Advertisement

ಕಾರಂಜಾ ಮುಳುಗಡೆ ಸಂತ್ರಸ್ತರ ಪ್ರತಿಭಟನೆ

10:54 AM Aug 10, 2018 | |

ಬೀದರ: ಕಾರಂಜಾ ಸಂತಸ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿಯಿಂದ ಗುರುವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ಮೆರವೆಣಿಗೆ ನಡೆಸಲಾಯಿತು.

Advertisement

1972ರಲ್ಲಿ ಕೇವಲ 9 ಕೋಟಿ ವೆಚ್ಚದ ಯೋಜನೆಯ ಕಾರಂಜಾ ಜಲಾಶಯಕ್ಕೆ ಇಂದು ಕೋಟ್ಯಂತರ ರೂಪಾಯಿ ಖರ್ಚಾ ಮಾಡಲಾಗುತ್ತಿದೆ. ಸದ್ಯ ಕಾರಂಜಾ ಜಲಾಶಯದ ನೀರನ್ನು ಬೀದರ್‌, ಹುಮನಾಬಾದ, ಭಾಲ್ಕಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಕುಡಿಯಲು ಬಳಸುತ್ತಿದ್ದು, ಈ ಯೋಜನೆಗಾಗಿ ಭೂಮಿ, ಮನೆ ಕಳೆದುಕೊಂಡ ಕುಟುಂಬಗಳಿಗೆ ಮಾತ್ರ ನಾಯ ದೊರೆಯುತ್ತಿಲ್ಲ. ಸರ್ಕಾರ ತಾರತಮ್ಯ ಧೋರಣೆ ತೋರುತ್ತಿದ್ದು, ಈ ಯೋಜನೆ ಅಡಿಯಲ್ಲಿ ಕೆಲವರು ನ್ಯಾಯಾಲಯದ ಮೊರೆ ಹೋಗಿ ಸೂಕ್ತ ಪರಿಹಾರ ಪಡೆದುಕೊಂಡಿದ್ದಾರೆ. ಉಳ್ಳುವರು ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಾಧ್ಯವಿದ್ದು, ಕಡು ಬಡವರು ಹೇಗೆ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಸಾಧ್ಯ ಎಂದು ಹೋರಾಟಗಾರರು ಪ್ರಶ್ನಿಸಿದರು. ಸದ್ಯ ಸೂಕ್ತ ಪರಿಹಾರ ಪಡೆದ ರೈತರಂತೆ ಎಲ್ಲ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು. ಅಲ್ಲದೇ ವಿವಿಧ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.

ನಾಲ್ಕು ದಶಕಗಳಿಂದ ಅನೇಕ ಬಾರಿ ಹೋರಾಟ ಮಾಡುತ್ತಿದ್ದರೂ ಕೂಡ ಸರ್ಕಾರ ಗಮನ ಹರಿಸುತ್ತಿಲ್ಲ. ಈ
ಬಾರಿ ಪ್ರತಿಭಟನೆ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲಾಗುವುದು. ಒಟ್ಟು 28 ಗ್ರಾಮಗಳ ರೈತರು
ಏಕತೆಯಿಂದ ಈ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಪ್ರತಿದಿನ ಒಂದು ಗ್ರಾಮದವರು ಪ್ರತಿಭಟನೆ ನಡೆಸಲ್ಲಿದ್ದಾರೆ.
ನ್ಯಾಯ ದೊರೆಯುವವರೆಗೂ ನಿರಂತರ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿಕೊಳ್ಳಲಾಗಿದೆ ಎಂದರು.

ಪ್ರತಿ ಎಕರಿಗೆ ಅಂದಾಜು 20 ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು. ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡಬೇಕು.
ಪ್ರತಿ ಕುಟುಂಬ ಜೀವನ ನಿರ್ವಹಣೆಗೆ ಮಾಸಿಕ 50 ಸಾವಿರ ರೂಪಾಯಿ, ಪ್ರತಿ ವ್ಯಕ್ತಿಗೆ 10 ಸಾವಿರ ರೂಪಾಯಿ ನೀಡಬೇಕು. ವೈದ್ಯಕೀಯ ಖರ್ಚು ಸರಕಾರವೇ ಭರಿಸಲು ಸ್ಮಾರ್ಟ್‌ಕಾರ್ಡ್‌ ನೀಡಬೇಕು. ಕಡ್ಡಾಯವಾಗಿ ಪ್ರತಿ ಕುಟುಂಬದ ಸದಸ್ಯನಿಗೆ ಸರಕಾರಿ ನೌಕರಿ ನೀಡಬೇಕು. ರೈತರಿಗೆ ಗೃಹೋಪಯೋಗಿ ವಿದ್ಯುತ್‌ ಉಚಿತವಾಗಿ ನೀಡಬೇಕು.

