Advertisement

ಕನಿಷ್ಠ ವೇತನಕ್ಕೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರ ಪ್ರತಿಭಟನೆ 

10:46 AM Feb 06, 2018 | Harsha Rao |

ಬೆಂಗಳೂರು : ಕನಿಷ್ಠ ವೇತನಕ್ಕೆ ಒತ್ತಾಯಿಸಿ ಸಾವಿರಾರು ಬಿಸಿಯೂಟ ಕಾರ್ಯಕರ್ತೆಯರು ಶಾಸಕ ತನ್ವಿರ್ ಸೇಠ್ ಮನೆಗೆ ಮುತ್ತಿಗೆ ಹಾಕಲು ಹೊರಟಿದ್ದಾರೆ. 

Advertisement

ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ಹೊರಟು ಸಚಿವರ ಮನೆಗೆ ಬೃಹತ್ ಪ್ರತಿಭಟನಾ ರಾಲಿಯಲ್ಲಿ ಹೋರಟ ಕಾರ್ಯಕರ್ತೆಯರನ್ನು ತಡೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. 

ಪ್ರತೀ ತಿಂಗಳು 5200 ವೇತನ ನೀಡುವ ಭರವಸೆಯನ್ನು ಸಚಿವರು ಈ ಹಿಂದಿನ ಪ್ರತಿಭಟನೆ ಸಂದರ್ಭದಲ್ಲಿ ನೀಡಿದ್ದರು. ಭರವಸೆ ಈಡೇರದ ಹಿನ್ನೆಲೆಯಲ್ಲಿ ಮುತ್ತಿಗೆ ಹಾಕಲು ಕಾರ್ಯಕರ್ತೆಯರ ಯತ್ನ. 

ಮಹಿಳೆ ಅಸ್ವಸ್ಥ : ರಾಲಿ ವೇಳೆ ಕಾರ್ಯಕರ್ತೆಯೊಬ್ಬರು ಅಸ್ವಸ್ಥಗೊಂಡಿದ್ದು ಅವರನ್ನು ಪೋಲೀಸರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.   

Advertisement

Udayavani is now on Telegram. Click here to join our channel and stay updated with the latest news.

Next