Advertisement

ಸೇವೆ ಕಾಯಂಗೆ ಆಗ್ರಹಿಸಿ ಪ್ರತಿಭಟನೆ

04:46 PM Mar 25, 2017 | |

ವಿಜಯಪುರ: ಸರ್ಕಾರ ತಮ್ಮ ಸೇವೆಯನ್ನು ಕಾಯಂ ಮಾಡಬೇಕು ಎಂಬುವುದು ಸೇರಿದತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಶುಕ್ರವಾರ ನಗರದ ಸಿದ್ಧೇಶ್ವರ ದೇವಾಸ್ಥಾನದಿಂದ ಹಲಗೆ ಬಾರಿಸುತ್ತ ಕರ್ನಾಟಕ ರಾಜ್ಯ ಮುನ್ಸಿಪಲ್‌ ಕಾರ್ಮಿಕ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪೌರ ಕಾರ್ಮಿಕರು, ಸರ್ಕಾರ ತಮ್ಮ ಸೇವೆ ಕಾಯಂ ವಿಷಯದಲ್ಲಿ ಅನುಸರಿಸುತ್ತಿರುವ ವಿಳಂಬ ಧೋರಣೆ ವಿರುದ್ಧ ಘೋಷಣೆ ಕೂಗಿದರು.

Advertisement

ನಂತರ ನಗರದ ಪ್ರಮುಖ ಬೀದಿಗಳಲ್ಲಿ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಧರಣಿ ನಡೆಸಿದರು. ಈ ವೇಳೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ ಮಾತನಾಡಿ, ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ ಕಾರ್ಮಿಕರ ವಿರೋಧಿಧಿ ನೀತಿ ಹೊಂದಿದೆ.

ರಾಜ್ಯದ ಪೌರ ಕಾರ್ಮಿಕರ ಸೇವೆ ಕಾಯಂ ಮಾಡುವ ನಿಟ್ಟಿನಲ್ಲಿ ಹಲವು ಸಲ ನೀಡಿದ ಭರವಸೆ ಈಡೇರಿಸಿಲ್ಲ. ಪ್ರಸಕ್ತ ಬಜೆಟ್‌ನಲ್ಲೂ ಭರವಸೆ ಹುಸಿ ಮಾಡಿರುವ ರಾಜ್ಯ ಸರ್ಕಾರ, ರಾಜ್ಯದಲ್ಲಿ ಪೌರ ಕಾರ್ಮಿಕರಾಗಿ ದುಡಿಯುತ್ತಿರುವ ದಲಿತ-ಹಿಂದುಳಿದ, ಅಲ್ಪಸಂಖ್ಯಾತ (ಅಹಿಂದ) ಸಮುದಾಯದವರೇ ಹಚ್ಚಿನ ಸಂಖ್ಯೆಯಲ್ಲಿದ್ದು, ಸೇವೆ ಕಾಯಂ ಮಾಡುವ ವಿಷಯದಲ್ಲಿ ಅಹಿಂದ ಮಂತ್ರ ಜಪಿಸುತ್ತಲೇ ಅಧಿಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಪೌರ ಕಾರ್ಮಿಕರಿಗೆ ಅನ್ಯಾಯ ಎಸಗಿದ್ದಾರೆ ಎಂದು ಕಿಡಿ ಕಾರಿದರು. 

ರಾಜ್ಯ ಸರ್ಕಾರ ಅನುಸಿರುತ್ತಿರುವ ಪೌರ ಕಾರ್ಮಿಕ ವಿರೋಧ ನೀತಿಯನ್ನು ನಮ್ಮ ಸಂಘಟನೆ ಬಲವಾಗಿ ಖಂಡಿಸುವ ಜೊತೆಗೆ ಪರಿಷ್ಕೃತ ವೇತನ ಜಾರಿ ಜೊತೆಗೆ ಸೇವೆ ಕಾಯಂ ಮಾಡಬೇಕು. ನಗರಾಭಿವೃದ್ಧಿ- ಪೌರಾಡಳಿತ ನಿರ್ದೇಶನಾಲಯಗಳು ಹೊರಡಿಸುವ ಗೊಂದಲದ ಸುತ್ತೋಲೆಗಳಿಗೆ ಕಡಿವಾಣ ಹಾಕಬೇಕು.