ರೈತರ ಮಕ್ಕಳಿಗೆ ಉಚಿತ ಶಿಕ್ಷಣ ನೀಡಬೇಕು. ಕಾರಂಜಾ ನೀರು ಉಪಯೋಗಿಸುವವರಿಂದ ಪಡೆಯುವ ಕರದಲ್ಲಿ ಶೇ.50ರಷ್ಟು ಸಂತ್ರಸ್ತ ರೈತರಿಗೆ ನೀಡಬೇಕು. ಹೆಚ್ಚುವರಿ ಜಮೀನಿಗೆ ಪ್ರತಿ ಎಕರೆಗೆ 25 ಲಕ್ಷ ರೂಪಾಯಿಯಂತೆ ಪರಿಹಾರ ಹಣ ನೀಡಬೇಕು. ಕಾರಂಜಾ ಕಾಮಗಾರಿಗೆ ಬಿಡುಗಡೆ ಮಾಡುವ ಹಣ ತಡೆಹಿಡಿದು ಮೊದಲು ಸಂತ್ರಸ್ತ ರೈತರಿಗೆ ವಿತರಿಸಬೇಕು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದರು.

Advertisement

ಬಿಎಸ್‌ವೈ ಭೇಟಿ: ಜಿಲ್ಲಾಧಿಕಾರಿ ಕಚೇರಿ ಹತ್ತಿರ ಕಾರಂಜಾ ಸಂತ್ರಸ್ತರು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಭೇಟಿ ನೀಡಿ ಹೋರಾಟಗಾರರ ಜೊತೆ ಮಾತುಕತೆ ನಡೆಸಿದರು. ಈ ವೇಳೆ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ ಕಾರಂಜಾ ಸಂತ್ರಸ್ತರ ಕುರಿತು ವಿವರಣೆ ನೀಡಿದರು. ಈ ಕುರಿತು ಸರ್ಕಾರದ ಗಮನ ಸೇಳೆಯುವುದಾಗಿ ಬಿಎಸ್‌ವೈ ಭರವಸೆ ನೀಡಿದರು. ಹೋರಾಟ ಸಮಿತಿಯಿಂದ ಯಡಿಯೂರಪ್ಪ ಅವರಿಗೂ ಮನವಿ ಸಲ್ಲಿಸಲಾಯಿತು. ಬೆಂಗಳೂರಿಗೆ ತೆರಳಿ ಅಲ್ಲಿಯೂ ಹೋರಾಟ ಮಾಡಲಾಗುವುದು ಎಂದು ಕಾರಂಜಾ ಮುಳುಗಡೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ, ಕಾರ್ಯಾಧ್ಯಕ್ಷ ಜಿಲಾನಿ ಪಟೇಲ ಹಿಲಾಲಪೂರ, ಪ್ರ.ಕಾರ್ಯದರ್ಶಿ ನಾಗಶೆಟ್ಟೆಪ್ಪಾ ಹಚ್ಚಿ, ದತ್ತಾತ್ರೇಯ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ ಬಸವರಾಜ ಮೂಲಗೆ ಅವರು ತಿಳಿಸಿದರು. 

ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹೊಚ್ಚಕನಳ್ಳಿ, ಕಾರ್ಯಾಧ್ಯಕ್ಷ ಜಿಲಾನಿ ಪಟೇಲ ಹಿಲಾಲಪೂರ, ಪ್ರ. ಕಾರ್ಯದರ್ಶಿ ನಾಗಶೆಟ್ಟೆಪ್ಪಾ ಹಚ್ಚಿ, ದತ್ತಾತ್ರೆಯ ಕುಲಕರ್ಣಿ, ವೀರಭದ್ರಪ್ಪ ಉಪ್ಪಿನ ಬಸವರಾಜ ಮೂಲಗೆ ಸೇರಿದಂತೆ ನೂರಾರು ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next