ಹುಳಿಯಾರು: ಅಕ್ರಮ ಮಣ್ಣು ಸಾಗಾಟ ನಿಲ್ಲಿಸಲು ರಸ್ತೆಗೆ ಅಡ್ಡವಾಗಿ ಕಲ್ಲುಗಳನ್ನು ನೆಟ್ಟು ಪ್ರತಿಭಟಿಸಿದ ಘಟನೆ ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ವೈ.ಎಸ್.ಪಾಳ್ಯದಲ್ಲಿ ನಡೆಯಿತು.
ಹುಳಿಯಾರು ಕೆರೆಯಿಂದ ಈ ರಸ್ತೆಯ ಮೂಲಕ ಅಕ್ರಮವಾಗಿ ಇಟ್ಟಿಗೆ ಫ್ಯಾಕ್ಟರಿಗಳಿಗೆ ಮಣ್ಣು ಸಾಗಿಸುತ್ತಿದ್ದಾರೆ. ಮೊದಮೊದಲು ಆಗೊಂದು ಈಗೊಂದು ಟ್ರ್ಯಾಕ್ಟರ್ ಮಣ್ಣು ಸಾಗಿಸುತ್ತಿದ್ದರು. ಆಗ ಸುಮ್ಮಿನಿದ್ದ ಪರಿಣಾಮಕೆರೆಯಲ್ಲಿ ಐದಾರು ಜೆಸಿಬಿ ಹಾಕಿ ಹತ್ತದಿನೈದುಟ್ರ್ಯಾಕ್ಟರ್, ಏಳೆಂಟು ಟಿಪ್ಪರ್ ಲಾರಿ ಮೂಲಕ ಮಣ್ಣು ಸಾಗಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಹಗಲಿರುಳೆನ್ನದೆ ಈ ರಸ್ತೆಯ ಮೂಲಕ ಮಣ್ಣು ತುಂಬಿದ ವಾಹನಗಳು ಓಡಾಡುತ್ತಿರುವುದ ರಿಂದ ರಸ್ತೆಯಲ್ಲಿ ಮಣ್ಣು ಬಿದ್ದು ಮಳೆಗಾಲದಲ್ಲಿಕೆಸರು ಗದ್ದೆಯಾಗುತ್ತದೆ. ಬೇಸಿಗೆ ಕಾಲದಲ್ಲಿಧೂಳು ಆವರಿಸುತ್ತದೆ. ಪರಿಣಾಮ ಶಾಲಾಮಕ್ಕಳಿಗೆ ಓಡಾಡಲು, ಬಿಸಿಯೂಟ ತಿನ್ನಲು,ಆಟವಾಡಲು ತೊಂದರೆಯಾಗುತ್ತಿದೆ ಎಂದು ಪೋಷಕರು ಆರೋಪಿಸಿದರು.
ಅನೇಕ ಕಾಯಿಲೆಗಳಿಗೆ ತುತ್ತು: ಇದೇ ರಸ್ತೆಯಲ್ಲಿರುವ ಶುದ್ಧ ನೀರಿನ ಘಟಕದಲ್ಲಿ ನೀರು ಹಿಡಿಯುವಾಗ ನೀರಿನೊಳಗೆ ಧೂಳು ಬಿದ್ದುಕಲುಷಿತವಾಗುತ್ತಿದೆ. ರಸ್ತೆಯ ಅಕ್ಕಪಕ್ಕದಲ್ಲಿರುವಮನೆಯೊಳಗೆ ಧೂಳು ನುಗ್ಗುತ್ತಿದೆ.ತೋಟಕ್ಕೆಓಡಾಡುವವರು ಧೂಳು ಕುಡಿಯುವುದುಅನಿವಾರ್ಯ ಕರ್ಮವಾಗಿ ಮಾರ್ಪಟ್ಟು ಅನೇಕಕಾಯಿಲೆಗಳಿಗೆ ತುತ್ತಾಗುವಂತ್ತಾಗಿದೆ ಎಂದು ಆರೋಪಿಸಿದರು.
ಗ್ರಾಮಸ್ಥರಿಗೆ ಬೆದರಿಕೆ: ಬಹುಮುಖ್ಯವಾಗಿ ಹುಳಿಯಾರು ಕೆರೆಯಿಂದ ಮಣ್ಣು ತುಂಬಿಕೊಂಡು ಟ್ರ್ಯಾಕ್ಟರ್‌ಗಳು ಓಡಾಡುತ್ತಿರುವ ರಸ್ತೆಯುವಾಸ್ತವವಾಗಿ ಸರ್ಕಾರಿ ರಸ್ತೆಯೂ ಅಲ್ಲ, ಕರಾಬು ಜಾಗವೂ ಅಲ್ಲ. ಹಾಗಾಗಿ, ಅಕ್ರಮ ಮಣ್ಣಿನ ಟ್ರ್ಯಾಕ್ಟರ್ ಓಡಾಡದಿರಲೆಂದು ಅಡ್ಡಲಾಗಿಕಲ್ಲುಗಳನ್ನು ನೆಟ್ಟಿದ್ದೇವೆ. ಇದರಿಂದ ಅಕ್ರಮ ಮಣ್ಣು ಸಾಕಾಣಿಕೆದಾರರು ಕೋಪಗೊಂಡು ಕಡ್ಡಿವ್ಯಾಪಾರಕ್ಕೆ ನಮ್ಮೂರಿಗೆ ಬನ್ನಿ ಆಗ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು.
ದೂರು ನೀಡಿದರೂ ಸ್ಪಂದಿಸಿಲ್ಲ: ಈ ಬಗ್ಗೆ ತಹಶೀಲ್ದಾರ್, ಪಿಎಸ್‌ಐ ಹಾಗೂ ಪಂಚಾಯ್ತಿ ಅಧಿಕಾರಿಗಳಿಗೆ ದೂರು ನೀಡಿದರೂ ಇದೂವರೆಗೂ ಸ್ಪಂದಿಸಿಲ್ಲ. ಪರಿಣಾಮ ಇಲ್ಲಿನ ಜನ ಕೊರೊನಾದಿಂದ ರೋಗಕ್ಕೆ ತುತ್ತಾಗುತ್ತಿಲ್ಲ,ಟ್ರ್ಯಾಕ್ಟರ್ ಓಡಾಟದಿಂದ ಏಳುತ್ತಿರುವ ಧೂಳಿನಿಂದರೋಗಕ್ಕೆ ತುತ್ತಾಗುತ್ತಿದ್ದಾರೆ. ಇನ್ನಾದರೂ ಈ ಅಕ್ರಮ ಮಣ್ಣು ಸಾಗಾಟಕ್ಕೆ ಕಡಿವಾಣ ಹಾಕುವಂತೆ ಇಲ್ಲಿನ ನಿವಾಸಿ ಒತ್ತಾಯಿಸಿದ್ದಾರೆ.