Advertisement

ಪುಲ್ವಾಮಾ ಉಗ್ರ ದಾಳಿ: ಬಿಹಾರದ ವಿವಿಧೆಡೆ ಜನಾಕ್ರೋಶ, ಪ್ರತಿಭಟನೆ

12:35 PM Feb 15, 2019 | udayavani editorial |

ಪಟ್ನಾ : ಪುಲ್ವಾಮಾ ಉಗ್ರ ದಾಳಿಯಲ್ಲಿ  ಹುತಾತ್ಮರಾಗಿರುವ 40 ಯೋಧರ ಪೈಕಿ ಇಬ್ಬರು ಬಿಹಾರದವರಾಗಿದ್ದು ಈ ಕಾರಣಕ್ಕಾಗಿ ಬಿಹಾರದ ಅನೇಕ ಭಾಗಗಳಲ್ಲಿಂದು ಆಕ್ರೋಶಿತ ಜನಸಮೂಹ ಬೀದಿಗಳಲ್ಲಿ ಪ್ರತಿಭಟನೆ ನಡೆಸಿತು.

Advertisement

ಮೃತ ಬಿಹಾರದ ಯೋಧರು, ಸಂಜಯ್‌ ಕುಮಾರ್‌ ಸಿನ್ಹಾ, ರತನ್‌ ಕುಮಾರ್‌ ಠಾಕೂರ್‌ ಎಂದು ತಿಳಿದು ಬಂದಿದೆ. 

ಪಾಕಿಸ್ಥಾನದ ಉನ್ನತ ಮಿಲಿಟರಿ ಮತ್ತು ರಾಜಕೀಯ ನಾಯಕರ ಫೋಟೋಗಳಿದ್ದ ಪೋಸ್ಟರ್‌ ಗಳನ್ನು ಪ್ರತಿಭಟನಕಾರರು ಎತ್ತಿ ಹಿಡಿದರು. ನೆರೆಯ ಪಾಕ್‌ ದೇಶವನ್ನು ಸಂಪೂರ್ಣ ವಾಗಿ ಬಹಿಷ್ಕರಿಸಬೇಕು ಎಂದು ಆಕ್ರೋಶಿತ ಜನಸಮೂಹ ಘೋಷಣೆ ಕೂಗಿತು. 

Advertisement

Udayavani is now on Telegram. Click here to join our channel and stay updated with the latest news.

Next