Advertisement
“ಸುರಕ್ಷಿತ ಮತ್ತು ಕಾನೂನುಬದ್ಧ ಗರ್ಭಪಾತವು ಅಂತಾರಾಷ್ಟ್ರೀಯ ಮಾನವಹಕ್ಕುಗಳಲ್ಲಿ ಬಲವಾಗಿ ಬೇರೂರಿದೆ. ದೇಹ ಮತ್ತು ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಮಹಿಳೆಯರಿಗೆ ಹಕ್ಕಿದೆ’ ಎಂದು ಅವರು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಈ ಬಗ್ಗೆ ವಿರೋಧ ಹೊರಹಾಕಿದ್ದು, “ಪ್ರತಿವರ್ಷ 2.5 ಕೋಟಿ ಅಸುರಕ್ಷಿತ ಗರ್ಭಪಾತವಾಗುತ್ತದೆ ಮತ್ತು 37,000 ಗರ್ಭಿಣಿಯರು ಸಾವನ್ನಪ್ಪುತ್ತಾರೆ. ಈ ರೀತಿ ಹಕ್ಕು ಹಿಂಪಡೆಯುವುದರಿಂದ ಗರ್ಭಪಾತದ ಸಂಖ್ಯೆ ಕಡಿಮೆಯಾಗುವುದಿಲ್ಲ ಬದಲಾಗಿ ಅಸುರಕ್ಷಿತ ಗರ್ಭಪಾತ ಹೆಚ್ಚುತ್ತದೆ’ ಎಂದು ತಿಳಿಸಿದೆ.
ಗರ್ಭಪಾತ ಹಕ್ಕು ಹಿಂಪಡೆದು ಅಮೆರಿಕ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ ಬೆನ್ನಲ್ಲೇ ಅಮೆರಿಕ ಪ್ರತಿಷ್ಠಿತ ಕಂಪೆನಿಗಳು ಮಹಿಳಾ ಸಿಬಂದಿಗೆ ವಿಶೇಷ ಸೌಲಭ್ಯ ಘೋಷಿಸಿವೆ. ಮಹಿಳಾ ಸಿಬಂದಿ, ಗರ್ಭ ಪಾತಕ್ಕೆ ಅನುಮತಿ ಇರುವ ಸ್ಥಳಕ್ಕೆ ತೆರಳಿ ಗರ್ಭಪಾತ ಮಾಡಿಸಿಕೊಂಡು ಬರುವುದಕ್ಕೆ ಪ್ರಯಾಣ ವೆಚ್ಚ ಭರಿಸುವುದಾಗಿ ವಾಲ್ಟ್ ಡಿಸ್ನಿ, ಮೆಟಾ ಪ್ಲಾಟ್‌ಫಾರಂ ಸೇರಿ ಹಲವು ಸಂಸ್ಥೆಗಳು ಘೋಷಿಸಿವೆ. ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್ ಡಿಲೀಟ್!
ಸುಪ್ರೀಂ ಆದೇಶದ ಬೆನ್ನಲ್ಲೇ ಅಮೆರಿಕದ ಮಹಿಳೆಯರು ಪೀರಿಯಡ್ ಟ್ರ್ಯಾಕಿಂಗ್ ಆ್ಯಪ್ ಗಳನ್ನು ಡಿಲೀಟ್ ಮಾಡಲಾರಂಭಿಸಿದ್ದಾರೆ. ಈ ರೀತಿ ಟ್ರ್ಯಾಕಿಂಗ್ ಮಾಡುವ ಆ್ಯಪ್‌ಗಳು ತಮ್ಮಲ್ಲಿರುವ ದಾಖಲೆಯನ್ನು ಸರಕಾರದೊಂದಿಗೆ ಹಂಚಿಕೊಳ್ಳುತ್ತವೆ. ಅದರಿಂದಾಗಿ ಗರ್ಭಪಾತದ ವಿಚಾರ ಸರಕಾರಕ್ಕೆ ತಿಳಿಯುವ ಸಾಧ್ಯತೆಯಿದೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಮಹಿಳೆಯರು ಆ್ಯಪ್ ಗಳನ್ನೇ ಡಿಲೀಟ್ ಮಾಡಲಾರಂಭಿಸಿದ್ದಾರೆ.