Advertisement

ರಾಜ್ಯ ಹೆದ್ದಾರಿಯಲ್ಲಿ ಮೃತದೇಹವಿಟ್ಟು ಪ್ರತಿಭಟನೆ

09:06 AM Jun 24, 2019 | Team Udayavani |

ಜಮಖಂಡಿ: ತಾಲೂಕಿನ ಕುಂಬಾರಹಳ್ಳ ಗ್ರಾಮದಲ್ಲಿ ವಡ್ಡರ ಸಮಾಜಕ್ಕೆ ಶವಸಂಸ್ಕಾರಕ್ಕೆ ನಿಗದಿತ ಸ್ಥಳವಿಲ್ಲದೇ ಶವಸಂಸ್ಕಾರಕ್ಕೆ ಪರದಾಡುವಂತಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿ ವಡ್ಡರ ಸಮಾಜದವರು ಬೆಳಗಾವಿ ವಿಜಯಪುರ ರಾಜ್ಯ ಹೆದ್ದಾರಿ ಮೇಲೆ ಮೃತದೇಹವನ್ನಿಟ್ಟು ಪ್ರತಿಭಟನೆ ನಡೆಸಿದರು.

Advertisement

ವಡ್ಡರ ಸಮಾಜದ ಮಹಿಳೆ ಶಿವಕ್ಕ ಅನ್ನಪ್ಪ ಬಂಡಿವಡ್ಡರ (52) ನಿಧನರಾಗಿದ್ದು, ಶವಸಂಸ್ಕಾರ ಮಾಡುವ ಸಂದರ್ಭದಲ್ಲಿ ತಿಕ್ಕಾಟ ಆರಂಭಗೊಂಡಿದೆ. ಗ್ರಾಮದ ಕೆಲವು ಸಮಾಜದ ಪ್ರಮುಖರು ಶವಸಂಸ್ಕಾರಕ್ಕೆ ಅಡ್ಡಿ ಉಂಟು ಮಾಡಿದರು. ಹಳ್ಳದ ಪಕ್ಕದ ಭೂಮಿಯಲ್ಲಿ ಶವಸಂಸ್ಕಾರ ಮಾಡುವದರಿಂದ ತಮಗೆ ವಾಸನೆ ಬರುತ್ತಿದ್ದು, ಆ ಸ್ಥಳದಲ್ಲಿ ಶವಸಂಸ್ಕಾರಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸಮಾಜದ ಜನರು ಶವಸಂಸ್ಕಾರ ಮಾಡದೇ ರಾಜ್ಯ ಹೆದ್ದಾರಿಯಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ ಪ್ರಶಾಂತ ಚನಗೊಂಡ ಪ್ರತಿಭಟನೆ ನಿರತ ಜನರನ್ನು ಸಮಾಧಾನಗೊಳಿಸಲು ಯತ್ನಿಸಿದರು. ಮೂರು ತಲೆಮಾರಿನಿಂದ ನಡೆಯುತ್ತಿರುವ ಶವಸಂಸ್ಕಾರ ಜಾಗ ಸರಕಾರದ ಜಾಗವಾಗಿದ್ದು, ಇದಕ್ಕೆ ಯಾರು ತಡೆ ಒಡ್ಡುವಂತಿಲ್ಲ ಎಂದು ಹೇಳುವ ಮೂಲಕ ಶವಸಂಸ್ಕಾರ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next