Advertisement
ಮತ್ತೂಂದೆಡೆ, ಪ್ರಧಾನಿ ಮೋದಿ ತಮಿಳುನಾಡು ಭೇಟಿ ಖಂಡಿಸಿ ವಿವಿಧ ತಮಿಳು ಸಂಘಟನೆಗಳು ಚೆನ್ನೈ ಏರ್‌ಪೋರ್ಟ್‌ನಲ್ಲೇ ಕಪ್ಪುಬಾವುಟ ಪ್ರದರ್ಶಿಸಿ, ಪ್ರತಿಭಟನೆ ನಡೆಸಿವೆ. ಜತೆಗೆ, “ಗೋ ಬ್ಯಾಕ್ ಮೋದಿ’ ಎಂದು ಘೋಷಣೆಗಳನ್ನೂ ಕೂಗಿವೆ. ಡಿಎಂಕೆ ನೇತೃತ್ವದಲ್ಲಿ ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು ಕಪ್ಪು ಬಟ್ಟೆಗಳನ್ನು ಧರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡವು. ಡಿಎಂಕೆ ನಾಯಕ ಮನೆಗಳ ಮೇಲೆಯೂ ಕಪ್ಪು ಬಾವುಟಗಳನ್ನು ಹಾರಿಸಲಾಗಿತ್ತು. ಗಾಲಿ ಕುರ್ಚಿಯಲ್ಲಿರುವ ಡಿಎಂಕೆ ವರಿಷ್ಠ ಕರುಣಾನಿಧಿ ಅವರೂ ಪ್ರತಿಭಟನಾ ಸೂಚಕವಾಗಿ ಕಪ್ಪು ಶರ್ಟ್ ಧರಿಸಿದ್ದರು. ಇದೇ ವೇಳೆ, ಮಂಡಳಿ ರಚಿಸುವಂತೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಸಿಎಂ ಪಳನಿಸ್ವಾಮಿ ಅವರು ಮನವಿ ಪತ್ರ ನೀಡಿದ್ದಾರೆ. ಜತೆಗೆ, ಕಾವೇರಿ ನದಿ ಮುಖಜ ಭೂಮಿಯ ರೈತರು ನೀರಾವರಿಗೆ ಕಾವೇರಿ ನದಿಯನ್ನೇ ಅವಲಂಬಿಸಿದ್ದಾರೆ ಎಂದ ಇದೇ ವೇಳೆ ತಿಳಿಸಿದ್ದಾರೆ.
ಕಮಲ್ ಹಾಸನ್, ಮಕ್ಕಳ್ ನೀಧಿ ಮಯ್ಯಂ ಸ್ಥಾಪಕ