ಬೆಳಗಿನ ಉಪಹಾರಕ್ಕೆ ಸಂಬಂಧಿಧಿಸಿ ಸರಕಾರ ಸುತ್ತೋಲೆ ಹೊರಡಿಸಿದ್ದು, ಅದಕ್ಕೆ ತಗಲುವ ಹಣಕಾಸು ಭರಿಸುವುದು ಹೇಗೆ ಎಂಬುವುದು ಸ್ಪಷ್ಟಪಡಿಸಲಿಲ್ಲ. ಸಂಪುಟದಲ್ಲಿ ಕೈಗೊಂಡ ಹಲವು ನಿರ್ಣಯಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಇದರಿಂದ ಸರ್ಕಾರ ಕೊಟ್ಟ ಮಾತು ತಪ್ಪಲು ಹುನ್ನಾರ ನಡೆಸಿದೆ ಎಂದು ಹರಿಹಾಯ್ದ ಕಾರ್ಮಿಕ ಮುಖಂಡರು, ರಾಜ್ಯದಲ್ಲಿ ಕೂಡ ಹರ್ಯಾಣ ಮಾದರಿಯಲ್ಲಿ ಪೌರ ಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಪಡಿಸಿ ರಾಜ್ಯ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. 

Advertisement

ಸೋಮಪ್ಪ ಆಯಟ್ಟಿ ಮಾತನಾಡಿ, ಪರಿಷ್ಕೃತ ಕನಿಷ್ಠ ವೇತನದ ವಿಷಯದಲ್ಲಿ ಹೊರಡಿಸಿರುವ ಅಧಿಧಿಸೂಚನೆ ಅನುಷ್ಠಾನದಲ್ಲಿ ಅನ್ಯಾಯ ಮಾಡಲಾಗುತ್ತಿದೆ. ಪೌರ ಕಾರ್ಮಿಕರಿಗೆ ಕಳೆದ 3 ತಿಂಗಳಿಂದ ವೇತನ ನೀಡಿಲ್ಲ. ಮನೆ-ಮನೆ ಕಸ ಸಂಗ್ರಹಿಸುವ ಟಂಟಂ ಚಾಲಕರಿಗೆ 4 ತಿಂಗಳ ವೇತನ ನೀಡದೇ ಗುತ್ತಿಗೆದಾರರು ಹಂಸೆ ನೀಡುತ್ತಿದ್ದು ಪಾಲಿಕೆ ಅಧಿಧಿಕಾರಿಗಳು ಕೂಡಲೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. 

ನಂತರ ಅಪರ ಜಿಲ್ಲಾಧಿಕಾರಿ ಡಾ| ಎಚ್‌.ಬೂದೆಪ್ಪ ಅವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ದಸ್ತಗೀರ್‌ ಸಾಲೋಟಗಿ, ದಯಾನಂದ ಅಲಿಯಾಬಾದ, ಭಾಸ್ಕರ್‌ ಬೋರಗಿ, ವಿಜಯಕುಮಾರ ಬೆಳ್ಳುಂಡಗಿ, ಗೋವಿಂದ ನಾಯಕ, ತಿಮ್ಮವ್ವ ಮುದ್ದೇಬಿಹಾಳ, ರುಕ್ಮವ್ವ ವಾಘೊರೆ, ದುರ್ಗವ್ವ ಗೊಲ್ಲರ, ಭಾರತಿ ಮಾದರ, ದೀಪಾ ಮಾದರ, ಸದಾಶಿವ ಚಂಚಲಕರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next