Advertisement

ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಸಂಪೂರ್ಣ ನಿಷೇಧ ಬೇಡ; ಸುಪ್ರೀಂ

02:45 PM Jul 23, 2018 | Team Udayavani |

ನವದೆಹಲಿ: ಜಂತರ್ ಮಂತರ್ ಹಾಗೂ ಇಂಡಿಯಾ ಗೇಟ್ ಸಮೀಪದ ಬೋಟ್ ಕ್ಲಬ್ ಸ್ಥಳದಲ್ಲಿ ನಡೆಸುವ ಪ್ರತಿಭಟನೆ ಹಾಗೂ ಧರಣಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ. ಈ ಮೂಲಕ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಮತ್ತೆ ಅವಕಾಶ ದೊರೆತಂತಾಗಿದೆ.

Advertisement

ಕಳೆದ ವರ್ಷ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಜಂತರ್ ಮಂತರ್ ಹಾಗೂ ಬೋಟ್ ಕ್ಲಬ್ ನಲ್ಲಿ ಪ್ರತಿಭಟನೆ ನಡೆಸುವುದನ್ನು ನಿಷೇಧಿಸಿತ್ತು. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಈ ಎರಡು ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅನುಮತಿ ನೀಡುವ ಬಗ್ಗೆ ಕಾನೂನು ರೂಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.

ನಾವು ಪ್ರತಿಭಟನಾಕಾರರ ಹಿತಾಸಕ್ತಿಯನ್ನು ಸಮತೋಲನದಿಂದ ನಿರ್ವಹಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಪೀಠ, ಜಂತರ್ ಮಂತರ್ ಹಾಗೂ ಬೋಟ್ ಕ್ಲಬ್ ನಂತಹ ಸ್ಥಳಗಳಲ್ಲಿ ಸಂಪೂರ್ಣವಾಗಿ ಪ್ರತಿಭಟನೆಯನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಹಸಿರು ನ್ಯಾಯಾಧಿಕರಣದ ನಿಷೇಧದ ಆದೇಶವನ್ನು ಪ್ರಶ್ನಿಸಿ ಮಜ್ದೂರ್ ಕಿಸಾನ್ ಶಕ್ತಿ ಸಂಘಟನೆ, ನಿವೃತ್ತ ಯೋಧರ ಚಳವಳಿ ಸಂಘಟನೆ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next