಗೊಳಿಸಲಿದೆ ಎಂದಿದ್ದಾರೆ.